ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-27

Question 1

1.ಭಾರತದಲ್ಲಿ ಯಾವುದೇ ಒಂದು ರಾಜಕೀಯ ಪಕ್ಷವನ್ನು ಕೆಳಕಂಡ ಯಾವ ಸಂದರ್ಭದಲ್ಲಿ “ರಾಜ್ಯ ಪಕ್ಷ” ಎಂದು ಪರಿಗಣಿಸಲಾಗುತ್ತದೆ?

A
ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳ ಶಾಸನ ಸಭೆಗಳಿಗೆ ಅಥವಾ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಚಲಾಯಿಸಿದ ಊರ್ಜಿತ ಮತಗಳಲ್ಲಿ ಅದು ಶೇಕಡ ನಾಲ್ಕಕ್ಕಿಂತ ಕಡಿಮೆ ಮತ ಗಳಿಸಿದಾಗ
B
ರಾಜ್ಯದ ಶಾಸನ ಸಭೆಗೆ ಸಾರ್ವತ್ರಿಕ ಚುನಾವಣೆ ನಡೆದ ಸಂದರ್ಭದಲ್ಲಿ ಚಲಾವಣೆಯಾದ ಊರ್ಜಿತ ಮತಗಳಲ್ಲಿ ಅದು ಶೇಕಡ ಆರಕ್ಕಿಂತ ಕಡಿಮೆ ಮತ ಗಳಿಸಿದಾಗ
C
ಸಂಬಂಧಪಟ್ಟ ರಾಜ್ಯದ ಶಾಸನ ಸಭೆಗೆ ಅಥವಾ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಚಲಾಯಿಸಿದ ಊರ್ಜಿತ ಮತಗಳಲ್ಲಿ ಅದು ಶೇಕಡ ನಾಲ್ಕಕ್ಕಿಂತ ಕಡಿಮೆ ಮತ ಗಳಿಸಿದಾಗ
D
ಸಂಬಂಧಪಟ್ಟ ರಾಜ್ಯದ ಶಾಸನ ಸಭೆಗೆ ಅಥವಾ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳೆಲ್ಲರಿಗೂ ಚಲಾಯಿಸಿದ ಊರ್ಜಿತ ಮತಗಳಲ್ಲಿ ಅದು ಶೇಕಡ ಆರಕ್ಕಿಂತ ಕಡಿಮೆ ಮತ ಗಳಿಸಿದಾಗ
Question 1 Explanation: 
ರಾಜ್ಯದ ಶಾಸನ ಸಭೆಗೆ ಸಾರ್ವತ್ರಿಕ ಚುನಾವಣೆ ನಡೆದ ಸಂದರ್ಭದಲ್ಲಿ ಚಲಾವಣೆಯಾದ ಊರ್ಜಿತ ಮತಗಳಲ್ಲಿ ಅದು ಶೇಕಡ ಆರಕ್ಕಿಂತ ಕಡಿಮೆ ಮತ ಗಳಿಸಿದಾಗ
Question 2

2.ಭೂಮಿಯ ಮೇಲ್ಮೈಯಿಂದ ಅದರ ಕೇಂದ್ರ ಭಾಗದವರೆಗೆ ವಿವಿಧ ಪದರಗಳು ಈ ಕೆಳಕಂಡ ಕ್ರಮದಲ್ಲಿರುತ್ತವೆ

A
ಗಟ್ಟಿಪದರ, ಕವಚ, ಹೊರತಿರುಳು, ಒಳತಿರುಳು
B
ಹೊರತಿರುಳು, ಕವಚ, ಗಟ್ಟಿಪದರ, ಒಳತಿರುಳು
C
ಕವಚ, ಗಟ್ಟಿಪದರ, ಒಳತಿರುಳು, ಹೊರತಿರುಳು
D
ಒಳತಿರುಳು, ಗಟ್ಟಿಪದರ, ಕವಚ, ಹೊರತಿರುಳು
Question 2 Explanation: 
ಗಟ್ಟಿಪದರ, ಕವಚ, ಹೊರತಿರುಳು, ಒಳತಿರುಳು
Question 3

3.ಭಾರತದಲ್ಲಿ ನೀರಾವರಿಯ ಮುಖ್ಯ ಆಕರ ಯಾವುದು?

