ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -19

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -19

Question 1

1.ಕರ್ನಾಟಕ ಮಹಿಳಾ ಒಕ್ಕೂಟ ಮತ್ತು ಉತ್ಪಾದಕರ ಪಾರ್ಕ್ (Karnataka Ladies Association and Manufacturers’ Park (KLAMP)) ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?

A
ಬೆಂಗಳೂರು
B
ಕಲಬುರ್ಗಿ
C
ಚಿತ್ರದುರ್ಗ
D
ಬೆಳಗಾವಿ
Question 1 Explanation: 
ಕಲಬುರ್ಗಿ:

ಕಲಬುರ್ಗಿ ಜಿಲ್ಲೆಯ ಕೆಸರಟಗಿ ಕೈಗಾರಿಕ ಅಭಿವೃದ್ದಿ ಪ್ರದೇಶದಲ್ಲಿ ಕರ್ನಾಟಕ ಮಹಿಳಾ ಒಕ್ಕೂಟ ಮತ್ತು ಉತ್ಪಾದಕರ ಪಾರ್ಕ್ ಸ್ಥಾಪನೆಯಾಗಲಿದೆ. ಥಿಂಗ್ ಬಿಗ್ 2016 ಮಹಿಳಾ ಉದ್ಯಮಿಗಳ ಸಮಾವೇಶದಲ್ಲಿ ಈ ಪಾರ್ಕ್ ನ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು. ಸದ್ಯ ಒಂದು ಎಕರೆ ಜಾಗದಲ್ಲಿ ಈ ಪಾರ್ಕ್ ನಿರ್ಮಾಣಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ 50 ಎಕರೆಗೆ ವಿಸ್ತರಿಸಲಾಗುವುದು. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಈ ಪಾರ್ಕ್ ಅನ್ನು ಸ್ಥಾಪಿಸಲಾಗುತ್ತಿದ್ದು, ತರಭೇತಿ ಕೇಂದ್ರ, ಉತ್ಪಾದನಾ ಕೇಂದ್ರ, ಪರೀಕ್ಷಾ ಪ್ರಯೋಗಾಲಯ, ಸೆಮಿನಾರ್ ಹಾಲ್ ಮತ್ತು ಇನ್ಕ್ಯೂಬೇಷನ್ ಸೆಂಟರ್ ಅನ್ನು ಒಳಗೊಂಡಿರಲಿದೆ.

Question 2

2. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:

ಅ) ಈ ಯೋಜನೆಯಡಿ ತುಂಗಭದ್ರಾ ನದಿಯಿಂದ ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯ 40 ಸಾವಿರ ಎಕರೆ ಕೃಷಿ ಜಮೀನು ನೀರಾವರಿ ಒದಗಿಸಲಾಗುವುದು.

ಆ) ಈ ಏತ ನೀರಾವರಿ ಯೋಜನೆಗೆ 1991-1992 ರಲ್ಲಿ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಇ) ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ಬ್ಯಾರೇಜು ನಿರ್ಮಿಸಿ ಎಡ ಹಾಗೂ ಬಲ ಬದಿಗಳ ಏತ ನೀರಾವರಿ ಸೌಲಭ್ಯ ಒದಗಿಸುವುದೇ ಇದರ ಮೂಲ ಉದ್ದೇಶ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮತ್ತು ಮೂರು ಮಾತ್ರ
B
ಹೇಳಿಕೆ ಒಂದು ಮಾತ್ರ
C
ಹೇಳಿಕೆ ಎರಡು ಮಾತ್ರ
D
ಮೇಲಿನ ಎಲ್ಲವು
Question 2 Explanation: 

