ಇರಾನ್ ಈಗ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆ ರಾಷ್ಟ್ರ

ಇರಾನ್ ಇದೇ ಮೊದಲ ಬಾರಿಗೆ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ರಫ್ತು ಮಾಡುವ ದೇಶವಾಗಿ ಹೊರಹೊಮ್ಮಿದೆ. ಸೌದಿ ಅರೇಬಿಯಾವನ್ನು ಹಿಂದಿಕ್ಕುವ ಮೂಲಕ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆ ದೇಶವೆನಿಸಿದೆ. 2010-11 ರವರೆಗೆ ಇರಾನ್ ಭಾರತಕ್ಕೆ ಕಚ್ಚಾ ತೈಲ ರಫ್ತು ಮಾಡುವ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿತ್ತು. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳು ಇರಾನ್ ಮೇಲೆ ನಿರ್ಬಂಧ ಹೇರಿದ ಕಾರಣ ಇರಾಕ್ ಎರಡನೇ ಸ್ಥಾನದಲ್ಲಿತ್ತು.

  • ಜನವರಿ 2016 ರಲ್ಲಿ ಇರಾನ್ ಮೇಲಿನ ನಿರ್ಬಂಧ ತೆರವಾದ ಮೇಲೆ ಇರಾನ್ ನಿಂದ ಕಚ್ಚಾ ತೈಲ ಆಮದಿನಲ್ಲಿ ಗಣನೀಯ ಏರಿಕೆಯಾಗಿದೆ. ಇರಾನ್ ನಿಂದ ಕಚ್ಚಾತೈಲ ಆಮದು ಅಕ್ಟೋಬರ್ 2016 ರಲ್ಲಿ ಅಕ್ಟೋಬರ್ 2015ಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ.
  • ಅಕ್ಟೋಬರ್ 2016 ರಲ್ಲಿ ಇರಾನ್ ನಿಂದ ಭಾರತ 7,89,000 ಬಿಪಿಡಿ (ಬ್ಯಾರಲ್ ಪರ್ ಡೆ) ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಸೌದಿ ಅರೇಬಿಯಾದಿಂದ 6,79,000 ಬಿಪಿಡಿ (ಬ್ಯಾರಲ್ ಪರ್ ಡೆ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ.

ಹೆಚ್ಚಳಕ್ಕೆ ಕಾರಣ:

  • ಇರಾನ್ ದೇಶ ಸುಮಾರು 4 ಮಿಲಿಯನ್ ಬಿಪಿಡಿ (ಬ್ಯಾರಲ್ ಪರ್ ಡೆ ಕಚ್ಚಾ ತೈಲವನ್ನು ಉತ್ಪಾದಿಸುತ್ತದೆ. ಅದರಲ್ಲಿ 2.4 ಮಿಲಿಯನ್ ಬಿಪಿಡಿ ಕಚ್ಚಾ ತೈಲವನ್ನು ರಫ್ತು ಮಾಡುತ್ತದೆ. ಆದರೆ ಇರಾನ್ ಪ್ರತಿಸ್ಪರ್ದಿ ಎನಿಸಿರುವ ಸೌದಿ ಅರೇಬಿಯಾ ಕಚ್ಚಾ ತೈಲ ರಫ್ತಿಗಿಂತ ತೈಲ ಶುದ್ದೀಕರಣಕ್ಕೆ ಹೆಚ್ಚು ಮಹತ್ವ ನೀಡಿದೆ.
  • ಇರಾನ್ ಕಚ್ಚಾ ತೈಲ ದರವನ್ನು ಕಡಿಮೆಗೊಳಿಸಿರುವುದು ಭಾರತವನ್ನು ಆಕರ್ಷಿಸಲು ಮತ್ತೊಂದು ಕಾರಣವಾಗಿದೆ.

ಜೀಲಂ-ತಾವಿ ಪ್ರವಾಹ ಚೇತರಿಕೆ ಯೋಜನೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಚಾಲನೆ

ಜಮ್ಮು ಮತ್ತು ಕಾಶ್ಮೀರದಲ್ಲಿ 2014 ರಲ್ಲಿ ಸಂಭವಿಸಿದ ಭೀಕರ ಪ್ರವಾಹ ನಂತರ ರಾಜ್ಯದಲ್ಲಿ ಮೂಲಸೌಕರ್ಯ ಮತ್ತು ಪುನರ್ವಸತಿ ಕಲ್ಪಿಸಲು ಜೀಲಂ-ತಾವಿ ಪ್ರವಾಹ ಚೇತರಿಕೆ ಯೋಜನೆಯನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆರಂಭಿಸಿದೆ. ವಿಶ್ವಬ್ಯಾಂಕ್ ನೆರವಿನ ಈ ಯೋಜನೆಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ್ ಮುಪ್ತಿ ರವರು ಚಾಲನೆ ನೀಡಿದರು.

