ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -15

Question 1

1.2016ನೇ ಸಾಲಿನ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಯಾರನ್ನು ಆಯ್ಕೆಮಾಡಲಾಗಿದೆ?

A
ದೇವನೂರು ಮಹಾದೇವ
B
ಚಂದ್ರಶೇಖರ ಕಂಬಾರ
C
ಜಿ ಎಸ್ ಶಿವರುದ್ರಪ್ಪ
D
ಎಸ್ ಎಲ್ ಭೈರಪ್ಪ
Question 1 Explanation: 
ದೇವನೂರು ಮಹಾದೇವ:

ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು 2016ನೇ ಸಾಲಿನ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕುವೆಂಪು ಪ್ರತಿಷ್ಠಾನ ನೀಡುವ ಈ ಪ್ರಶಸ್ತಿಯನ್ನು ಕನ್ನಡನಾಡಿನ ಖ್ಯಾತ ಕವಿ ಕುವೆಂಪು ಅವರ ಜನ್ಮದಿನವಾದ ಅಂಗವಾಗಿ ಡಿ.1ರಂದು ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೋ.ಹಂಪ ನಾಗರಾಜಯ್ಯ ತಿಳಿಸಿದ್ದಾರೆ.

Question 2

2.ಈ ಕೆಳಗಿನ ಯಾವ ಸಮಿತಿ ರಾಜ್ಯದಲ್ಲಿ ಅಡಿಕೆ ಬೆಳೆಗೆ ಪ್ರತ್ಯೇಕ ಮಂಡಳಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಶಿಫಾರಸ್ಸು ಮಾಡಿದೆ?

A
ಡಾ. ಡಿ.ಎಲ್.ಮಹೇಶ್ವರ್ ಸಮಿತಿ
B
ಡಾ. ನಾರಾಯಣಸ್ವಾಮಿ ಸಮಿತಿ
C
ಡಾ. ಮಹಂತೇಶ್ ಪಾಟೀಲ್ ಸಮಿತಿ
D
ಡಾ. ಚಂದ್ರಪ್ಪ ಸಮಿತಿ
Question 2 Explanation: 
ಡಾ. ಡಿ.ಎಲ್.ಮಹೇಶ್ವರ್ ಸಮಿತಿ:

ರಾಜ್ಯದ ಪ್ರಮುಖ ಬೆಳೆಯಾದ ಅಡಕೆ ಬೆಳೆಗೆ ಪ್ರತ್ಯೇಕ ಮಂಡಳಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಡಾ. ಡಿ.ಎಲ್.ಮಹೇಶ್ವರ್ ಸಮಿತಿ ಶಿಫಾರಸ್ಸು ಮಾಡಿದೆ. ರಾಜ್ಯದಲ್ಲಿ ಅಡಿಕೆ ಮತ್ತು ಈರುಳ್ಳಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಬಾಗಲಕೋಟೆಯಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ| ಡಿ.ಎಲ್.ಮಹೇಶ್ವರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸದ್ಯ ಈ ತಜ್ಞರ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಫಾರಸು ಮಾಡಿದ್ದು ಅಡಿಕೆ ಬೆಳೆಗೆ ಪ್ರತ್ಯೇಕ ಮಂಡಳಿ ರಚಿಸುವಂತೆ ಸಲಹೆ ನೀಡಿದೆ.

Question 3

3.ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಐದನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ತಂಡ ಯಾವುದು?

A
ಬಳ್ಳಾರಿ ಟಸ್ಕರ್ಸ್
B
ನಮ್ಮ ಶಿವಮೊಗ್ಗ
C
ಮೈಸೂರು ವಾರಿಯರ್ಸ್
D
ರಾಕ್ ಸ್ಟಾರ್ಸ್
Question 3 Explanation: 
ಹುಬ್ಬಳ್ಳಿ ಟೈಗರ್ಸ್:

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಐದನೇ ಆವೃತ್ತಿಯಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬಳ್ಳಾರಿ ಟಸ್ಕರ್ಸ್ ಗೆ ಇದು ಚೊಚ್ಚಲ ಪ್ರಶಸ್ತಿಯಾಗಿದೆ.

Question 4

4.ಆತ್ಮಹತ್ಯೆ ಒಳಗಾದ ರೈತರ ಅವಲಂಬಿತ ಕುಟುಂಬ ಸದಸ್ಯರುಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಪ್ರಾರಂಭಿಸಿರುವ ಯೋಜನೆ ಯಾವುದು?

A
ಇಂದಿರಾ ಸುರಕ್ಷಾ ಯೋಜನೆ
B
ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆ
C
ಜ್ಯೋತಿ ಸಂಜೀವಿನಿ ಯೋಜನೆ
D
ರಾಜೀವ್ ಆರೋಗ್ಯ ಭಾಗ್ಯ
Question 4 Explanation: 
ಇಂದಿರಾ ಸುರಕ್ಷಾ ಯೋಜನೆ:

ರಾಜ್ಯ ಸರ್ಕಾರವು ಆತ್ಮಹತ್ಯೆಗೆ ಒಳಗಾದ ರೈತರ ಅವಲಂಬಿತ ಕುಟುಂಬ ಸದಸ್ಯರುಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ಮಹತ್ವದ ಉದ್ದೇಶದೊಂದಿಗೆ ಇಂದಿರಾ ಸುರಕ್ಷಾ ಯೋಜನೆಯನ್ನು ಪ್ರಾರಂಭಿಸಿದೆ.