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಿಂಗಟಾಲೂರು ಏತನೀರಾವರಿ ಯೋಜನೆಯ ಎಡಭಾಗದ ಮೊದಲ ಹಂತದ ನೀರೆತ್ತುವ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಿದರು. ಈ ಯೋಜನೆಯಡಿ ತುಂಗಭದ್ರಾ ನದಿಯಿಂದ ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯ 40 ಸಾವಿರ ಎಕರೆ ಕೃಷಿ ಜಮೀನು ನೀರಾವರಿಗೆ 7.64 ಟಿ.ಎಂ.ಸಿ. ನೀರು ಬಳಕೆ ಮಾಡಲಾಗುವುದು. ಸುಮಾರು 63.62 ಕೋಟಿ ರೂ. ವೆಚ್ಚದ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ 1991-1992 ರಲ್ಲಿ ರಾಜ್ಯ ಸರ್ಕಾರ ನೀಡಿತ್ತು. ತದನಂತರ 2000 ನೇ ವರ್ಷದಲ್ಲಿ ಅಂದು ಜಲಸಂಪನ್ಮೂಲ ಖಾತೆ ಸಚಿವರಾಗಿದ್ದ ಎಚ್.ಕೆ.ಪಾಟೀಲರು ಈ ಯೋಜನೆಯ ವ್ಯಾಪ್ತಿ ಹೆಚ್ಚಿಸಿ ಹೆಚ್ಚುವರಿಯಾಗಿ 10.91 ಟಿ.ಎಂ.ಸಿ. ತದನಂತರ 2000 ನೇ ವರ್ಷದಲ್ಲಿ ಅಂದು ಜಲಸಂಪನ್ಮೂಲ ಖಾತೆ ಸಚಿವರಾಗಿದ್ದ ಎಚ್.ಕೆ.ಪಾಟೀಲರು ಈ ಯೋಜನೆಯ ವ್ಯಾಪ್ತಿ ಹೆಚ್ಚಿಸಿ ಹೆಚ್ಚುವರಿಯಾಗಿ 10.91 ಟಿ.ಎಂ.ಸಿ. ನೀರು ಹಂಚಿಕೆ ಮಾಡಿಸಿ ಪರಿಷ್ಕೃತ 595 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ದೊರಕಿಸಿದ್ದರು. ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ಬ್ಯಾರೇಜು ನಿರ್ಮಿಸಿ ಎಡ ಹಾಗೂ ಬಲ ಬದಿಗಳ ಏತ ನೀರಾವರಿ ಸೌಲಭ್ಯ ಒದಗಿಸುವುದೇ ಇದರ ಮೂಲ ಉದ್ದೇಶವಾಗಿದೆ.

Question 3

3. ಕೇಂದ್ರ ನಗರಾಭಿವೃದ್ದಿ ಸಚಿವಾಲಯದ ಅತ್ಯುತ್ತಮ ನಗರ ಬಸ್ ಸೇವೆ ಪ್ರಶಸ್ತಿ ಈ ಕೆಳಗಿನ ಯಾವುದಕ್ಕೆ ಲಭಿಸಿದೆ?

A
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
B
ಹುಬ್ಬಳ್ಳಿ-ಧಾರಾವಾಡ ನಗರ ಬಸ್ ಸೇವೆ
C
ಶಿವಮೊಗ್ಗ ನಗರ ಬಸ್ ಸೇವೆ
D
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
Question 3 Explanation: 
ಹುಬ್ಬಳ್ಳಿ-ಧಾರಾವಾಡ ನಗರ ಬಸ್ ಸೇವೆ:

ಕೇಂದ್ರ ನಗರಾಭಿವೃದ್ದಿ ಸಚಿವಾಲಯದ ಅತ್ಯುತ್ತಮ ನಗರ ಬಸ್ ಸೇವೆ ಪ್ರಶಸ್ತಿಗೆ ಹುಬ್ಬಳ್ಳಿ-ಧಾರಾವಾಡ ನಗರ ಬಸ್ ಸೇವೆ ಭಾಜನವಾಗಿದೆ. ದೇಶದ ಅತ್ಯುತ್ತಮ ನಗರ ಬಸ್ ಸೇವೆ ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ. ಸಾರ್ವಜನಿಕ ಸಾರಿಗೆ ಉತ್ತೇಜನ, ರಸ್ತೆ ಸುರಕ್ಷತೆ ಮತ್ತು ಮೋಟಾರ್ ರಹಿತ ಸಾರಿಗೆ ಕೈಗೊಳ್ಳಲಾದ ಕ್ರಮಗಳನ್ನು ಆಧರಿಸಿ ಪ್ರಶಸ್ತಿಯನ್ನು ನೀಡಲಾಗಿದೆ.

