ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -20

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -20

Question 1

1.ಕರ್ನಾಟಕ ಹಕ್ಕಿ ಹಬ್ಬ (Bird Festival) ಮೂರನೇ ಆವೃತ್ತಿ ಎಲ್ಲಿ ನಡೆಯಲಿದೆ?

A
ಹಂಪಿ
B
ಪಿಳಿಕುಲ
C
ಸಕಲೇಶಪುರ
D
ಕೊಳ್ಳೆಗಾಲ
Question 1 Explanation: 
ಹಂಪಿ:

ಕರ್ನಾಟಕ ಹಕ್ಕಿ ಹಬ್ಬದ ಮೂರನೇ ಆವೃತ್ತಿ ಹಂಪಿಯಲ್ಲಿ ನಡೆಯಲಿದೆ. ಈ ಹಿಂದಿನ ಎರಡು ಆವೃತ್ತಿಗಳನ್ನು ಅರಣ್ಯ ಇಲಾಖೆ ಮತ್ತು ಪರಿಸರ ಪ್ರವಾಸೋದ್ಯಮ ನಿಗಮ ರಂಗನತಿಟ್ಟು ಮತ್ತು ಕಾಳಿ ಹುಲಿ ಮೀಸಲು ಅರಣ್ಯಗಳಲ್ಲಿ ಹಮ್ಮಿಕೊಂಡಿತ್ತು. ಹಂಪಿ ಸುತ್ತಮುತ್ತಲ ಹಕ್ಕಿಗಳ ವಾಸಸ್ಥಾನ ಮತ್ತು ಬಳ್ಳಾರಿ ಜಿಲ್ಲೆಯ ದರೋಜಿ ಸ್ಲೋತ್ ಬೇರ್ ಪಕ್ಷಿಧಾಮಗಳಲ್ಲಿ ಮೂರು ದಿನಗಳ ಈ ಹಬ್ಬ ಜನವರಿ ಮೊದಲ ವಾರದಲ್ಲಿ ನಡೆಯಲಿದೆ.

Question 2

2. ತುರ್ತು ಚಿಕಿತ್ಸೆ ನಿರ್ವಹಿಸುವ ಸಂಬಂಧ ರಾಜ್ಯದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಯಾವ ದೇಶದ ಪರಿಣಿತ ವೈದ್ಯರ ತಂಡ ಜ್ಞಾನಕೌಶಲ್ಯ ತರಭೇತಿ ನೀಡುತ್ತಿದೆ?

A
ಸಿಂಗಪುರ
B
ಅಮೆರಿಕ
C
ಜಪಾನ್
D
ಜರ್ಮನಿ
Question 2 Explanation: 
ಸಿಂಗಪುರ:

ಅಪಘಾತ, ವಿಷಸೇವನೆ, ಬೆಂಕಿ ಅವಘಡ ಸೇರಿದಂತೆ ಮುಂತಾದ ಸಮಯದಲ್ಲಿ ತುರ್ತು ಚಿಕಿತ್ಸೆ ನಿರ್ವಹಿಸುವ ಸಂಬಂಧ ರಾಜ್ಯದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಿಂಗಪುರ ದೇಶದ ಪರಿಣಿತ ವೈದ್ಯರ ತಂಡ ಜ್ಞಾನಕೌಶಲ್ಯ ತರಭೇತಿ ನೀಡಲಿದೆ. ಈ ತರಭೇತಿಗೆ ಇತ್ತೀಚೆಗೆ ವಿಕಾಸಸೌಧದಲ್ಲಿ ಚಾಲನೆ ನೀಡಲಾಯಿತು. ಇದರಡಿ ಮುಂದಿನ ಮೂರು ವರ್ಷದಲ್ಲಿ 1200 ಕ್ಕೂ ಹೆಚ್ಚು ಸಿಬ್ಬಂದಿ ತರಭೇತಿ ಪಡೆಯಲಿದ್ದಾರೆ.

