ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-13

ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-13

Question 1

1.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾರ್ಮಿಕರು ಶಾಶ್ವತವಾಗಿ ಅಂಗವಿಕಲರಾದರೆ ಅಥವಾ ಮೃತಪಟ್ಟರೆ, ಅವರಿಗೆ ಅಥವಾ ಅವರ ವಾರಸುದಾರರಿಗೆ ದೊರಕುವ ಪರಿಹಾರ ಮೊತ್ತವೆಷ್ಟು?

A
ರೂ. 50000
B
ರೂ. 25000
C
ರೂ. 50000 ಅಥವಾ ಕೇಂದ್ರ ಸರ್ಕಾರ ನಿಗದಿಪಡಿಸಬಹುದಾದ ಪರಿಹಾರ ಮೊತ್ತ
D
ರೂ. 25000 ಅಥವಾ ಕೇಂದ್ರ ಸರ್ಕಾರ ನಿಗದಿಪಡಿಸಬಹುದಾದ ಪರಿಹಾರ ಮೊತ್ತ
Question 1 Explanation: 

( 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಿಗೆ ಕೆಲಸದ ಸ್ಥಳದಲ್ಲಿ ಅನಾಹುತ ಸಂಭವಿಸಿದರೂ ಗುಣಮುಖರಾಗುವವರೆಗೆ ಉಚಿತ ವೈದ್ಯಕೀಯ ನೆರವು ದೊರೆಯುವುದು ಮತ್ತು ಅಂಗವಿಕಲತೆ ಅಥವಾ ಮರಣ ಸಂಭವಿಸಿದರೆ ಮೇಲ್ಕಾಣಿಸಿದ ಪರಿಹಾರ ಮೊತ್ತ ಪಡೆಯಲು ಅವಕಾಶವಿದೆ)

Question 2

2.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾರ್ಮಿಕರಿಗೆ ಈ ಕೆಳಕಂಡ ಯಾವ ಸೌಲಭ್ಯವನ್ನು ಒದಗಿಸಲಾಗುತ್ತದೆ?

1.ಕುಡಿಯುವ ನೀರು

2.ಲಘು ಉಪಾಹಾರ

3.ಪ್ರಥಮ ಚಿಕಿತ್ಸೆ ಪೆಟ್ಟಿಗೆ

4.6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳನ್ನು ನೋಡಿಕೊಳ್ಳಲು ಅಂಗನವಾಡಿ ಕಾರ್ಯಕರ್ತೆ

5.ವಿಶ್ರಾಂತಿ ಸಮಯಕ್ಕೆ ನರಳಿನ ವ್ಯವಸ್ಥೆ

A
1, 2, 4
B
1, 3, 5
C
2, 3, 4
D
ಮೇಲಿನ ಎಲ್ಲವೂ
Question 2 Explanation: 
1, 3, 5
Question 3

3.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅರಣ್ಯೀಕರಣ ಮತ್ತು ಗ್ರಾಮೀಣ ರಸ್ತೆ ಕಾಮಗಾರಿಗಳಿಗೆ ಕ್ರಮವಾಗಿ ನಿಗದಿಪಡಿಸಿರುವ ಶೇಕಡಾವಾರು ಮೊತ್ತ ಎಷ್ಟು?

A
ಗರಿಷ್ಟ ಶೇ.20 ಮತ್ತು ಗರಿಷ್ಟ ಶೇ.10
B
ಕನಿಷ್ಟ ಶೇ.10 ಮತ್ತು ಗರಿಷ್ಟ ಶೇ.20
C
ಕನಿಷ್ಟ ಶೇ.20 ಮತ್ತು ಕನಿಷ್ಟ ಶೇ.20
D
ಕನಿಷ್ಟ ಶೇ. 20 ಮತ್ತು ಗರಿಷ್ಟ ಶೇ.10
Question 3 Explanation: 
ಕನಿಷ್ಟ ಶೇ. 20 ಮತ್ತು ಗರಿಷ್ಟ ಶೇ.10
Question 4

4.ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ.ಜಾತಿ ಮತ್ತು ಪ. ಪಂಗಡಕ್ಕೆ ಸೇರಿದ ಸಮುದಾಯದ ಅಭ್ಯುದಯಕ್ಕೆ, ವಿಕಲಚೇತನರಿಗೆ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಕ್ರಮವಾಗಿ ಎಷ್ಟು ಶೇಕಡವಾರು ಮೊತ್ತವನ್ನು ಮೀಸಲಿಡಬೇಕು?