Question 4

4. ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ವಿಜ್ಞಾನ ಗ್ಯಾಲರಿ ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಯಾವ ದೇಶದ ಅಂತರರಾಷ್ಟ್ರೀಯ ವಿಜ್ಞಾನ ಗ್ಯಾಲರಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A
ಅಮೆರಿಕ
B
ಐರ್ಲ್ಯಾಂಡ್
C
ಸ್ವೀಡನ್
D
ಕೆನಡಾ
Question 4 Explanation: 
ಐರ್ಲ್ಯಾಂಡ್:

ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ವಿಜ್ಞಾನ ಗ್ಯಾಲರಿ ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಐರ್ಲೆಂಡ್ ದೇಶದ ಡಬ್ಲಿನ್ನ ಅಂತರರಾಷ್ಟ್ರೀಯ ವಿಜ್ಞಾನ ಗ್ಯಾಲರಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ, ರವರು ಈ ವಿಷಯ ತಿಳಿಸಿದ್ದು, ಡಬ್ಲಿನ್ ಅಂತರರಾಷ್ಟ್ರೀಯ ವಿಜ್ಞಾನ ಗ್ಯಾಲರಿಯು ವಿಶ್ವದಾದ್ಯಂತ ವಿಶ್ವದರ್ಜೆಯ ವಿಜ್ಞಾನ ಗ್ಯಾಲರಿಗಳ ಜಾಲವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, ಈಗಾಗಲೇ ಡಬ್ಲಿನ್, ಲಂಡನ್ ಹಾಗೂ ಮೆಲ್ಬರ್ನ್ನಲ್ಲಿ ಇಂತಹ ಗ್ಯಾಲರಿಗಳು ನಿರ್ಮಾಣವಾಗಿವೆ. ಬೆಂಗಳೂರಿನಲ್ಲಿ ನಾಲ್ಕನೇ ಗ್ಯಾಲರಿ ಸ್ಥಾಪನೆಯಾಗಲಿದೆ. ಅಂತರರಾಷ್ಟ್ರೀಯ ವಿಜ್ಞಾನ ಗ್ಯಾಲರಿ ನಿರ್ಮಾಣಕ್ಕೆ ಈಗಾಗಲೇ ಹೆಬ್ಟಾಳದ ಭಾರತೀಯ ಪಶುಸಂಗೋಪನಾ ಸಂಸ್ಥೆಯ ಆವಣದಲ್ಲಿ 1 ಎಕರೆ 26 ಗುಂಟೆ ಜಾಗವನ್ನು ನೀಡಲಾಗಿದೆ.

Question 5

5. “ಥಿಂಕ್ ಬಿಗ್ 2016” ಏಷ್ಯಾದ ಅತಿ ದೊಡ್ಡ ಮಹಿಳಾ ಉದ್ಯಮಿಗಳ ಸಮಾವೇಶ ಯಾವ ನಗರದಲ್ಲಿ ಆಯೋಜನೆಗೊಂಡಿದೆ?

A
ಬೆಂಗಳೂರು
B
ಮೈಸೂರು
C
ತುಮಕೂರು
D
ಚಿಕ್ಕಬಳ್ಳಾಪುರ
Question 5 Explanation: 
ಬೆಂಗಳೂರು:

ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ 'ಥಿಂಕ್ ಬಿಗ್ 2016' ಮಹಿಳಾ ಉದ್ಯಮಿಗಳ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಸಮಾವೇಶವನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ, ಕರ್ನಾಟಕ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಉದ್ಘಾಟಿಸಿದರು.

