ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-27,28, 2016

Question 1

1.ಭಾರತೀಯ ರಿಸರ್ವ್ ಬ್ಯಾಂಕ್ ಇಸ್ಲಾಂ ಧರ್ಮದ ಶರಿಯಾ ಬ್ಯಾಂಕಿಂಗ್ ತೆರೆಯಲು ಆಸಕ್ತಿ ತೋರಿದೆ. ಶರಿಯಾ ಬ್ಯಾಂಕಿಂಗ್ ಎಂದರೆ ________?

A
ಬಡ್ಡಿ ಇಲ್ಲದೆ ಹಣ ನೀಡುವುದು
B
ಬಡವರಿಗೆ ಮಾತ್ರ ಆರ್ಥಿಕ ನೆರವು ನೀಡುವುದು
C
ಅಧಿಕ ಬಡ್ಡಿ ಆದರೆ ಅಲ್ಪಾವದಿ ಸಾಲ ನೀಡುವುದು
D
ಅಲ್ಪ ಬಡ್ಡಿ ಆದರೆ ದೀರ್ಘಾವದಿ ಸಾಲ ನೀಡುವುದು
Question 1 Explanation: 
ಬಡ್ಡಿ ಇಲ್ಲದೆ ಹಣ ನೀಡುವುದು:

ಶರಿಯಾ ಬ್ಯಾಂಕಿಂಗ್ ಎಂದರೆ ಇಸ್ಲಾಂ ಹಣಕಾಸು ನೀತಿಗಳ ಮೇಲೆ ಕಾರ್ಯನಿರ್ವಹಿಸುವ ಬ್ಯಾಂಕಿಂಗ್ ವ್ಯವಸ್ಥೆ ಅಂದರೆ ಬಡ್ಡಿ ಇಲ್ಲದೆ ಹಣ ನೀಡುವುದು ಎಂದರ್ಥ. ಹಾಗೆ ಇಟ್ಟ ಹಣವನ್ನು ಜೂಜು, ಬೆಟ್ಟಿಂಗ್, ನಿಷೇದಿತ ಮದ್ಯ ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿಸುವಂತಿಲ್ಲ.

Question 2

2. ದೇಶದ ಮೊದಲ ಡಿಜಿಟಲ್ ಹಳ್ಳಿ “ಅಕೊಡರ (Akodara)” ಯಾವ ರಾಜ್ಯದಲ್ಲಿದೆ?

A
ರಾಜಸ್ತಾನ
B
ಗುಜರಾತ್
C
ಮಧ್ಯ ಪ್ರದೇಶ
D
ಕೇರಳ
Question 2 Explanation: 
ಗುಜರಾತ್:

ಗುಜರಾತ್ನ ಸಬರ್ಕಾಂತಾ ಜಿಲ್ಲೆಯ ಅಕೊಡರಾ ಗ್ರಾಮ ದೇಶದ ಮೊದಲ ಡಿಜಿಟಲ್ ಗ್ರಾಮವಾಗಿದೆ. ನರೇಂದ್ರ ಮೋದಿ ರವರ ಸೂಚನೆ ಮೇರೆಗೆ ಐಸಿಐಸಿಐ ಬ್ಯಾಂಕ್ ಈ ಗ್ರಾಮವನ್ನು ಡಿಜಿಟಲ್ ಗ್ರಾಮವನ್ನಾಗಿ ಪರಿವರ್ತಿಸಿದೆ. ಈ ಗ್ರಾಮದಲ್ಲಿ ಬ್ಯಾಂಕಿಂಗ್ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ನಗದು ರಹಿತ ರೂಪದಲ್ಲಿ ಅಂದರೆ ಚೆಕ್, ಡಿಡಿ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ನಡೆಸಲಾಗುತ್ತಿದೆ.

Question 3

3. 2016 ಯುನೆಸ್ಕೊ ಸಲೊನ್ ಯೂಥ್ ವಿಡಿಯೋ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಭಾರತ ಕಿರು ಸಿನಿಮಾ ಯಾವುದು?

A
ಮ್ಯಾಜಿಕಲ್ ಪಿಯಾನೊ
B
ಮುರ್ಗ
C
ಅಂಬಾನಿ ದಿ ಇನ್ವೆಸ್ಟರ್
D
ಬೇರು
Question 3 Explanation: 
ಮ್ಯಾಜಿಕಲ್ ಪಿಯಾನೊ:

ಟೂನ್ಜ್ ಮೀಡಿಯಾ ಗ್ರೂಫ್ ನ “ಮ್ಯಾಜಿಕಲ್ ಪಿಯಾನೊ” ಕಿರು ಚಿತ್ರವು 2016 ಯುನೆಸ್ಕೊ ಸಲೊನ್ ಯೂಥ್ ವಿಡಿಯೋ (UNESCO Salon Youth Video) ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಗುವೊಂದರ ಹುಟ್ಟುಹಬ್ಬಕ್ಕೆ ಮ್ಯಾಜಿಕಲ್ ಪಿಯಾನೊವನ್ನು ಉಡುಗೊರೆಯಾಗಿ ಪಡೆಯುವುದು ಚಿತ್ರದ ಕಥೆ ಸಾರಾಂಶ. ಈ ಮ್ಯಾಜಿಕಲ್ ಪಿಯಾನೊ ಬಳಸಿ ಮಗು ಇಡೀ ವಿಶ್ವವನ್ನೇ ಸ್ವಚ್ಚಗೊಳಿಸುವ ಕಥೆಯನ್ನು ಇದು ಒಳಗೊಂಡಿದೆ. ಈ ವಿಶಿಷ್ಟ ಕಥೆಯನ್ನು ಉತ್ತರಪ್ರದೇಶದ ಆಗ್ರಾ ಮೂಲದ ವಿದ್ಯಾರ್ಥಿ ಮಯುಲ್ ವರ್ಮಾ ಬರೆದಿದ್ದಾರೆ.

Question 4

4. ಭಾರತದ “ಸಚಿನ್ ಸಿಂಗ್” ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

A
ಕ್ರಿಕೆಟ್
B
ಹಾಕಿ
C
ಬಾಕ್ಸಿಂಗ್
D
ಫುಟ್ಬಾಲ್
Question 4 Explanation: 
ಬಾಕ್ಸಿಂಗ್:

ಸಚಿನ್ ಸಿಂಗ್ ಭಾರತದ ಉದಯೋನ್ಮಖ ಬಾಕ್ಸರ್. ಇತ್ತೀಚೆಗೆ ಇವರು ಎಐಬಿಎ ಯೂಥ್ ವರ್ಲ್ಡ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಈ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಗೆದ್ದ ಭಾರತದ ಮೂರನೇಯವರು ಎಂಬ ಗೌರವಕ್ಕೆ ಪಾತ್ರರಾದರು. ರಷ್ಯಾದ ಪೀಟರ್ಸಬರ್ಗ್ ನಲ್ಲಿ ನಡೆದ ಚಾಂಪಿಯನ್ ಷಿಪ್ ನ ಫೈನಲ್ ಪಂದ್ಯದಲ್ಲಿ ಸಚಿನ್ ರವರು ಕ್ಯೂಬಾದ ರಾಷ್ಟ್ರೀಯ ಚಾಂಪಿಯನ್ ಜಾರ್ಜ್ ಗ್ರಿನನ್ ರವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.

Question 5

5. ಇತ್ತೀಚೆಗೆ ನಿಧನರಾದ ಆನಂದ್ ರಾವ್ ಯಾವ ಭಾಷೆಯ ಪ್ರಸಿದ್ದ ಸಾಹಿತಿ?

A
ಹಿಂದಿ
B
ಮರಾಠಿ
C
ಗುಜರಾತಿ
D
ತೆಲುಗು
Question 5 Explanation: 
ಮರಾಠಿ:

ಪ್ರಸಿದ್ದ ಮರಾಠಿ ಸಾಹಿತಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆನಂದ್ ರಾವ್ ನಿಧನರಾದರು. ಅವರ ಆತ್ಮಚರಿತ್ರ “ಝೊಂಬಿ (Zombi)”ಗೆ 1991 ರಲ್ಲಿ ಸಾಹಿತ್ಯ ಪ್ರಶಸ್ತಿ ಲಭಿಸಿತ್ತು. ರಾವ್ ರವರು ಸುಮಾರು 40ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದರು.

Question 6

6. ಪಾಕಿಸ್ತಾನ ಸೇನಾ ಪಡೆಯ ಮುಖ್ಯಸ್ಥರಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?

A
ಜಾವೇದ್ ಬಾಜ್ವ
B
ರಫೀಕ್ ಅಹಮ್ಮದ್
C
ಜುಬೈರ್ ಹಯಾತ್
D
ಮುಹಮ್ಮದ್ ಖರೇಷಿ
Question 6 Explanation: 
ಜಾವೇದ್ ಬಾಜ್ವ:

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವ್ಯವಹಾರಗಳ ತಜ್ಞರಾಗಿರುವ ಜನರಲ್ ಖಮರ್ ಜಾವೇದ್ ಬಜ್ವಾ ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪಾಕ್ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ರಹೀಲ್ ಷರೀಫ್ ಅವರ ಸೇವಾವಧಿ ಇಂದು ಅಂತ್ಯಗೊಂಡಿದ್ದು, ವಿಶ್ವದ ಆರನೇ ಅತಿ ದೊಡ್ಡ ಸೇನಾಪಡೆಯ ನೂತನ ಸಾರಥಿಯಾಗಿ ನೇಮಕಗೊಂಡಿರುವ 57 ವರ್ಷದ ಬಜ್ವಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

Question 7

7.ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (LBSNAA)ದ ನೂತನ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?