  • ಮಾಜಿ ಮುಖ್ಯಮಂತ್ರಿ ದಿವಂಗತ ಮುಫ್ತಿ ಮುಹಮ್ಮದ್ ಸಯೀದ್ ರವರು 2014ರ ಪ್ರವಾಹ ನಂತರ ಈ ಯೋಜನೆಯ ಬಗ್ಗೆ ಪರಿಕಲ್ಪನೆ ಮಾಡಿದ್ದರು.
  • ಪ್ರವಾಹದ ನಂತರ ಸಾರ್ವಜನಿಕರ ಮೂಲಭೂತ ಮತ್ತು ಜೀವನೋಪಾಯದ ಮೇಲೆ ತೀವ್ರ ಹಾನಿಕಾರಕ ಪರಿಣಾಮ ಬೀರಿದ್ದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪುನರ್ ವಸತಿ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು.
  • ಜಮ್ಮು ಮತ್ತು ಕಾಶ್ಮೀರದ ಪ್ರವಾಹ ಪೀಡಿತ 20 ಜಿಲ್ಲೆಗಳಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ ವಿಶ್ವಬ್ಯಾಂಕ್ ನೊಂದಿಗೆ 250 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿಹಾಕಿದೆ.

ಹಿನ್ನಲೆ:

ಸೆಪ್ಟೆಂಬರ್ 2014 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಜೀಲಂ, ಚೀನಾಬ್ ಮತ್ತು ತಾವಿ ನದಿ ಮತ್ತು ಇವುಗಳ ಉಪನದಿಗಳು ಅಪಾಯದ ಮಟ್ಟ ಮೀರಿ ಹರಿದು ಪ್ರವಾಹ ಸೃಷ್ಟಿಸಿದ್ದವು.  ಇದರಿಂದ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗಿತ್ತು, ಅಲ್ಲದೇ ಅಪಾರ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗಿತ್ತು.

ರಾಷ್ಟ್ರೀಯ ವಿದ್ಯಾರ್ಥಿ ಸ್ಟಾರ್ಟ್ ಆಫ್ ನೀತಿಗೆ ಪ್ರಣಬ್ ಮುಖರ್ಜಿ ಚಾಲನೆ

ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಪ್ರೇರೆಪಿತ ಸ್ಟಾರ್ಟ್ ಆಫ್ ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು ರಾಷ್ಟ್ರೀಯ ವಿದ್ಯಾರ್ಥಿ ಸ್ಟಾರ್ಟ್ ಆಫ್ ನೀತಿ (National Student Start Up Policy)ಗೆ ಚಾಲನೆ ನೀಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಎರಡನೇ ವಿಸಿಟರ್ಸ್ ಕಾನ್ಪರೆನ್ಸ್ ನಲ್ಲಿ ಇದಕ್ಕೆ ಚಾಲನೆ ನೀಡಲಾಯಿತು.

ಪ್ರಮುಖಾಂಶಗಳು:

  • ರಾಷ್ಟ್ರೀಯ ವಿದ್ಯಾರ್ಥಿ ಸ್ಟಾರ್ಟ್ ಆಫ್ ನೀತಿಯನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ರೂಪಿಸಿದೆ.
  • ಮುಂದಿನ 10 ವರ್ಷದಲ್ಲಿ ಒಂದು ಲಕ್ಷ ತಂತ್ರಜ್ಞಾನ ಆಧರಿತ ಸ್ಟಾರ್ಟ್ ಆಫ್ ಮತ್ತು ಮಿಲಿಯನ್ ಉದ್ಯೋಗವನ್ನು ಸೃಷ್ಟಿಸುವ ಗುರಿಯನ್ನು ಈ ನೀತಿಯಡಿ ಹೊಂದಲಾಗಿದೆ.
  • ತಂತ್ರಜ್ಞಾನ ಆಧರಿತ ಸ್ಟಾರ್ಟ್ ಆಫ್ ಆರಂಭಿಸುವ ಮೂಲಕ ದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ವಿದ್ಯಾರ್ಥಿಗಳು ಕೊಡುಗೆಯನ್ನು ಪ್ರೇರೆಪಿಸುವುದು ಸಹ ಇದರ ಉದ್ದೇಶ.
  • ವಿದ್ಯಾರ್ಥಿಗಳಲ್ಲಿ ಚಿಂತನ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಉದ್ಯಮ ವಾತಾವರಣವನ್ನು ಇದು ಸೃಷ್ಟಿಸಲಿದೆ.

Leave a Comment

This site uses Akismet to reduce spam. Learn how your comment data is processed.