Question 6

6. ಕರ್ನಾಟಕ ರಾಜ್ಯ ಮಹಿಳಾ ಉದ್ಯಮಶೀಲತಾ ಚಟುವಟಿಕೆಗಳಲ್ಲಿ ರಾಷ್ಟ್ರದಲ್ಲಿ ಎಷ್ಟನೇ ಸ್ಥಾನದಲ್ಲಿದೆ?

A
ಒಂದು
B
ಎರಡು
C
ಮೂರು
D
ನಾಲ್ಕು
Question 6 Explanation: 
ಮೂರು:

ಕರ್ನಾಟಕ ರಾಜ್ಯ ಮಹಿಳಾ ಉದ್ಯಮಶೀಲತಾ ಚಟುವಟಿಕೆಗಳಲ್ಲಿ ರಾಷ್ಟ್ರದ 3ನೇ ಸ್ಥಾನದಲ್ಲಿದೆ. ರಾಜ್ಯವು ಸುಮಾರು 1 ಲಕ್ಷಕ್ಕಿಂತ ಹೆಚ್ಚು ಮಹಿಳೆಯರ ಉದ್ಯಮಕ್ಕೆ ನೆಲೆ ನೀಡಿದೆ.

Question 7

7. ಅತ್ಯುತ್ತಮ ಸುದ್ದಿ-ಚಿತ್ರ ವಿನ್ಯಾಸಕ್ಕಾಗಿ ವಿಶ್ವದರ್ಜೆಯ ಎನ್ಎಸ್ಡಿ ಮನ್ನಣೆ ಪಡೆದ ಕನ್ನಡದ ಏಕೈಕ ಹಾಗೂ ದೇಶದ ಎರಡನೆ ಪ್ರಾಂತೀಯ ಪತ್ರಿಕೆಗ ಎಂಬ ಹಿರಿಮೆಗೆ ಯಾವ ಪತ್ರಿಕೆ ಪಾತ್ರವಾಗಿದೆ?

A
ಉದಯವಾಣಿ
B
ಪ್ರಜಾವಾಣಿ
C
ಕನ್ನಡ ಪ್ರಭ
D
ವಾರ್ತಾ ಭಾರತಿ
Question 7 Explanation: 
ಕನ್ನಡ ಪ್ರಭ:

ಕನ್ನಡಪ್ರಭ' ಪತ್ರಿಕೆಯು ಅತ್ಯುತ್ತಮ ಸುದ್ದಿ-ಚಿತ್ರ ವಿನ್ಯಾಸಕ್ಕಾಗಿ ವಿಶ್ವದರ್ಜೆಯ ಎನ್ಎಸ್ಡಿ ಮನ್ನಣೆಗೆ ಪಾತ್ರವಾಗಿದ್ದು, ಈ ಸಾಧನೆಗೈದ ಕನ್ನಡದ ಏಕೈಕ ಹಾಗೂ ದೇಶದ ಎರಡನೆ ಪ್ರಾಂತೀಯ ಪತ್ರಿಕೆ ಎಂಬ ಹಿರಿಮೆಗೆ ಪತ್ರಿಕೆ ಪಾತ್ರವಾಗಿದೆ. ಇತ್ತೀಚೆಗೆ ಬ್ರೆಝಿಲ್ನಲ್ಲಿ ಜರಗಿದ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಹಾಗೂ ಈ ಕ್ರೀಡಾಕೂಟದ ಇತಿಹಾಸದ ಸುದ್ದಿ- ಚಿತ್ರಣಗಳ ವಿನ್ಯಾಸಕ್ಕಾಗಿ ಪತ್ರಿಕೆಯು ಗೌರವಾನ್ವಿತ ಉಲ್ಲೇಖ (ಹಾನರೇಬಲ್ ಮೆನ್ಷನ್) ಗರಿ ಪ್ರಾಪ್ತವಾಗಿದೆ. ಒಲಿಂಪಿಕ್ಸ್ ಕೂಟದ ಹಾಗುಹೋಗುಗಳನ್ನು ಸುಂದರವಾಗಿ ಚಿತ್ರಿಸಿದ್ದ ಜಗತ್ತಿನ ಪತ್ರಿಕೆಗಳ ಸ್ಪರ್ಧೆಯಲ್ಲಿ 'ಕನ್ನಡಪ್ರಭ'ದ ಪ್ರಧಾನ ವಿನ್ಯಾಸಕಾರ ಬಿ.ಜಿ.ಜನಾರ್ದನ್ ವಿನ್ಯಾಸಗೊಳಿಸಿದ್ದ ಜೂನ್ 26ರ 'ಭಾವ ಬೆಸುಗೆಯ 27 ಕೊಂಡಿಗಳು' ಮತ್ತು ಆಗಸ್ಟ್ 4ರ '16 ದಿನಗಳ ಅಂತಾರಾಷ್ಟ್ರೀಯ ಮಟ್ಟದ ಏಕೈಕ ಸಂಘಟನೆ ಸೊಸೈಟಿ ಫಾರ್ ಡಿಸೈನ್(ಎಸ್ಎನ್ಡಿ)ನ ಮೆಚ್ಚುಗೆಯ ಪಟ್ಟಿಗೆ ಸೇರ್ಪಡೆಯಾಗಿದೆ.