A
ಶ್ರೀನಿವಾಸ್ ಠಾಗೂರ್
B
ಉಪ್ಮ ಚೌಧರಿ
C
ರಾಜೀವ್ ಕಪೂರ್
D
ಶಾಂತಿ ಭೂಷಣ್
Question 7 Explanation: 
ಉಪ್ಮ ಚೌಧರಿ:

ಉಪ್ಮ ಚೌಧರಿ, 1983 ಬ್ಯಾಚ್ ನ ಹಿರಿಯ ಐಎಎಸ್ ಅಧಿಕಾರಿ ರವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ನ ನೂತನ ನಿರ್ದೇಶಕರಾಗಿ ನೇಮಕಮಾಡಲಾಗಿದೆ. ಆ ಮೂಲಕ ಚೌಧರಿ ರವರು LBSNAA ದ ಮೊದಲ ಮಹಿಳಾ ನಿರ್ದೇಶಕಿಯಾಗಿದ್ದಾರೆ. ರಾಜೀವ್ ಕಪೂರ್ ರವರ ಉತ್ತರಾಧಿಕಾರಿಯಾಗಿ ಇವರನ್ನು ನೇಮಕಮಾಡಲಾಗಿದೆ.

Question 8

8. ಈ ಕೆಳಗಿನವುಗಳನ್ನು ಗಮನಿಸಿ:

I) ಕಡಲೇಕಾಯಿ

II) ಹತ್ತಿ

III) ಭತ್ತ

IV) ಗೋಧಿ

ಈ ಮೇಲಿನ ಯಾವುವು ಖಾರೀಫ್ ಬೆಳೆ ಆಗಿವೆ?

A
I, II & III
B
I, II & IV
C
II, III & IV
D
I, II, III & IV
Question 8 Explanation: 
I, II & III
Question 9

9. ಈ ಕೆಳಗಿನ ಯಾವ ರಾಜ್ಯ ದೇಶದ ಮೊದಲ ನಗದು ರಹಿತ ಪಾವತಿ ರಾಜ್ಯ ಎಂಬ ಗೌರವಕ್ಕೆ ಶೀಘ್ರದಲ್ಲೇ ಪಾತ್ರವಾಗಲಿದೆ?

A
ಸಿಕ್ಕಿಂ
B
ಗೋವಾ
C
ತ್ರಿಪುರ
D
ಅರುಣಾಚಲ ಪ್ರದೇಶ
Question 9 Explanation: 
ಗೋವಾ:

ಡಿ.31ರಿಂದ ಗೋವಾ ರಾಜ್ಯ ದೇಶದ ಮೊದಲ ನಗದು ರಹಿತ ಪಾವತಿ ರಾಜ್ಯವಾಗಲಿದೆ. ಆ ಮೂಲಕ ಗೋವಾದಲ್ಲಿ ಮೀನು, ತರಕಾರಿ ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಲು ಮೊಬೈಲ್ ಬಟನ್ ಒತ್ತಿದರೆ ಸಾಕು ವ್ಯಾಪಾರ ಮಾಡಿ ಮುಗಿಸಬಹುದು. ವ್ಯಾಪಾರ ಮಾಡಿದ ಹಣ ನೇರವಾಗಿ ವ್ಯಾಪಾರಿಯ ಖಾತೆಗೆ ಜಮೆಯಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ನಗದು ರಹಿತ ವ್ಯಾಪಾರದ ಬಗ್ಗೆ ನಾಗರಿಕರು ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳಲ್ಲಿ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಮಾಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ.

Question 10

10. ಯುನೈಟೆಡ್ ನೇಷನ್ಸ್ ಕಮೀಷನ್ ಆನ್ ಇಂಟರ್ನ್ಯಾಷನಲ್ ಟ್ರೇಡ್ ಲಾ (UNCITRAL) 50ನೇ ವಾರ್ಷಿಕೋತ್ಸವ ಆತಿಥ್ಯವನ್ನು ವಹಿಸಿದ್ದ ರಾಷ್ಟ್ರ ಯಾವುದು?

A
ಚೀನಾ
B
ಭಾರತ
C
ಅಮೆರಿಕ
D
ಪಾಕಿಸ್ತಾನ
Question 10 Explanation: 
ಭಾರತ:

ಯುನೈಟೆಡ್ ನೇಷನ್ಸ್ ಕಮೀಷನ್ ಆನ್ ಇಂಟರ್ನ್ಯಾಷನಲ್ ಟ್ರೇಡ್ ಲಾ (UNCITRAL) 50ನೇ ವಾರ್ಷಿಕೋತ್ಸವ ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. UNCITRAL ನ ಎಂಟು ಸದಸ್ಯ ರಾಷ್ಟ್ರಗಳ ಪೈಕಿ ಭಾರತ ಒಂದಾಗಿದ್ದು, ಇತ್ತೀಚೆಗೆ ಆರು ವರ್ಷದ ಅವಧಿಗೆ ಮರು ಆಯ್ಕೆಯಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2016/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ನವೆಂಬರ್-2728-2016.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-27,28, 2016”

Leave a Comment

This site uses Akismet to reduce spam. Learn how your comment data is processed.