Question 5

5.ಹೈದ್ರಾಬಾದ್-ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪ್ರಮಾಣ ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರ ನೇಮಿಸಿರುವ ಸಮಿತಿಯ ಅಧ್ಯಕ್ಷರು ಯಾರು?

A
ಪ್ರೊ. ಎಂ.ಎಸ್. ಸುಭಾಷ್
B
ಪ್ರೊ. ನಂಜುಂಡೇಗೌಡ
C
ಡಾ. ಚಂದ್ರಕಾಂತ್ ಬೆಲ್ಲದ
D
ಪ್ರೊ. ಉದಯಕುಮಾರ್ ಉಪ್ಪರಗಿ
Question 5 Explanation: 
ಪ್ರೊ. ಎಂ.ಎಸ್. ಸುಭಾಷ್:

ಹೈದ್ರಾಬಾದ್‌ ಕರ್ನಾಟಕದ 6 ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣ ಪ್ರಮಾಣ ಹೆಚ್ಚಿಸಲು ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್‌. ಸುಭಾಷ್‌ ಅವರ ನೇತೃತ್ವದಲ್ಲಿ ಕುಲಪತಿಗಳ ಸಮಿತಿ ರಚಿಸಲಾಗಿದೆ. ಪಿಯು ನಂತರ ಪದವಿ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳ ಪ್ರಮಾಣ ದೇಶದಲ್ಲಿ ಶೇ 19ರಷ್ಟು ಇದ್ದರೆ, ರಾಜ್ಯದಲ್ಲಿ ಶೇ 26 ಇದೆ. ಆದರೆ, ಹೈದರಾಬಾದ್‌–ಕರ್ನಾಟಕದಲ್ಲಿ ರಾಷ್ಟ್ರದ ಸರಾಸರಿಗಿಂತಲೂ ಕಡಿಮೆ ಇದೆ. ಅಂದರೆ, ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವವರ ಪ್ರಮಾಣ ಒಟ್ಟಾರೆ ಶೇ 10ರಷ್ಟು ಮಾತ್ರ ಇದೆ. ಈ ಪ್ರಮಾಣ ಹೆಚ್ಚಿಸಲು ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ, ಉಪನ್ಯಾಸಕರಿಗೆ ತರಬೇತಿ, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಒದಗಿಸಲು ಯಾವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಲಿದೆ.

Question 6

6.ಸೌರಶಕ್ತಿ ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಪ್ರಥಮ ತಾಲೂಕು ಪಂಚಾಯತ್ ಯಾವುದು?

A
ಕೊಪ್ಪಳ ತಾಲೂಕ್ ಪಂಚಾಯತ್
B
ಗದಗ ತಾಲೂಕ್ ಪಂಚಾಯತ್
C
ಚಿಕ್ಕಬಳ್ಳಾಪುರ ತಾಲೂಕ್ ಪಂಚಾಯತ್
D
ಹಾವೇರಿ ತಾಲೂಕ್ ಪಂಚಾಯತ್
Question 6 Explanation: 
ಗದಗ ತಾಲೂಕ್ ಪಂಚಾಯತ್:

ಗದಗ ತಾಲೂಕು ಪಂಚಾಯತ್ ಕಚೇರಿ ಸೋಲಾರ್ ಘಟಕ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಉತ್ಪಾದನೆ ಮತ್ತು ಬಳಕೆಯಲ್ಲಿ ಸ್ವಾವಲಂಬನೆ ಕಂಡುಕೊಂಡಿದೆ. ಅಲ್ಲದೆ, ಸೌರಶಕ್ತಿ ಹೊಂದಿರುವ ರಾಜ್ಯದ ಪ್ರಥಮ ತಾಲೂಕು ಪಂಚಾಯತ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 6 ಹವಾನಿಯಂತ್ರಿತ ಕೊಠಡಿಗಳು ಸೇರಿದಂತೆ ಇಡೀ ಕಚೇರಿ ಸೌರವಿದ್ಯುತ್ನಿಂದಲೇ ಕಾರ್ಯ ನಿರ್ವಹಿಸುತ್ತಿದೆ. 2016ರ ಜೂನ್ ತಿಂಗಳಲ್ಲೇ ಸೌರ ಘಟಕ ಕಾಮಗಾರಿ ಪೂರ್ಣಗೊಂಡಿದ್ದು, ಸಿಬ್ಬಂದಿಗೆ ತರಬೇತಿ, ಪರೀಕ್ಷಾರ್ಥ ಪ್ರಕ್ರಿಯೆಗಳು ಮುಗಿದಿದೆ. ಆಗಸ್ಟ್ನಿಂದ ಸಂಪೂರ್ಣ ಸೌರ ವಿದ್ಯುತ್ ಬಳಸಲಾಗುತ್ತಿದೆ.

