ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-25,26, 2016

Question 1

1. ದೇಶದ ಮೊದಲ ಪೇಮೆಂಟ್ ಬ್ಯಾಂಕ್ ಅನ್ನು ಇತ್ತೀಚೆಗೆ ಈ ಕೆಳಗಿನ ಯಾವ ಸಂಸ್ಥೆ ಆರಂಭಿಸಿತು?

A
ಏರ್ಟೆಲ್
B
ಮಹೀಂದ್ರ ಅಂಡ್ ಮಹೀಂದ್ರ
C
ರಿಲಾಯನ್ಸ್
D
ಫಿನ್ ಕಾರ್ಪ್
Question 1 Explanation: 
ಏರ್ಟೆಲ್:

ದೇಶದ ಮೊದಲ ಪೇಮೆಂಟ್ ಬ್ಯಾಂಕ್ ಅನ್ನು ಏರ್ಟೆಲ್ ದೇಶದ ಪ್ರಥಮ ಪೇಮೆಂಟ್ ಬ್ಯಾಂಕ್ ಪ್ರಾರಂಭಿಸಿದೆ. ರಾಜಸ್ತಾನದಲ್ಲಿ ಪ್ರಾಯೋಗಿಕವಾಗಿ ಭಾರ್ತಿ ಏರ್ಟೆಲ್ ಸಂಸ್ಥೆಯು ‘ಏರ್ಟೆಲ್ ಪೇಮೆಂಟ್ ಬ್ಯಾಂಕ್’ಗೆ ಚಾಲನೆ ನೀಡಿದೆ. ಆಧಾರ್ ಕಾರ್ಡ್ ಬಳಸಿ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯಬಹುದಾಗಿದೆ ಹಾಗೂ ಗ್ರಾಹಕರ ಏರ್ಟೆಲ್ ಮೊಬೈಲ್ ಸಂಖ್ಯೆಯೇ ಖಾತೆ ಸಂಖ್ಯೆಯೂ ಆಗಿರಲಿದೆ. ಉಳಿತಾಯ ಖಾತೆಯಲ್ಲಿ ಇಡುವ ಠೇವಣಿಗೆ ವಾರ್ಷಿಕ ಶೇ.7.25ರಷ್ಟು ಬಡ್ಡಿ ಸಿಗಲಿದೆ. ಪ್ರಾರಂಭಿಕವಾಗಿ ರಾಜಸ್ತಾನದ ಪಟ್ಟಣ ಮತ್ತು ಗ್ರಾಮೀಣ ಭಾಗದ ಗ್ರಾಹಕರು ಏರ್ಟೆಲ್ ಮಳಿಗೆಗಳಲ್ಲಿ ಬ್ಯಾಂಕ್ ಖಾತೆ ತೆರೆಯಬಹುದಾಗಿದೆ. ನಗದು ರಹಿತ ವಹಿವಾಟು, ಹಣ ವರ್ಗಾವಣೆ ಸೇರಿದಂತೆ ಇತರೆ ಸೌಲಭ್ಯವನ್ನು ಪೇಮೆಂಟ್ ಬ್ಯಾಂಕ್ ಒಳಗೊಂಡಿದೆ.

Question 2

2. ಇತ್ತೀಚೆಗೆ ನಿಧನರಾದ ಕೆ.ಸುಭಾಷ್ ರವರು ಯಾವ ಭಾಷೆಯ ಪ್ರಸಿದ್ದ ಸಿನಿಮಾ ನಿರ್ದೇಶಕರು?

A
ತಮಿಳು
B
ತೆಲುಗು
C
ಮರಾಠಿ
D
ಗುಜರಾತಿ
Question 2 Explanation: 
ತಮಿಳು:

ಖ್ಯಾತ ಚಿತ್ರ ಸಾಹಿತಿ, ನಿರ್ದೇಶಕ ಕೆ. ಸುಭಾಷ್ ನಿಧನಹೊಂದಿ¬ದರು. ಅವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಇಲ್ಲಿನ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಹಲವು ಚಿತ್ರಗಳನ್ನು ಇವರು ನಿರ್ದೇಶಿಸಿದ್ದು, ಇವರ ನಿರ್ದೇಶನದ ತಮಿಳು ಚಿತ್ರ ‘ಛತ್ರಿಯನ್’ ಭಾರಿ ಯಶಸ್ಸು ಗಳಿಸಿತ್ತು. ಶಾರುಖ್ ಖಾನ್ ನಟಿಸಿರುವ ‘ಚೆನ್ನೈ ಎಕ್ಸ್ಪ್ರೆಸ್’ ಹಿಂದಿ ಸಿನಿಮಾಗೆ ಇವರೇ ಕಥೆ ಬರೆದಿದ್ದರು.

