ಪಂಜಾಬ್ ಜಲ ಒಪ್ಪಂದ ಕಾಯಿದೆ-2004 ಅಸಿಂಧೂ: ಸುಪ್ರೀಂಕೋರ್ಟ್

ಪಂಜಾನ್ ವಿಧಾನಸಭೆ ಅಂಗೀಕರಿಸಿದ ಪಂಜಾನ್ ಜಲ ಒಪ್ಪಂದ ರದ್ದು ಕಾಯಿದೆ-2004 ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆ ಮೂಲಕ ರಾವಿ, ಬಿಯಾಸ್ ನದಿ ನೀರನ್ನು ನೆರೆಯ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಆದೇಶಿಸಿದೆ. ಅನಿಲ್ ಆರ್ ದಾವೆ ನೇತೃತ್ವದ ಐದು ಜನ ನ್ಯಾಯಾಧೀಶರನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ತೀರ್ಪು:

  • 1981 ರಲ್ಲಿ ರಾವಿ ಮತ್ತು ಬಿಯಾಸ್ ನೀರು ಹಂಚಿಕೆ ಸಂಬಂಧ ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ನಡುವೆ ಮಾಡಿಕೊಳ್ಳಲಾದ ಒಪ್ಪಂದವನ್ನು ಏಕಪಕ್ಷೀಯವಾಗಿ ಪಂಜಾಬ್ ಸರ್ಕಾರ ವಿಧಾನಸಭೆ ನಿರ್ಣಯದ ಮೂಲಕ ರದ್ದುಪಡಿಸಿರುವುದು ಅಸಾಂವಿಧಾನಿಕ ಎಂದು ಸುಪ್ರೀಂ ಹೇಳಿದೆ.
  • 2004ರಲ್ಲಿ ಕಾಯಿದೆಯನ್ನು ಜಾರಿಗೆ ತರುವ ಮೂಲಕ 2002 ಮತ್ತು 2004 ರಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಪಂಜಾಬ್ ಒಪ್ಪದೆ ಕೋರ್ಟ್ ಗೆ ಅಗೌರವ ತೋರಿದೆ ಎಂದು ಹೇಳಿದೆ.
  • ಆ ಮೂಲಕ ಪಂಜಾಬ್ ಸರ್ಕಾರ ತನ್ನ ಕಾನೂನಿನ ಮಿತಿ ಮೀರಿ ಕಾಯಿದೆ ಜಾರಿಗೆ ತಂದಿದೆ.

ಏನಿದು ವಿವಾದ?