Question 8

8. 2016 ಸಿಂಗಾಪುರ ಕನ್ನಡಿಗರ ಸಿಂಗಾರ ಉತ್ಸವದಲ್ಲಿ “ಸಿಂಗಾರ ಸಾಹಿತ್ಯ ರತ್ನ ಪ್ರಶಸ್ತಿ”ಯನ್ನು ನೀಡಲಾಯಿತು?

A
ಡಾ. ಶಿವರಾಜ್ ಕುಮಾರ್
B
ಡಾ. ಎಸ್.ಎಲ್. ಭೈರಪ್ಪ
C
ಚಂದ್ರಶೇಖರ ಗುರೂಜಿ
D
ಎಚ್ ಆರ್ ರಂಗನಾಥ್
Question 8 Explanation: 
ಡಾ. ಎಸ್.ಎಲ್. ಭೈರಪ್ಪ:

ಕನ್ನಡದ ಖ್ಯಾತ ಕಾದಂಬರಿಕಾರ, ಪದ್ಮಶ್ರೀ ಡಾ. ಎಸ್ ಎಲ್ ಭೈರಪ್ಪ ಅವರಿಗೆ 2016 ಸಿಂಗಾಪುರ ಕನ್ನಡಿಗರ ಸಿಂಗಾರ ಉತ್ಸವದಲ್ಲಿ 'ಸಿಂಗಾರ ಸಾಹಿತ್ಯ ರತ್ನ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರಿಗೆ 'ಸಿಂಗಾರ ವಾಸ್ತು ರತ್ನ' ಪ್ರಶಸ್ತಿ ಹಾಗೂ ಡಾ, ಎಸ್ ಎನ್ ಓಂಕಾರ ಅವರಿಗೆ 'ಸಿಂಗಾರ ಯೋಗ ರತ್ನ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Question 9

9. ಈ ಕೆಳಗಿನ ಯಾವ ತಾಲ್ಲೂಕುಗಳಲ್ಲಿ ರಾಜ್ಯ ಸರ್ಕಾರ ಗರ್ಭಿಣಿಯರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಿದೆ?