Question 3

3. 2016 ಏಷ್ಯಾ ಪೆಸಿಫಿಕ್ ಸ್ಕ್ರೀನ್ ಆವಾರ್ಡ್ಸ್ ನಲ್ಲಿ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಪಡೆದ ನಟ ಯಾರು?

A
ಅಮಿತಾಬ್ ಬಚ್ಚನ್
B
ಜಾಕಿ ಚಾನ್
C
ಮನೋಜ್ ಬಾಜ್ಪೇಯಿ
D
ರಜನಿಕಾಂತ್
Question 3 Explanation: 
ಮನೋಜ್ ಬಾಜ್ಪೇಯಿ:

ಬಾಲಿವುಡ್ ನಟ ಮನೋಜ್ ಬಾಜ್ಪೇಯಿ ರವರು 10ನೇ ಏಷ್ಯಾ ಪೆಸಿಫಿಕ್ ಸ್ಕ್ರೀನ್ ಆವಾರ್ಡ್ಸ್ ನಲ್ಲಿ ಅತ್ಯುತ್ತಮ ನಟನೆಗಾಗಿ ನೀಡುವ ನಟ ಪ್ರಶಸ್ತಿಯನ್ನು ಪಡೆದುಕೊಂಡರು. ಅಲಿಗರ್ ಚಿತ್ರದಲ್ಲಿನ ನಟನೆಗಾಗಿ ಈ ಪ್ರಶಸ್ತಿ ಅವರಿಗೆ ಲಭಿಸಿದೆ.

Question 4

4. ಯಾವ ದಿನದಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ?

A
ನವೆಂಬರ್ 25
B
ನವೆಂಬರ್ 26
C
ನವೆಂಬರ್ 27
D
ನವೆಂಬರ್ 24
Question 4 Explanation: 
ನವೆಂಬರ್ 26:

ಸಂವಿಧಾನ ದಿನವನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತದೆ. ನವೆಂಬರ್ 26, 1949 ರಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡ ಕಾರಣ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತ ಸಂವಿಧಾನ ಜನವರಿ 26, 1950 ರಿಂದ ಜಾರಿಗೆ ಬಂದಿದೆ.

Question 5

5. ವಿಶ್ವದ ಅತಿ ಹೆಚ್ಚು ಯುರೇನಿಯಂ ಉತ್ಪಾದಿಸುವ ರಾಷ್ಟ್ರ ______?

A
ಆಸ್ಟ್ರೇಲಿಯಾ
B
ಕೆನಡಾ
C
ರಷ್ಯಾ
D
ಫ್ರಾನ್ಸ್
Question 5 Explanation: 
ಕೆನಡಾ
Question 6
6. ರಾಷ್ಟ್ರೀಯ ಕ್ಷೀರ ದಿನ (National Milk Day)________?
A
ನವೆಂಬರ್ 19
B
ನವೆಂಬರ್ 24
C
ನವೆಂಬರ್ 26
D
ನವೆಂಬರ್ 27
Question 6 Explanation: 
ನವೆಂಬರ್ 26:

ರಾಷ್ಟ್ರೀಯ ಕ್ಷೀರ ದಿನವನ್ನು ನವೆಂಬರ್ 26 ರಂದು ಆಚರಿಸಲಾಗುತ್ತದೆ. ಕ್ಷೀರ ಬ್ರಹ್ಮ ಅಥವಾ ಬಿಳಿ ಕಾಂತಿ ಹರಿಕಾರ ಎಂದೇ ಖ್ಯಾತಿ ಹೊಂದಿದ್ದ ಡಾ. ವರ್ಗೀಸ್ ಕುರಿಯನ್ ರವರ ಜನ್ಮದಿನವನ್ನು ರಾಷ್ಟ್ರೀಯ ಕ್ಷೀರ ದಿನವನ್ನು ಆಚರಿಸಲಾಗುತ್ತದೆ.

Question 7

7. “ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ನ (IACC)” ಅಧ್ಯಕ್ಷರಾಗಿ 2016-17 ನೇ ಸಾಲಿಗೆ ಯಾರು ಆಯ್ಕೆಯಾಗಿದ್ದಾರೆ?