  • 1966ರಲ್ಲಿ ಪಂಜಾಬ್ ನಿಂದ ಹರಿಯಾಣವನ್ನು ಬೇರ್ಪಡಿಸಿ ಪ್ರತ್ಯೇಕ ರಾಜ್ಯವನ್ನು ಬೇರ್ಪಡಿಸಿದಾಗ ನದಿ ನೀರು ಹಂಚಿಕೆ ಸಮಸ್ಯೆ ಉದ್ಬವಿಸಿತು. ಅಂದಿನಿಂದ ಪಂಜಾಬ್ ರಾಜ್ಯ ರಾವಿ ಮತ್ತು ಬಿಯಾಸ್ ನದಿ ನೀರನ್ನು ನೆರೆಯ ಹರಿಯಾಣ ರಾಜ್ಯದೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ ಬಂದಿದೆ.
  • ಆನಂತರ ಕೇಂದ್ರ ಸರ್ಕಾರ ಮಧ್ಯಸ್ತಿಕೆಯಿಂದ ಹರಿಯಾಣಕ್ಕೆ 3 ಎಂಎಎಫ್ (Million Acre Feet) ನೀರನ್ನು ರಾವಿ ಮತ್ತು ಬಿಯಾಸ್ ನದಿಯಿಂದ ಹರಿಸಲು ಸೂಚಿಸಿತ್ತು. 1981 ರಲ್ಲಿ ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ನಡುವೆ ಒಪ್ಪಂದ ಏರ್ಪಡುವ ಮೂಲಕ ರಾವಿ ಮತ್ತು ಬಿಯಾಸ್ ನದಿ ನೀರನ್ನು ಪುನರ್ ಹಂಚಿಕೆ ಮಾಡಿಕೊಳ್ಳಲು ಸಹಿ ಹಾಕಲಾಯಿತು. ಅದರಂತೆ ರಾಜಸ್ತಾನ, ಪಂಜಾನ್ ಮತ್ತು ಹರಿಯಾಣ ನಡುವೆ ತಲಾ 8.6 ಎಂಎಎಫ್, 4.22 ಎಂಎಎಫ್ ಮತ್ತು 3.5 ಎಂಎಎಫ್ ನೀರು ಹಂಚಿಕೆ ಮಾಡಲಾಯಿತು.
  • ಒಪ್ಪಂದದಂತೆ ಹರಿಯಾಣ ಸರ್ಕಾರ ಸಟ್ಲೇಜ್ ಮತ್ತು ಅದರ ಉಪನದಿ ಬಿಯಾಸ್ ನೀರನ್ನು ಬಳಸಿಕೊಳ್ಳಲು ಅನುಕೂಲವಾಗಲು ಕೇಂದ್ರ ಸರ್ಕಾರ ಸಟ್ಲೇಜ್-ಯಮುನಾ ಕಾಲುವೆ ಯೋಜನೆಯನ್ನು 1982 ರಲ್ಲಿ ಆರಂಭಿಸಿ ಸಟ್ಲೇಜ್ ಮತ್ತು ಯಮುನಾ ನದಿ ಜೋಡಣೆಗೆ ಮುಂದಾಗಿತು. ಈ ಯೋಜನೆ 1981ರ ಒಪ್ಪಂದದ ಫಲಪ್ರದ.
  • ಈ ಕಾಲುವೆಯ ಒಟ್ಟು ಉದ್ದ 214 ಕಿ.ಮೀ, ಇದರಲ್ಲಿ 122 ಕಿ.ಮೀ ಪಂಜಾನ್ ನಲ್ಲಿದ್ದರೆ 92 ಕಿ.ಮೀ ಹರಿಯಾಣದಲ್ಲಿ ಹಾದುಹೋಗುತ್ತಿತ್ತು. ಆದರೆ ರಾಜಕೀಯ ಪಕ್ಷಗಳು ಮತ್ತು ಪಂಜಾಬ್ ನಲ್ಲಿ ದಂಗೆಕೋರರ ದಾಳಿಯಿಂದ ಈ ಯೋಜನೆಯ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಕೊಂಡಿತು.
  • 1996 ರಲ್ಲಿ ಹರಿಯಾಣ ಸರ್ಕಾರ ಈ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಅದರಂತೆ 2002 ರಲ್ಲಿ ಸುಪ್ರೀಂಕೋರ್ಟ್ ಪಂಜಾಬ್ ಸರ್ಕಾರಕ್ಕೆ ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಆದೇಶ ನೀಡಿತ್ತು. ಪುನಃ 2004 ರಲ್ಲಿ ಸುಪ್ರೀಂಕೋರ್ಟ್ ಯೋಜನೆಯನ್ನು ಪೂರ್ಣಗೊಳಿಸುವಂತೆ ಆದೇಶ ನೀಡಿತು.
  • ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ದವಾಗಿ ಪಂಜಾಬ್ ವಿಧಾನಸಭೆಯಲ್ಲಿ ಪಂಜಾಬ್ ಟರ್ಮಿನೇಷನ್ ಆಫ್ ವಾಟರ್ ಅಗ್ರಿಮೆಂಟ್ ಆಕ್ಟ್ -2004 ಸರ್ವಾನುಮತದಿಂದ ಅಂಗೀಕರಿಸಲಾಯಿತು. ಆ ಮೂಲಕ ಸಟ್ಲೇಜ್-ಯಮುನಾ ಕಾಲುವೆ ಯೋಜನೆ ನೆನೆಗುದಿಗೆ ಬೀಳಲು ಪಂಜಾಬ್ ಸರ್ಕಾರ ಸುಪ್ರೀಂಕೋರ್ಟ್ ಗೆ ಸೆಡ್ಡು ಹೊಡೆದಿತ್ತು.