Question 3

3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

ಅ) 2015-16ನೇ ಸಾಲಿನಲ್ಲಿ ರಾಜ್ಯದ ತಲಾ ಆದಾಯ 1,48,494 ರೂ ಇದೆ

ಆ) ರಾಷ್ಟ್ರ ತಲಾ ಆದಾಯಕ್ಕೆ ಹೋಲಿಸಿದರೆ ರಾಜ್ಯದ ತಲಾ ಆದಾಯ ಶೇ 59% ಹೆಚ್ಚಿದೆ.

ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 3 Explanation: 
ಎರಡು ಹೇಳಿಕೆ ಸರಿ:

2015-16ನೇ ಸಾಲಿನಲ್ಲಿ ರಾಜ್ಯದ ತಲಾ ಆದಾಯ 1,48,494 ರೂ ತಲುಪಿದ್ದು, ರಾಷ್ಟ್ರದ ತಲಾ ಆದಾಯ ರೂ 93,231ಕ್ಕೆ ಹೋಲಿಸಿದರೆ ರಾಜ್ಯದ ತಲಾ ಆದಾಯ ಶೇ 59% ಹೆಚ್ಚಿದೆ.

Question 4

4. ರಾಜ್ಯದಲ್ಲಿ ಜನನ ಮತ್ತು ಮರಣ ಆನ್ ಲೈನ್ ನೋಂದಣೆ ವ್ಯವಸ್ಥೆಗೆ ಯಾವ ಇ-ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದೆ?

A
ಸಂಸ್ಕರಣೆ
B
ಸಾರ್ಥಕ ಜೀವನ
C
ಸಂಸ್ಕಾರ
D
ಜೀವನ ಜ್ಯೋತಿ
Question 4 Explanation: 
ಸಂಸ್ಕರಣೆ:

ರಾಜ್ಯದಲ್ಲಿ ಜನನ ಮತ್ತು ಮರಣ ಆನ್ ಲೈನ್ ನೋಂದಣೆ ವ್ಯವಸ್ಥೆಗೆ ಸಂಸ್ಕರಣೆ ಹೆಸರಿನ ಇ-ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದೆ.

Question 5

5. ಹೆಚ್ಎಎಲ್ -ಐಐಎಸ್ಸಿ ಕೌಶಲ್ಯ ಅಭಿವೃದ್ದಿ ಕೇಂದ್ರ ಯಾವ ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿದೆ?

A
ಬಳ್ಳಾರಿ
B
ಚಿತ್ರದುರ್ಗ
C
ರಾಯಚೂರು
D
ವಿಜಯಪುರ
Question 5 Explanation: 
ಚಿತ್ರದುರ್ಗ:

ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (HAL-IISc)ನ ಕೌಶಲ್ಯ ಅಭಿವೃದ್ದಿ ಕೇಂದ್ರಕ್ಕೆ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನಲ್ಲಿ ಗುದ್ದಲಿ ಪೂಜೆ ನೇರವೇರಿಸಲಾಯಿತು. ಭಾರತ ಸರ್ಕಾರದ ಕೌಶಲ್ಯ ಭಾರತ ಅಭಿಯಾನದಡಿ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಎಂಜನಿಯರಿಂಗ್ ವೃತ್ತಿದಾರರು ಸೇರಿದಂತೆ ಯುವಕರಲ್ಲಿ ವಿವಿಧ ಹಂತದಲ್ಲಿ ಕೌಶಲ್ಯ ಜ್ಞಾನವನ್ನು ವೃದ್ದಿಸುವುದು ಈ ಕೇಂದ್ರದ ಉದ್ದೇಶ.

Question 6

6. ರಾಜ್ಯ ಸರ್ಕಾರ ಇತ್ತೀಚೆಗೆ ಮಾಪನ ವಾಹನಗಳಿಗೆ ಚಾಲನೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:

ಅ) ರಾಜ್ಯ ಗೃಹಸಚಿವಾಲಯ ಈ ವಾಹನಗಳನ್ನು ನೀಡಿದ್ದು, ಆರ್ಟಿಒ ಸಿಬ್ಬಂದಿ ಮತ್ತು ಸಂಚಾರಿ ಪೊಲೀಸರ ನೆರವಿನೊಂದಿಗೆ ಸಾರ್ವಜನಿಕ ವಾಹನಗಳ ಮಾಲಿನ್ಯ ಪ್ರಮಾಣ ತಪಾಸಣೆ ನಡೆಸಲಾಗುತ್ತದೆ.