A
ಎನ್ ವಿ ಶ್ರೀನಿವಾಸನ್
B
ಕುಮಾರ್ ಮುಖರ್ಜಿ
C
ಕೆ ಕೆ ಕಮಲ್
D
ಮನೋಜ್ ಕುಮಾರ್
Question 7 Explanation: 
ಎನ್ ವಿ ಶ್ರೀನಿವಾಸನ್

ಎನ್ ವಿ ಶ್ರೀನಿವಾಸನ್ ರವರು “ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ನ (IACC)” ಅಧ್ಯಕ್ಷರಾಗಿ 2016-17 ನೇ ಸಾಲಿಗೆ ಆಯ್ಕೆಯಾಗಿದ್ದಾರೆ.

Question 8

8. ಇತ್ತೀಚೆಗೆ ನಿಧನರಾದ “ಫಿಡೆಲ್ ಕ್ಯಾಸ್ಟ್ರೋ” ರವರು ಯಾವ ದೇಶದ ಕ್ರಾಂತಿಕಾರಿ ಅಧ್ಯಕ್ಷ?

A
ಕಾಂಬೋಡಿಯಾ
B
ನೈಜೀರಿಯಾ
C
ಕ್ಯೂಬಾ
D
ರಷ್ಯಾ
Question 8 Explanation: 
ಕ್ಯೂಬಾ

ಕ್ಯೂಬಾದ ಕ್ರಾಂತಿಕಾರಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ರವರು ನಿಧನರಾದರು. ಕ್ಯಾಸ್ರೋ ರವರು ಐವತ್ತು ವರ್ಷ ಕ್ಯೂಬಾದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು.

Question 9

9. ಈ ಕೆಳಗಿನ ಸ್ಥಳಗಳ ಪೈಕಿ ಯಾವ ಸ್ಥಳದಲ್ಲಿ ನೀರು ಕನಿಷ್ಠ ತಾಪಮಾನದಲ್ಲಿ ಕುದಿಯುತ್ತದೆ?

A
ಮುಂಬೈ
B
ಊಟಿ
C
ಮೌಂಟ್ ಅಬು
D
ಶಿಮ್ಲಾ
Question 9 Explanation: 
ಊಟಿ
Question 10
10. ಯಾವ ರಾಜ್ಯ ಹಿಂದುಳಿದ ವರ್ಗ ಮತ್ತು ಕಾರ್ಮಿಕರಿಗೆ ಅಗ್ಗದ ಹಾಗೂ ಕೈಗೆಟುಕವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸಲು “ಅನ್ನಪೂರ್ಣ ರಸೋಯಿ ಕಾರ್ಯಕ್ರಮ” ಜಾರಿಗೊಳಿಸಲಿದೆ?
A
ರಾಜಸ್ತಾನ
B
ಗುಜರಾತ್
C
ಮಹಾರಾಷ್ಟ್ರ
D
ತೆಲಂಗಣ
Question 10 Explanation: 
ರಾಜಸ್ತಾನ:

ರಾಜಸ್ತಾನ ಸರ್ಕಾರ ಹಿಂದುಳಿದ ವರ್ಗ ಮತ್ತು ಕಾರ್ಮಿಕರಿಗೆ ಅಗ್ಗದ ಹಾಗೂ ಕೈಗೆಟುಕವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸಲು “ಅನ್ನಪೂರ್ಣ ರಸೋಯಿ ಕಾರ್ಯಕ್ರಮ” ಜಾರಿಗೊಳಿಸಲಿದೆ. ರಿಕ್ಷಾ ಎಳೆಯುವವರು, ಕಾರ್ಮಿಕರು, ಆಟೋ ಚಾಲಕರು, ವಿದ್ಯಾರ್ಥಿಗಳು, ಮಹಿಳಾ ಕಾರ್ಮಿಕರು, ಹಿರಿಯರು ಹಾಗೂ ಇತರೆ ದುರ್ಬಲ ವರ್ಗದವರು ಈ ಕಾರ್ಯಕ್ರಮದ ಫಲಾನುಭವಿಗಳು.

There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-2526.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-25,26, 2016”

  1. thimmaraja k p

    Subjects mix madii sir hist Geo Eco conSt science ens

  2. corrent afferes nalli ennu hechige prasnegalo kelle sir

Leave a Comment

This site uses Akismet to reduce spam. Learn how your comment data is processed.