A
ಚಿಲುಮೆಗಳು
B
ಕಾಲುವೆಗಳು
C
ಕೆರೆಗಳು
D
ಕೊಳವೆಬಾವಿಗಳು ಮತ್ತು ಬಾವಿಗಳು
Question 3 Explanation: 
ಕೊಳವೆಬಾವಿಗಳು ಮತ್ತು ಬಾವಿಗಳು
Question 4

4.ಭಾರತ ಸರ್ಕಾರಕ್ಕೆ ಈ ಕೆಳಗಿನ ಯಾವ ಮೂಲಗಳಿಂದ ಅತಿ ಹೆಚ್ಚು ತೆರಿಗೆ ಆದಾಯ ಸಂಗ್ರಹವಾಗುತ್ತದೆ?

A
ಅಬಕಾರಿ ಶುಲ್ಕಗಳು, ಭೂಕಂದಾಯ ಮತ್ತು ಸೀಮಾ ಸುಂಕಗಳು
B
ಅಬಕಾರಿ ಶುಲ್ಕಗಳು, ವರಮಾನ ತೆರಿಗೆ ಮತ್ತು ಸೀಮಾ ಸುಂಕಗಳು
C
ಅಬಕಾರಿ ಶುಲ್ಕಗಳು, ಸಂಪತ್ತಿನ ತೆರಿಗೆ ಮತ್ತು ವಹಿವಾಟು ತೆರಿಗೆ
D
ಅಬಕಾರಿ ಶುಲ್ಕಗಳು, ಕೃಷಿ ವರಮಾನ ತೆರಿಗೆ ಮತ್ತು ಸೀಮಾ ಸುಂಕಗಳು
Question 4 Explanation: 
ಅಬಕಾರಿ ಶುಲ್ಕಗಳು, ವರಮಾನ ತೆರಿಗೆ ಮತ್ತು ಸೀಮಾ ಸುಂಕಗಳು
Question 5

5. ಭಾರತದಲ್ಲಿ ವಾಣಿಜ್ಯ ಬ್ಯಾಂಕ್ ಗಳು ಸಾಲ ನೀಡುವ ಆದ್ಯತಾ ವಲಯಗಳು ಈ ಕೆಳಕಂಡಂತಿವೆ:

A
ಕೃಷಿ, ಸಣ್ಣ ಪ್ರಮಾಣದ ಕೈಗಾರಿಕೆಗಳು ಹಾಗೂ ಚಿಕ್ಕ ವ್ಯವಹಾರಗಳು
B
ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಹಾಗೂ ವ್ಯಾಪಾರ ಚಟುವಟಿಕೆಗಳು
C
ಭಾರೀ ಕೈಗಾರಿಕೆಗಳು, ಕೃಷಿ ಪದಾರ್ಥಗಳ ರಫ್ತು ಹಾಗೂ ಶೇರುಗಳ ಖರೀದಿ
D
ಕೃಷಿ, ಗ್ರಾಹಕ ಬಾಳಿಕೆಯ ವಸ್ತುಗಳ ಖರೀದಿ ಹಾಗೂ ಗೃಹ ನಿರ್ಮಾಣ
Question 5 Explanation: 
ಕೃಷಿ, ಸಣ್ಣ ಪ್ರಮಾಣದ ಕೈಗಾರಿಕೆಗಳು ಹಾಗೂ ಚಿಕ್ಕ ವ್ಯವಹಾರಗಳು
Question 6

6.ಮಾಣಿಕ್ಯ’ ಎಂಬ ಪ್ರಶಸ್ತ ಶಿಲೆಯು ರಾಸಾಯನಿಕವಾಗಿ ಈ ಕೆಳಕಂಡದರ ಸ್ಫಟಿಕವಾಗಿದೆ

A
ರಂಜಕ ಮಂದ ದ್ರವ ಸೇರಿದ ಸಿಲಿಕಾನ್
B
ಸಿಲಿಕಾನ್ ಕಾರ್ಬೈಡ್
C
ನೀರಿನ ಕಣಗಳನ್ನು ಹೊಂದಿರುವ ಸಿಲಿಕಾನ್ ಡಯಾಕ್ಸೈಡ್
D
ಕ್ರೋಮಿಯಂ ಮಂದ ದ್ರವ ಸೇರಿದ ಅಲ್ಯೂಮಿನಿಯಂ ಅಕ್ಸೈಡ್
Question 6 Explanation: 
ಕ್ರೋಮಿಯಂ ಮಂದ ದ್ರವ ಸೇರಿದ ಅಲ್ಯೂಮಿನಿಯಂ ಅಕ್ಸೈಡ್
Question 7

7.‘ಮೊಬೈಲ್ ಸಂವಹನ’ದಲ್ಲಿ ಬಳಸಲಾಗುವ ವಿದ್ಯುತ್ ಕಾಂತೀಯ ಅಲೆಗಳು ………………………..