ಆ)ಈ ವಾಹನಗಳ ಮೂಲಕ ಡೀಸೆಲ್ ವಾಹನದಲ್ಲಿ ಹೊಗೆ ಸಾಂದ್ರತೆ ಮತ್ತು ಪೆಟ್ರೋಲ್ ವಾಹನದಲ್ಲಿ ಕಾರ್ಬನ್ ಮೊನಾಕ್ಸೈಡ್ (CO) ಹಾಗೂ ಹೈಡ್ರೋಕಾರ್ಬನ್ (HC) ಸಾಂದ್ರತೆಗಳ ಮಾಪನ ಮಾಡಬಹುದು.

ಇ) ಬೆಂಗಳೂರಿನಲ್ಲಿ 8 ವಾಹನಗಳು ಮತ್ತು ಮೈಸೂರು, ಮಂಗಳೂರು, ಧಾರವಾಡ ಹಾಗೂ ಕಲಬುರ್ಗಿಯಲ್ಲಿ ತಲಾ ಒಂದು ವಾಹನ ಕಾರ್ಯನಿರ್ವಹಿಸಲಿವೆ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮತ್ತು ಎರಡು ಮಾತ್ರ
B
ಹೇಳಿಕೆ ಎರಡು ಮತ್ತು ಮೂರು ಮಾತ್ರ
C
ಹೇಳಿಕೆ ಮೂರು ಮಾತ್ರ
D
ಮೇಲಿನ ಎಲ್ಲವು
Question 6 Explanation: 
ಹೇಳಿಕೆ ಎರಡು ಮತ್ತು ಮೂರು ಮಾತ್ರ:

ವಾಹನಗಳ ಹೊಗೆ ತಪಾಸಣೆ ಮಾಡುವ 12 ಮಾಪನ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ವಾಹನಗಳನ್ನು ನೀಡಿದ್ದು, ಪ್ರಾದೇಶಿಕ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಸಿಬ್ಬಂದಿ ಮತ್ತು ಸಂಚಾರಿ ಪೊಲೀಸರ ನೆರವಿನೊಂದಿಗೆ ಸಾರ್ವಜನಿಕ ವಾಹನಗಳ ಮಾಲಿನ್ಯ ಪ್ರಮಾಣ ತಪಾಸಣೆ ನಡೆಸಲಾಗುತ್ತದೆ. ಈ ವಾಹನಗಳ ಮೂಲಕ ಡೀಸೆಲ್ ವಾಹನದಲ್ಲಿ ಹೊಗೆ ಸಾಂದ್ರತೆ ಮತ್ತು ಪೆಟ್ರೋಲ್ ವಾಹನದಲ್ಲಿ ಕಾರ್ಬನ್ ಮೊನಾಕ್ಸೈಡ್ (CO) ಹಾಗೂ ಹೈಡ್ರೋಕಾರ್ಬನ್ (HC) ಸಾಂದ್ರತೆಗಳ ಮಾಪನ ಮಾಡಬಹುದು. ಬೆಂಗಳೂರಿನಲ್ಲಿ 8 ವಾಹನಗಳು ಮತ್ತು ಮೈಸೂರು, ಮಂಗಳೂರು, ಧಾರವಾಡ ಹಾಗೂ ಕಲಬುರ್ಗಿಯಲ್ಲಿ ತಲಾ ಒಂದು ವಾಹನ ಕಾರ್ಯನಿರ್ವಹಿಸಲಿವೆ. ‘ವಾರದಲ್ಲಿ ಒಂದು ಅಥವಾ ಎರಡು ದಿನ ನಿರ್ದಿಷ್ಟ ಸ್ಥಳದಲ್ಲಿ ತಪಾಸಣೆ ಹಮ್ಮಿಕೊಳ್ಳಲಾಗುತ್ತದೆ. ನಿಗದಿತ ಮಿತಿಗಿಂತ ಹೆಚ್ಚಿನ ಹೊಗೆ ಹೊರಸೂಸುವ ವಾಹನಗಳಿಗೆ ಮೋಟಾರು ವಾಹನ ಕಾಯ್ದೆ ಪ್ರಕಾರ ₹1,500 ದಂಡ ವಿಧಿಸಲು ಅವಕಾಶ ಇದೆ.