A
ಶೇ. 18, 5 ಮತ್ತು 1
B
ಶೇ. 20, 5 ಮತ್ತು 1
C
ಶೇ. 50, 3 ಮತ್ತು 1
D
ಶೇ. 25, 3 ಮತ್ತು 1
Question 4 Explanation: 
ಶೇ. 25, 3 ಮತ್ತು 1
Question 5

5.ಗ್ರಾಮ ಪಂಚಾಯಿತಿಗಳಲ್ಲಿ ಸದ್ಯ ( 2016-17 ನೇ ಸಾಲಿನಲ್ಲಿ) ಚಾಲ್ತಿಯಲ್ಲಿರದ ಯೋಜನೆಗಳು ಯಾವುವು?

1.ಬಸವ ವಸತಿ ಯೋಜನೆ

2.ಆಶ್ರಯ ವಸತಿ ಯೋಜನೆ

3.ಇಂದಿರಾ ಆವಾಸ್ ಯೋಜನೆ

4.ಪ್ರಧಾನ ಮಂತ್ರಿ ಆವಾಸ್ ಯೋಜನೆ

5.ಸಂಜೀವಿನಿ ಯೋಜನೆ

A
4 ಮತ್ತು 5
B
1 ಮತ್ತು 5
C
2 ಮತ್ತು 3
D
2 ಮತ್ತು 4
Question 5 Explanation: 
2 ಮತ್ತು 3
Question 6

6.ಗ್ರಾಮ ಪಂಚಾಯಿತಿಗಳಲ್ಲಿ ಜಮಾಬಂದಿ ಕುರಿತಾದ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

1.ಎಲ್ಲಾ ಗ್ರಾಮ ಪಂಚಾಯಿತಿಗೆ ಜಮಾಬಂದಿಯನ್ನು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಕೈಗೊಳ್ಳುವರು

2.ಜಮಾಬಂದಿ ಕೈಗೊಳ್ಳಲು ಸಭೆಯ 2/3 ರಷ್ಟು ಕೋರಂ ಅಗತ್ಯ

3.ಗ್ರಾಮ ಪಂಚಾಯಿತಿಗಳಿಗಿರುವಂತೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೂ ಜಮಾಬಂದಿ ಇದೆ

A
1 ಮತ್ತು 3 ಸರಿಯಾಗಿದೆ
B
1 ಮತ್ತು 2 ಸರಿಯಾಗಿದೆ
C
ಮೇಲಿನ ಎಲ್ಲವೂ ಸರಿಯಾಗಿದೆ
D
ಮೇಲಿನ ಎಲ್ಲವೂ ತಪ್ಪಾಗಿದೆ
Question 6 Explanation: 
ಮೇಲಿನ ಎಲ್ಲವೂ ತಪ್ಪಾಗಿದೆ
Question 7

7.ಗ್ರಾಮ ಪಂಚಾಯಿತಿಯಲ್ಲಿ ಪ್ರತಿ ವರ್ಷ ಆಯವ್ಯಯವನ್ನು ಯಾವ ಅವಧಿಯಲ್ಲಿ ತಯಾರಿಸಲಾಗುತ್ತದೆ?

A
ಫೆಬ್ರವರಿ 1 ರಿಂದ ಮಾರ್ಚ್ 10 ರೊಳಗಿನ ಅವಧಿಯಲ್ಲಿ ನಡೆಯುವ ಸಭೆಯಲ್ಲಿ
B
ಜನವರಿ 1 ರಿಂದ ಫೆಬ್ರವರಿ 10 ರೊಳಗಿನ ಅವಧಿಯಲ್ಲಿ ನಡೆಯುವ ಸಭೆಯಲ್ಲಿ
C
ಮಾರ್ಚ್ 1 ರಿಂದ ಮಾರ್ಚ್ 10 ರೊಳಗಿನ ಅವಧಿಯಲ್ಲಿ ನಡೆಯುವ ಸಭೆಯಲ್ಲಿ
D
ಅಕ್ಟೋಬರ್ 2 ರಿಂದ ನವೆಂಬರ್ 14 ರೊಳಗಿನ ಅವಧಿಯಲ್ಲಿ ನಡೆಯುವ ಸಭೆಯಲ್ಲಿ
Question 7 Explanation: 
ಫೆಬ್ರವರಿ 1 ರಿಂದ ಮಾರ್ಚ್ 10 ರೊಳಗಿನ ಅವಧಿಯಲ್ಲಿ ನಡೆಯುವ ಸಭೆಯಲ್ಲಿ
Question 8

8. ಗ್ರಾಮ ಪಂಚಾಯಿತಿ ಕೆಳಕಂಡ ಯಾವ ಆಸ್ತಿಗಳಿಗೆ ತೆರಿಗೆ ವಿಧಿಸಿ- ಸಂಗ್ರಹಿಸುವ ಅಧಿಕಾರ ಇಲ್ಲ?