ಪ್ರೊಫೆಸರ್ ರಾಜ್ ಬಿಸರಿಯಾ ಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ

ಪ್ರಖ್ಯಾತ ರಂಗಕರ್ಮಿ ಪ್ರೊಫೆಸರ್ ರಾಜ್ ಬಿಸರಿಯಾ ಅವರನ್ನು ಮಧ್ಯಪ್ರದೇಶ ಸರ್ಕಾರ ಪ್ರತಿಷ್ಠಿತ 2015-16 ಕಾಳಿದಾಸ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಮಾಡಿದೆ. ರಂಗಭೂಮಿಗೆ ಬಿಸರಿಯಾ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಉಜ್ಜೈನ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು.

ರಾಜ್ ಬಿಸರಿಯಾ:

  • ನವೆಂಬರ್ 10, 1935 ರಲ್ಲಿ ಜನಿಸಿರುವ ಬಿಸಾರಿಯಾ ರವರು ನಿರ್ದೇಶಕ, ನಿರ್ಮಾಪಕ, ನಟ ಮತ್ತು ಶಿಕ್ಷಕರಾಗಿ ಪ್ರಸಿದ್ದಿ ಹೊಂದಿದ್ದಾರೆ.
  • ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಇವರನ್ನು ಉತ್ತರ ಭಾರತದ ಆಧುನಿಕ ರಂಗಭೂಮಿಯ ಪಿತಾಮಹ ಎಂದೇ ಬಣ್ಣಿಸಿದೆ.
  • 1966 ರಲ್ಲಿ ಇವರು ಥಿಯೇಟರ್ ಆರ್ಟ್ಸ್ ವರ್ಕ್ ಶಾಪ್ ಮತ್ತು 1975 ರಲ್ಲಿ ಭರ್ತೆಂಡು ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್ ಸ್ಥಾಪಿಸಿದ್ದಾರೆ.

ಕಾಳಿದಾಸ ಸಮ್ಮಾನ್ ಪ್ರಶಸ್ತಿ:

  • ಕಾಳಿದಾಸ ಸಮ್ಮಾನ್ ಪ್ರಶಸ್ತಿಯನ್ನು ಮಧ್ಯಪ್ರದೇಶ ಸರ್ಕಾರ 1980 ರಲ್ಲಿ ಸ್ಥಾಪಿಸಿದ್ದು, ಅಂದಿನಿಂದ ವಾರ್ಷಿಕವಾಗಿ ನೀಡುತ್ತಿದೆ.
  • ಪ್ರಶಸ್ತಿಯನ್ನು ನಾಲ್ಕು ಕ್ಷೇತ್ರಗಳಾದ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಕಲೆ ಮತ್ತು ರಂಗಭೂಮಿಗೆ ಕೊಡುಗೆ ನೀಡಿದವರಿಗೆ ನೀಡಲಾಗುವುದು.

ಪೆರು”ನಲ್ಲಿ2016 ಏಷ್ಯಾ-ಫೆಸಿಪಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ

2016 ಏಷ್ಯಾ ಫೆಸಿಪಿಕ್ ಆರ್ಥಿಕ ಸಹಕಾರ ರಾಷ್ಟ್ರ ನಾಯಕರ ಶೃಂಗಸಭೆ ಪೆರುವಿನ ಲಿಮಾದಲ್ಲಿ ನಡೆಯಲಿದೆ. ಈ ಶೃಂಗಸಭೆ ನವೆಂಬರ್ 19-20, 2016 ರಂದು ನಡೆಯಲಿದೆ. ಈ ಶೃಂಗಸಭೆಯ ಧ್ಯೇಯವಾಕ್ಯ “ಗುಣಮಟ್ಟ ಬೆಳವಣಿಗೆ ಮತ್ತು ಮಾನವ ಅಭಿವೃದ್ದಿ (Quality Development and Human Development)”. ಎರಡನೇ ಬಾರಿ ಪೆರು ಈ ಅಪೆಕ್ ಶೃಂಗಸಭೆಯನ್ನು ಆಯೋಜಿಸುತ್ತಿದೆ. 2008 ರಲ್ಲಿ ಮೊದಲ ಬಾರಿಗೆ ಶೃಂಗಸಭೆಯನ್ನು ಆಯೋಜಿಸಿತ್ತು. ವಿಶ್ವದ 21 ಪ್ರಮುಖ ಆರ್ಥಿಕ ರಾಷ್ಟ್ರಗಳ ನಾಯಕರು ಹಾಗೂ 1500 ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಲಿದ್ದಾರೆ. ನಾಲ್ಕು ಆದ್ಯ ವಿಷಯಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಲಾಗುವುದು. ಅವುಗಳೆಂದರೆ ಮಾನವ ಬಂಡವಾಳ ಅಭಿವೃದ್ದಿ, ಪ್ರಾದೇಶಿಕ ಆಹಾರ ಮಾರುಕಟ್ಟೆ, ಸಣ್ಣ, ಮಧ್ಯಮ ಉದ್ದಿಮೆಗಳನ್ನು ನವೀಕರಿಸುವುದು ಹಾಗೂ ಪ್ರಾದೇಶಿಕ ಆರ್ಥಿಕ ಐಕ್ಯತೆ.