Question 7

7. ಚಿತ್ರದುರ್ಗ ಮುರುಘಾಮಠದ ಶಾಖಾಮಠದ ಹೊಸಮಠ ನೀಡುವ ಡಾ. ಶಿವಮೂರ್ತಿ ಮುರುಘಾ ಶರಣ ಪ್ರಶಸ್ತಿಗೆ (‘ಡಾ. ಶಿಮು¬ಶ ಪ್ರಶಸ್ತಿ’) ಯಾರನ್ನು ಆಯ್ಕೆಮಾಡಲಾಗಿದೆ?

A
ಧರಂಸಿಂಗ್
B
ಬಸವರಾಜ ಹೊರಟ್ಟಿ
C
ರಮೇಶ್ ಕುಮಾರ್
D
ಕಾಗೋಡು ತಿಮ್ಮಪ್ಪ
Question 7 Explanation: 
ಬಸವರಾಜ ಹೊರಟ್ಟಿ:

ಚಿತ್ರದುರ್ಗ ಮುರುಘಾಮಠದ ಶಾಖಾಮಠವಾದ ಹೊಸಮಠ ನೀಡುವ ಡಾ. ಶಿವಮೂರ್ತಿ ಮುರುಘಾ ಶರಣ ಪ್ರಶಸ್ತಿಗೆ (‘ಡಾ. ಶಿಮು¬ಶ ಪ್ರಶಸ್ತಿ’) ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಡಿಸೆಂಬರ್ 3 ರಂದು ಹಾವೇರಿಯಲ್ಲಿ ನಡೆಯುವ ‘ಶರಣ ಸಂಸ್ಕೃತಿ ಉತ್ಸವ’ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Question 8

8. ಇತ್ತೀಚೆಗೆ ನಿಧನರಾದ ಶ್ರೀಹರಿ ಖೋಡೆ ಅವರು ಪ್ರಸಿದ್ದ ____?

A
ಉದ್ಯಮಿ
B
ಸಾಹಿತಿ
C
ಸಿನಿಮಾ ನಿರ್ದೇಶಕ
D
ಪತ್ರಕರ್ತ
Question 8 Explanation: 
ಉದ್ಯಮಿ:

ಖ್ಯಾತ ಉದ್ಯಮಿ, ಚಲನಚಿತ್ರ ನಿರ್ಮಾಪಕ ಶ್ರೀಹರಿ ಎಲ್‌. ಖೋಡೆ (77) ಅನಾರೋಗ್ಯದಿಂದ ನಿಧನರಾದರು. ಸದಭಿರುಚಿ ಚಿತ್ರಗಳ ನಿರ್ಮಾಪಕರಾಗಿದ್ದ ಖೋಡೆ ಅವರು, ‘ಸಂತ ಶಿಶುನಾಳ ಷರೀಫ’, ‘ಮೈಸೂರು ಮಲ್ಲಿಗೆ’, ‘ನಾಗಮಂಡಲ’ ಚಿತ್ರಗಳನ್ನು ನಿರ್ಮಿಸಿದ್ದರು. ಇತ್ತೀಚೆಗೆ ಟಿ.ಎಸ್‌. ನಾಗಾಭರಣ ಅವರ ನಿರ್ದೇಶನದ ‘ಅಲ್ಲಮ’ ಚಿತ್ರವನ್ನೂ ನಿರ್ಮಾಣ ಮಾಡಿದ್ದಾರೆ. ಮದ್ಯದ ಉದ್ಯಮ ನಡೆಸುವ ಖೋಡೆ ಗ್ರೂಪ್‌ನ ಮುಖ್ಯಸ್ಥರಾಗಿದ್ದರು.