A
ಮಧುಗಿರಿ, ಜಮಖಂಡಿ, ಮಾನ್ವಿ, ಹೆಚ್.ಡಿ.ಕೋಟೆ
B
ಶಿರಸಿ, ಜಗಳೂರು, ಮಾನ್ವಿ, ಹೆಚ್.ಡಿ.ಕೋಟೆ
C
ಚಿಂತಾಮಣಿ, ಮಾನ್ವಿ, ಸಾಗರ, ಬಂಟ್ವಾಳ
D
ಬೆಂಗಳೂರು ನಗರ, ಕೋಲಾರ, ಸಿಂಧನೂರು, ಜೇವರ್ಗಿ
Question 9 Explanation: 
ಮಧುಗಿರಿ, ಜಮಖಂಡಿ, ಮಾನ್ವಿ, ಹೆಚ್.ಡಿ.ಕೋಟೆ:

ರಾಜ್ಯದ ಗರ್ಭೀಣಿ ಸ್ತ್ರೀಯರ ಆರೋಗ್ಯ ಮಟ್ಟವನ್ನು ಸುಧಾರಿಸುವ ಸಲುವಾಗಿ ರಾಜ್ಯ ಸರ್ಕಾರ ನಾಲ್ಕು ತಾಲೂಕುಗಳಲ್ಲಿ. ಮಾತೃ ಪುಷ್ಠಿ ವರ್ಧನೆಗಾಗಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆತರಲು ನಿರ್ಧರಿಸಿದೆ. ಪ್ರಾಯೋಗಿಕವಾಗಿ ಮಧುಗಿರಿ, ಜಮಖಂಡಿ, ಮಾನ್ವಿ, ಹೆಚ್.ಡಿ.ಕೋಟೆ ತಾಲ್ಲೂಕುಗಳಲ್ಲಿ ಡಿಸೆಂಬರ್ 15 ರಿಂದ ಯೋಜನೆ ಜಾರಿಗೆ ಬರಲಿದ್ದು, ನಂತರ ದಿನಗಳಲ್ಲಿ ರಾಜ್ಯದ ಇತರೆ ಭಾಗಗಳಿಗೆ ವಿಸ್ತರಿಸಲಾಗುವುದು.

Question 10

10. ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಗುರುತಿಸಿ:

ಅ) ಮೊದಲ ವಿಶ್ವ ಕನ್ನಡ ಸಮ್ಮೇಳನ 1985 ರಲ್ಲಿ ಮೈಸೂರಿನಲ್ಲಿ ನಡೆದಿತ್ತು

ಆ)ಎರಡನೇ ವಿಶ್ವ ಕನ್ನಡ ಸಮ್ಮೇಳನವನ್ನ 2011 ರಲ್ಲಿ ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು

ಇ) ಮೂರನೇ ವಿಶ್ವ ಕನ್ನಡ ಸಮ್ಮೇಳನ 2017 ರಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ

ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಆಯ್ಕೆಮಾಡಿ?

A
ಹೇಳಿಕೆ ಒಂದು ಮತ್ತು ಎರಡು ಮಾತ್ರ
B
ಹೇಳಿಕೆ ಎರಡು ಮತ್ತು ಮೂರು ಮಾತ್ರ
C
ಹೇಳಿಕೆ ಒಂದು ಮತ್ತು ಮೂರು ಮಾತ್ರ
D
ಮೇಲಿನ ಎಲ್ಲಾ ಹೇಳಿಕೆಗಳು ಸರಿ
Question 10 Explanation: 
ಹೇಳಿಕೆ ಒಂದು ಮತ್ತು ಎರಡು ಮಾತ್ರ:

ಮೂರನೇ ವಿಶ್ವ ಸಮ್ಮೇಳನ ಜೂನ್ 2017 ರಲ್ಲಿ, ಬೆಂಗಳೂರು ಅಥವಾ ಹೈದ್ರಾಬಾದ್-ಕರ್ನಾಟಕ ಭಾಗದ ಯಾವುದಾದರೂ ಒಂದು ನಗರದಲ್ಲಿ ನಡೆಯಲಿದೆ.

There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Responses to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -19”

  1. Murgesh says:

    Thanks i want KAS exam IQ test sir

  2. ಹಾದಿಮನಿ ವಸಂತ says:

    ಧನ್ಯವಾದಗಳು.

  3. Irabasappa says:

    Thanque for giving good resourse

Leave a Reply

Your email address will not be published. Required fields are marked *