ಏಷ್ಯಾ-ಫೆಸಿಪಿಲ್ ಆರ್ಥಿಕ ಸಹಕಾರ (ಅಪೆಕ್):

  • ಅಪೆಕ್ ಪೆಸಿಫಿಕ್ ರಿಮ್ ನ 21 ರಾಷ್ಟ್ರಗಳ ಪ್ರಾದೇಶಿಕ ಆರ್ಥಿಕ ಒಕ್ಕೂಟವಾಗಿದೆ. ಏಷ್ಯಾ ಮತ್ತು ಪೆಸಿಫಿಕ್ ವಲಯದಲ್ಲಿ ಮುಕ್ತ ವ್ಯಾಪಾರವನ್ನು ನಡೆಸುವುದು ಒಕ್ಕೂಟದ ಆಶಯವಾಗಿದೆ.
  • ಅಪೆಕ್ ನ 21 ರಾಷ್ಟ್ರಗಳು ಒಟ್ಟಾರೆಯಾಗಿ ವಿಶ್ವದ ಶೇ 50% ವ್ಯಾಪಾರ ಹಾಗೂ ಶೇ 57% ಜಿಡಿಪಿಯಲ್ಲಿ ಪಾಲು ಹೊಂದಿದೆ.
  • ಅಪೆಕ್ ಅನ್ನು 1989 ರಲ್ಲಿ ಸ್ಥಾಪಿಸಲಾಗಿದೆ. ಇದರ ಕೇಂದ್ರ ಕಚೇರಿ ಸಿಂಗಾಪುರದಲ್ಲಿದೆ.

ಅಪೆಕ್ ಸದಸ್ಯ ರಾಷ್ಟ್ರಗಳು:

  • ಆಸ್ಟ್ರೇಲಿಯಾ, ಬ್ರೂನಿ, ಕೆನಡಾ, ಇಂಡೋನೇಷಿಯಾ, ಜಪಾನ್, ದಕ್ಷಿಣ ಕೊರಿಯಾ, ಮಲೇಷಿಯಾ, ನ್ಯೂಜಿಲ್ಯಾಂಡ್, ಫಿಲಿಫೈನ್ಸ್, ಥಾಯ್ಲೆಂಡ್, ಅಮೆರಿಕ, ತೈವಾನ್, ಹಾಂಕ್ ಕಾಂಗ್, ಚೀನಾ, ಮೆಕ್ಸಿಕೊ, ಪಾಪ್ ನ್ಯೂ ಗಿನಿಯಾ, ಚಿಲೆ, ಪೆರು, ರಷ್ಯಾ ಮತ್ತು ವಿಯೆಟ್ನಾಂ.
  • ಭಾರತ 2011 ರಿಂದ ವೀಕ್ಷಣ ರಾಷ್ಟ್ರ ಸ್ಥಾನವನ್ನು ಹೊಂದಿದ್ದು, ಅಪೆಕ್ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದೆ.

Leave a Comment

This site uses Akismet to reduce spam. Learn how your comment data is processed.