ಬ್ರೆಜಿಲ್ ಮಾಜಿ ಪುಟ್ಬಾಲ್ ಆಟಗಾರ ಕಾರ್ಲೊಸ್ ಆಲ್ಬರ್ಟೋ ನಿಧನ

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರ ಪೈಕಿ ಓರ್ವರಾಗಿರುವ ಬ್ರೆಝಿಲ್ನ ಮಾಜಿ ನಾಯಕ ಕಾರ್ಲೊಸ್ ಆಲ್ಬರ್ಟೊ ಹೃದಯಾಘಾತದಿಂದ ನಿಧನರಾಗಿದ್ದಾರೆ. 1970ರ ವಿಶ್ವಕಪ್ ಟ್ರೋಫಿ ವಿಜೇತ ಬ್ರೆಝಿಲ್ ತಂಡದ ನಾಯಕರಾಗಿದ್ದ ಆಲ್ಬರ್ಟೊ 1970ರ ವಿಶ್ವಕಪ್ ಫೈನಲ್ನಲ್ಲಿ ಇಟಲಿ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸುವಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಆಲ್ಬರ್ಟೊಗೆ ಪೀಲೆ, ಟಾಸ್ತಾವೊ, ಜೈರ್ಝಿನೊಹೊ ಸಾಥ್ ನೀಡಿದ್ದರು.

  • 1944ರಲ್ಲಿ ಕ್ಯಾಪಿಟಾವೊದಲ್ಲಿ ಜನಿಸಿರುವ ಆಲ್ಬರ್ಟೊ 1996 ರಿಂದ 1974ರ ತನಕ ಪೀಲೆ ಅವರೊಂದಿಗೆ ಸ್ಯಾಂಟೊಸ್ ತಂಡದಲ್ಲಿ ಆಡಿದ್ದರು.
  • 1977 ರಿಂದ 1980ರ ತನಕ ನ್ಯೂಯಾರ್ಕ್ ಕಾಸ್ಮೊಸ್ ತಂಡವನ್ನು ಪ್ರತಿನಿಧಿಸಿದ್ದರು. ಬ್ರೆಝಿಲ್ನ ಪರ 50ಕ್ಕೂ ಅಧಿಕ ಪಂದ್ಯಗಳನ್ನು ಆಡಿರುವ ಆಲ್ಬರ್ಟೊ ಗಾಯದ ಸಮಸ್ಯೆಯಿಂದಾಗಿ 1974ರ ವಿಶ್ವಕಪ್ನಿಂದ ವಂಚಿತರಾಗಿದ್ದರು.
  • 2004ರಲ್ಲಿ ಫಿಫಾ ಬಿಡುಗಡೆ ಮಾಡಿರುವ ಶ್ರೇಷ್ಠ 100 ಆಟಗಾರರ ಪಟ್ಟಿಯಲ್ಲಿ ಆಲ್ಬರ್ಟೊ ಸ್ಥಾನ ಪಡೆದಿದ್ದರು.
  • 1982ರಲ್ಲಿ ಫುಟ್ಬಾಲ್ನಿಂದ ನಿವೃತ್ತಿಯಾಗಿದ್ದ ಆಲ್ಬರ್ಟೊ ರಿಯೋದ ಫ್ಲೆಮೆಂಗೊ, ಅಮೆರಿಕ, ಕೊಲಂಬಿಯಾ, ಮೆಕ್ಸಿಕೊ, ಒಮನ್ ಹಾಗೂ ಅಝರ್ಬೈಜಾನ್ ತಂಡದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಸ್ಪೋರ್ಟ್ ಟಿವಿಯಲ್ಲಿ ಟೆಲಿವಿಜನ್ ಪಂಡಿತ್ ಆಗಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.