A
ಸರ್ಕಾರಿ ನೌಕರರ ವಸತಿ ಗೃಹ
B
ಪೂಜಾ ಸ್ಥಳಗಳಿಗೆ ಸೇರಿದ ವಾಣಿಜ್ಯ ಉದ್ದೇಶದ ಕಟ್ಟಡ
C
ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಪೂಜಾಸ್ಥಳದ ಕಟ್ಟಡ
D
ಮದ್ಯ ಮಾರಾಟ ಅಂಗಡಿಯ ಕಟ್ಟಡ ತೆರಿಗೆ
Question 8 Explanation: 

( ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಪೂಜಾಸ್ಥಳದ ಕಟ್ಟಡಗಳ ಮೇಲೆ ಗ್ರಾಮ ಪಂಚಾಯಿತಿ ನೇರವಾಗಿ ತೆರಿಗೆ ವಿಧಿಸುವಂತಿಲ್ಲ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪೂಜಾ ಸ್ಥಳಗಳು ಆದಾಯ ಗಳಿಸುತ್ತಿದ್ದರೆ ಈ ಆದಾಯದ ಒಂದು ಭಾಗವನ್ನು ತೆರಿಗೆಯಾಗಿ ತನಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ/ಧಾರ್ಮಿಕ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿ ತೆರಿಗೆ ಪಡೆಯಬಹುದಾಗಿದೆ)

Question 9

9.ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕೆಳಕಂಡ ಅಧಿಕಾರಿಗಳ ಸರಿಯಾದ ಏರಿಕೆ ಕ್ರಮ ಯಾವುದು?

A
ಪಂ.ಅ.ಅ., ಕಾರ್ಯನಿರ್ವಾಹಕ ಅಧಿಕಾರಿ, ಕಾರ್ಯದರ್ಶಿ, ಉಪಕಾರ್ಯದರ್ಶಿ
B
ಕಾರ್ಯದರ್ಶಿ, ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯಪಾಲಕ ಅಧಿಕಾರಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ
C
ಕಾರ್ಯದರ್ಶಿ, ಪಂ.ಅ.ಅ., ಸಹಾಯಕ ಕಾರ್ಯದರ್ಶಿ, ಉಪ ಕಾರ್ಯದರ್ಶಿ
D
ಪಂ.ಅ.ಅ., ಉಪ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
Question 9 Explanation: 
ಕಾರ್ಯದರ್ಶಿ, ಪಂ.ಅ.ಅ., ಸಹಾಯಕ ಕಾರ್ಯದರ್ಶಿ, ಉಪ ಕಾರ್ಯದರ್ಶಿ
Question 10

10. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಯಾರು ಪಾಲ್ಗೊಳ್ಳಬಹುದು?

A
ಕಾರ್ಯದರ್ಶಿ, ಪಂ.ಅ.ಅ., ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು
B
ಕಾರ್ಯದರ್ಶಿ, ಪಂ.ಅ.ಅ., ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾಲೂಕು ಪಂಚಾಯಿತಿ ಅಧ್ಯಕ್ಷರು
C
ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು
D
ಪಂ.ಅ.ಅ., ಗ್ರಾಮ ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು
Question 10 Explanation: 
ಕಾರ್ಯದರ್ಶಿ, ಪಂ.ಅ.ಅ., ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು
There are 10 questions to complete.

 ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

 

14 Responses to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-13”

 1. ಸಂತೋಷ್ ಗೌಡರ says:

  ಧನ್ಯವಾದಗಳು ಸರ್

 2. Harish. A says:

  Supper

 3. MohanBabu GN says:

  Its Helpfull for Job Seekers

  Thank you……….

 4. Jagadeesh h.b says:

  Good sir thank u

 5. Praveenkumar N N says:

  Very nice and usefull for all kannada medium sudents

 6. Chandru says:

  It’s very helpfull for getting the job

 7. Chandru says:

  It’s very helpfull for getting the job and it’a new and new think

 8. Chandru says:

  It’s very helpfull for getting the job and it’s a new and good think

 9. Lakshminarayan says:

  Super

 10. Radha says:

  Thank u sooo much sir

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.