Question 9

9. ಅತ್ಯಂತ ಸುಗಮವಾಗಿ ವ್ಯಾಪಾರೋದ್ಯಮ ನಡೆಸಲು ಅವಕಾಶ ಇರುವ ರಾಜ್ಯಗಳ ಸಮೀಕ್ಷೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?

A
09
B
10
C
13
D
15
Question 9 Explanation: 
13:

ಅತ್ಯಂತ ಸುಗಮವಾಗಿ ವ್ಯಾಪಾರೋದ್ಯಮ ನಡೆಸಲು ಅವಕಾಶ ಇರುವ ರಾಜ್ಯಗಳ ಸಮೀಕ್ಷೆಯಲ್ಲಿ ಕರ್ನಾಟಕ 13ನೇ ಸ್ಥಾನಕ್ಕೆ ಜಾರಿದೆ. ಕಳೆದ ವರ್ಷ ರಾಜ್ಯ 9ನೇ ಸ್ಥಾನ ಪಡೆದಿತ್ತು. ವಿಶ್ವ ಬ್ಯಾಂಕ್ ಹಾಗೂ ಭಾರತದ ಕೈಗಾರಿಕಾ ನೀತಿ ಇಲಾಖೆಯು ನಡೆಸಿದ ಸಮೀಕ್ಷೆಯಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಜಂಟಿಯಾಗಿ ಮೊದಲ ಸ್ಥಾನ ಪಡೆದಿವೆ. ನಂತರದ ಸ್ಥಾನದಲ್ಲಿ ಗುಜರಾತ್ ಇದೆ. ಛತ್ತೀಸಗಡ, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಕ್ರಮವಾಗಿ 4, 5 ಮತ್ತು 6ನೇ ಸ್ಥಾನ ಪಡೆದಿವೆ. ವ್ಯಾಪಾರ ಸುಧಾರಣೆ ಕ್ರಿಯಾ ಯೋಜನೆಗೆ ಸಂಬಂಧಿಸಿದ 340 ಅಂಶಗಳ ಅನುಷ್ಠಾನದ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದೆ.

Question 10

10. ಮಾದರಿ ನೋಂದಣಿ ವ್ಯವಸ್ಥೆಯು (ಎಸ್ಆರ್ಎಸ್) ನಡೆಸಿದ ಸಮೀಕ್ಷೆ ವರದಿ ಪ್ರಕಾರ ಕರ್ನಾಟಕದಲ್ಲಿ 2010–14ರ ಅವಧಿಯಲ್ಲಿ ಜನರ ಸರಾಸರಿ ಜೀವಿತಾವಧಿ ಎಷ್ಟಿದೆ?

A
68.8
B
67.6
C
70.1
D
65.4
Question 10 Explanation: 
68.8:

ಮಾದರಿ ನೋಂದಣಿ ವ್ಯವಸ್ಥೆಯು (ಎಸ್ಆರ್ಎಸ್) ಸಮೀಕ್ಷೆ ಪ್ರಕಾರ ಭಾರತದಲ್ಲಿ 2010–14ರ ಅವಧಿಯಲ್ಲಿ ಜನರ ಸರಾಸರಿ ಜೀವಿತಾವಧಿ 67 ವರ್ಷ 11 ತಿಂಗಳಿಗೆ ಏರಿಕೆಯಾಗಿದೆ. ಕರ್ನಾಟಕ ಜನರ ಸರಾಸರಿ ಜೀವಿತಾವಧಿ 68 ವರ್ಷ 8 ತಿಂಗಳು. ಸರಾರಸಿ ಜೀವತಾವಧಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದೆ.

There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Responses to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -20”

 1. shashi karunad says:

  This website helps lot for kannada medium students, plz conduct the exam every day, its help lot

  thnk you very much to karunadu exam team

 2. manjuntha says:

  sir, i want some KAS hints for Examinetion purpose

 3. Irabasappa says:

  Sir I want some KAS exam ints

 4. MAHESH BABU says:

  THANK U SO MUCH TO THE TEAM KARUNAUEXAMS..

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.