ಅಂತರರಾಷ್ಟ್ರೀಯ ಚಾಲೆಂಜ್ ಬ್ಯಾಡ್ಮಿಂಟನ್ ಪ್ರತುಲ್ ಜೋಶಿಗೆ ಪ್ರಶಸ್ತಿ

ಉದಯೋನ್ಮುಖ ಆಟಗಾರ ಪ್ರತುಲ್ ಜೋಶಿ ಅವರು  ಬಹರೇನ್ ಅಂತರರಾಷ್ಟ್ರೀಯ ಚಾಲೆಂಜ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದು ಕೊಂಡರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಅವರ ಚೊಚ್ಚಲ ಪ್ರಶಸ್ತಿಯಾಗಿದೆ. ಸೆಗಯ್ಯಾದಲ್ಲಿ ನಡೆದ ಫೈನಲ್‌ನಲ್ಲಿ 22 ವರ್ಷದ ಜೋಶಿ ಅವರು 21–17, 12–21, 21–15ರಿಂದ ಆದಿತ್ಯ ಅವರ ವಿರುದ್ಧ  ಗೆದ್ದರು.

ಮಹಿಳೆಯರ ಸಿಂಗಲ್ಸ್:

  • ಇಂಡೋನೇಷಿಯಾದ ಶ್ರೀ ಫತ್ಮವಟಿ (Sri Fatmawati) ರವರು ತಮ್ಮದೇ ದೇಶದ ಅಸ್ಟಿ ದ್ವಿ ವಿಯನಿಂಗ್ರು ರವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ಪುರುಷರ ಡಬ್ಬಲ್ಸ್:

  • ರಷ್ಯಾದ ಎರಡನೇ ಶ್ರೇಯಾಂಕದ ಎವಗೆನಿಜ್ ಡ್ರೆಮಿನ್ ಮತ್ತು ಡೆನಿಸ್ ಗ್ರೆಚೆವ್ ರವರು ಭಾರತ ವಿಘ್ನೇಶ್ ದೇವಳಕರ್ ಮತ್ತು ರೋಹನ್ ಕಪೂರ್ ಜೋಡಿಯನ್ನು 18–21, 17–21ರಿಂದ ಪರಾಭವಗೊಳಿಸಿ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.

Leave a Reply

Your email address will not be published. Required fields are marked *