Question 7

7.ಈ ಕೆಳಗಿನ ಜಿಲ್ಲೆಗಳಲ್ಲಿ ಕ್ರೋಮಿಯಂ ಅದಿರು ದೊರೆಯುವ ಜಿಲ್ಲೆಗಳು ಯಾವುವು?

I) ಮೈಸೂರು

II) ಹಾಸನ

III) ಚಿತ್ರದುರ್ಗ

IV) ದಾವಣಗೆರೆ

ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:

A
I & III
B
I & II
C
III & IV
D
I, II, III & IV
Question 7 Explanation: 
I & II
Question 8

8.ಇತ್ತೀಚೆಗೆ ನಿಧನರಾದ “ಆರ್ಯ ಆಚಾರ್ಯ” ರವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?

A
ಸಾಹಿತ್ಯ
B
ಚಿತ್ರಕಲೆ
C
ಸಂಗೀತ
D
ರಾಜಕೀಯ
Question 8 Explanation: 
ಸಾಹಿತ್ಯ:

ಸಾಹಿತಿ, ರಂಗಕರ್ಮಿ, ಕಲಾವಿದ ಹಾಗೂ ಚಿತ್ರ ನಿರ್ದೇಶಕ ಆರ್ಯ ಆಚಾರ್ಯ ನಿಧನರಾದರು. ಕಳೆದ 43 ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿದ್ದ ಅವರು, ಕರ್ನಾಟಕ ವಿವಿ ಯಿಂದ ಎಂ.ಎ. ಪದವಿ ಪಡೆದಿದ್ದರು. ಶಿರೂರ ಮಠದ ಪೀಠಾಧಿಪತಿಯಾಗಿದ್ದ ಅವರು, 1973ರಲ್ಲಿ ಪೀಠ ತ್ಯಾಗ ಮಾಡಿ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮುಖ್ಯಸ್ಥ ನಂದನ್ ನಿಲೇಕಣಿ ಅವರ ಅಕ್ಕ ವಿದ್ಯಾ ಅವರನ್ನು ಮದುವೆಯಾಗಿದ್ದರು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಜಿ.ಎಸ್.ಶೆಣೈ ಸ್ಮಾರಕ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Question 9

9.ರಾಜ್ಯದಲ್ಲಿ ರೈಲು ಸಾಂದ್ರತೆಯು 1000 ಕಿ.ಮೀ ಗೆ _____ ಕಿ.ಮೀ ಇದೆ?

A
20.20 ಕಿ.ಮೀ
B
16.20 ಕಿ.ಮೀ
C
19.34 ಕಿ.ಮೀ
D
21.22 ಕಿ.ಮೀ
Question 9 Explanation: 
16.20 ಕಿ.ಮೀ
Question 10

10.ದುಬೈನಲ್ಲಿ ನಡೆದ “ದ್ವಿತೀಯ ಮಧ್ಯಪ್ರಾಚ್ಯ ಕನ್ನಡ ಸಮ್ಮೇಳನ”ದ ಅಧ್ಯಕ್ಷತೆಯನ್ನು ವಹಿಸಿದ್ದವರು ______?

A
ಡಾ.ಗೊ.ರು. ಚೆನ್ನಬಸಪ್ಪ
B
ಚನ್ನವೀರ ಕಣವಿ
C
ಚಂದ್ರಶೇಖರ ಕಂಬಾರ
D
ಎಸ್ ಎಲ್ ಭೈರಪ್ಪ
Question 10 Explanation: 
ಡಾ.ಗೊ.ರು. ಚೆನ್ನಬಸಪ್ಪ:

ಡಾ.ಗೊ.ರು.ಚೆನ್ನಬಸಪ್ಪ ರವರು “ದ್ವಿತೀಯ ಮಧ್ಯಪ್ರಾಚ್ಯ ಕನ್ನಡ ಸಮ್ಮೇಳನ”ದ ಅಧ್ಯಕ್ಷತೆಯನ್ನ ವಹಿಸಿದ್ದರು.

There are 10 questions to complete.

12 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -15”

  1. ಧನ್ಯವಾದಗಳು ಸಾರ್

  2. Quation 3.wrong ide sir.kpl nalii win agiddu bellary tuskers.
    Not hubballi…

  3. Ramesh banad

    Gud questions

  4. ಸಂತೋಷ್ ಗೌಡರ

    ಧನ್ಯವಾದಗಳು ಸರ್

  5. ayyappa

    It’s good very usefulness for us

  6. Ramyagowda

    Very useful questions thanks sir

  7. thimmaraja k p

    Uploaded madiro old qwestions elli sigtavee sir

    1. Karunaduexams

      Hi,
      Go to quiz subsection from the top header category

  8. amar

    you have been helpful sir..thank you so much

  9. amar

    dear Sir we are not getting download option for uploaded questions

Leave a Comment

This site uses Akismet to reduce spam. Learn how your comment data is processed.