A
ಇನ್ಫ್ರಾರೆಡ್ ತರಂಗಗಳು
B
ಅತಿ ನೇರಳೆ ತರಂಗಗಳು
C
ಮೈಕ್ರೋವೇವ್ ಗಳು
D
ಕ್ಷ-ಕಿರಣಗಳು
Question 7 Explanation: 
ಮೈಕ್ರೋವೇವ್ ಗಳು
Question 8

8. ಕೆಳಕಂಡ ವಿವರಣೆಗಳನ್ನು ಗಮನಿಸಿ”

1. ಭೂಮಿಯು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಪರಿಭ್ರಮಿಸುತ್ತದೆ

2. ಸಮುದ್ರದ ನೀರಿನಲ್ಲಿ ಕರಗಿರುವ ಉಪ್ಪು, ನೀಲಿ ಕಾಂತಿಯನ್ನು ಹೊರಸೂಸುವುದರಿಂದ ಸಮುದ್ರವು ನೀಲಿಯಾಗಿ ಕಾಣುತ್ತದೆ

3. ಅಧಿಕ ಉಷ್ಣಾಂಶದ ಸೂಪರ್ ಕಂಡಕ್ಟರ್ ಗಳನ್ನು ಸೆರಾಮಿಕ್ ಪದಾರ್ಥದಿಂದ ತಯಾರಿಸಲಾಗುತ್ತದೆ

ಮೇಲ್ಕಂಡವುಗಳಲ್ಲಿ ಸರಿಯಾದ ವಿವರಣೆಗಳು ಯಾವುದು/ವು?

A
1 ಮತ್ತು 2
B
2 ಮತ್ತು 3
C
1 ಮತ್ತು 3
D
ಮೇಲಿನ ಎಲ್ಲವೂ
Question 8 Explanation: 
1 ಮತ್ತು 3
Question 9

9.ಮಾನವ ಶರೀರ ವ್ಯವಸ್ಥೆಯಲ್ಲಿ ಹಾರ್ಮೋನ್ ಗಳನ್ನು ನಿಯಂತ್ರಿಸುವ ವ್ಯವಸ್ಥೆ ಯಾವುದು?

A
ರೋಗನಿರೋಧಕ ವ್ಯವಸ್ಥೆ
B
ರಕ್ತ ಪರಿಚಲನಾ ವ್ಯವಸ್ಥೆ
C
ಎಂಡೋಕ್ರೈನ್ ವ್ಯವಸ್ಥೆ
D
ಸಂತಾನೋತ್ಪತ್ತಿ ವ್ಯವಸ್ಥೆ
Question 9 Explanation: 
ಎಂಡೋಕ್ರೈನ್ ವ್ಯವಸ್ಥೆ
Question 10

10.ಯಾವ ರಾಜ್ಯಗಳ ನಡುವೆ ಮಹದಾಯಿ (ಮಾಂಡೋವಿ) ನದಿಯ ನೀರಿನ ವಿವಾದ ನಡೆಯುತ್ತಿದೆ?

A
ಕರ್ನಾಟಕ ಮತ್ತು ತಮಿಳುನಾಡು
B
ಕರ್ನಾಟಕ ಮತ್ತು ಮಹಾರಾಷ್ಟ್ರ
C
ಕರ್ನಾಟಕ, ಗೋವ ಮತ್ತು ಮಹಾರಾಷ್ಟ್ರ
D
ಕರ್ನಾಟಕ ಮತ್ತು ಗೋವ
Question 10 Explanation: 
ಕರ್ನಾಟಕ ಮತ್ತು ಗೋವ
There are 10 questions to complete.

5 Thoughts to “ಸಾಮಾನ್ಯ ಜ್ಞಾನ ಕ್ವೀಜ್ 26”

  1. jainuddin mujawar

    Super quiz

  2. Sir please give down load option. Ur’s institute created difficult questions& value able questions. Thank u.

  3. Sir please give down load option.

Leave a Comment

This site uses Akismet to reduce spam. Learn how your comment data is processed.