ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -13

Question 1

1.ಈ ಕೆಳಗಿನ ಯಾವ ಜಿಲ್ಲೆಯಲ್ಲಿ “ಶೌರ್ಯ ಅಕಾಡೆಮಿ”ಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ?

A
ಧಾರಾವಾಡ
B
ಚಿತ್ರದುರ್ಗ
C
ಬೆಳಗಾವಿ
D
ದಾವಣಗೆರೆ
Question 1 Explanation: 
ಬೆಳಗಾವಿ :

ಸಂಗೊಳ್ಳಿ ರಾಯಣ್ಣನ ಹುಟ್ಟೂರಾದ ಸಂಗೊಳ್ಳಿಯಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮಾದರಿಯಲ್ಲಿ ಶೌರ್ಯ ಅಕಾಡೆಮಿ ಹಾಗೂ ಸೈನಿಕ ಶಾಲೆ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಲ್ಲದೇ, ಮಹಾಭಾರತದ ಇತಿಹಾಸ ಸಾರುವ ಹರ್ಯಾಣದ ಬಳಿ ಇರುವ "ಕುರುಕ್ಷೇತ್ರ' ನಗರದ ಮಾದರಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ನೇಣುಗಂಬಕ್ಕೆ ಏರಿಸಿದ ಬೆಳಗಾವಿ ಜಿಲ್ಲೆ ನಂದಗಡವನ್ನು ಅಭಿವೃದ್ಧಿಪಡಿಸಲು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಶೌರ್ಯ ಅಕಾಡೆಮಿ ಮತ್ತು ಸೈನಿಕ ಶಾಲೆ ನಿರ್ಮಾಣಕ್ಕೆ ಅಗತ್ಯವಿರುವ 100 ಎಕರೆ ಜಮೀನು ಸ್ವಾಧೀನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

Question 2

2. _______ ಮೆವ್ಯಾ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ರಾಜ್ಯದ ಮೊದಲ ಘಟಕವನ್ನು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಬಿಟಿಪಿಎಸ್)ದಲ್ಲಿ ಇತ್ತೀಚೆಗೆ ಆರಂಭಸಿಲಾಗಿದೆ?

A
700 ಮೆವ್ಯಾ
B
800 ಮೆವ್ಯಾ
C
500 ಮೆವ್ಯಾ
D
400 ಮೆವ್ಯಾ
Question 2 Explanation: 
700 ಮೆವ್ಯಾ:

ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಬಿಟಿಪಿಎಸ್)ದಲ್ಲಿ 700 ಮೆಗಾವ್ಯಾಟ್ ಸಾಮರ್ಥ್ಯದ ಮೂರನೇ ಘಟಕ ಉತ್ಪಾದನೆ ಆರಂಭಿಸಿದೆ. ಪ್ರತಿ ದಿನ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ರಾಜ್ಯದ ಮೊದಲ ಘಟಕ ಇದಾಗಿದೆ. ಬಿಟಿಪಿಎಸ್ ಪ್ರಸ್ತುತ ಪ್ರತಿನಿತ್ಯ 40 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಬಿಟಿಪಿಎಸ್ನಲ್ಲಿ ತಲಾ 500 ಮೆವ್ಯಾ ವಿದ್ಯುತ್ ಉತ್ಪಾದಿಸುವ ಎರಡು ಘಟಕಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದ್ದು, 700 ಮೆವ್ಯಾ ಸಾಮರ್ಥ್ಯದ ಮೂರನೇ ಘಟಕದ ಕಾರ್ಯಾರಂಭದಿಂದ ಪ್ರಸ್ತುತ 1700 ಮೆವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿದೆ.

Question 3

3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ಬೆಣ್ಣೆಹಳ್ಳ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ದುಂಡಸಿಯ ಬಳಿ ಜನ್ಮತಾಳುತ್ತದೆ

II) ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೆಣಸಗಿ ಬಳಿ ಬೆಣ್ಣೆಹಳ್ಳ ಮಲಪ್ರಭಾ ನದಿ ಸೇರುತ್ತದೆ

ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಯನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಉತ್ತರಿಸಿ:

A
ಹೇಳಿಕೆ I ಮಾತ್ರ
B
ಹೇಳಿಕೆ II ಮಾತ್ರ
C
ಎರಡು ಹೇಳಿಕೆ ತಪ್ಪು
D
ಎರಡು ಹೇಳಿಕೆ ಸರಿ
Question 3 Explanation: 
ಎರಡು ಹೇಳಿಕೆ ಸರಿ:

ಬೆಣ್ಣೆಹಳ್ಳ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ದುಂಡಸಿಯ ಬಳಿ ಜನ್ಮತಾಳುತ್ತದೆ. ಧಾರವಾಡ, ಗದಗ ಜಿಲ್ಲೆಗಳಲ್ಲಿ ಬೃಹದಾಕಾರವಾಗಿ ಒಟ್ಟು 138 ಕಿ.ಮೀ ಉದ್ದಕ್ಕೆ ಹರಿದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೆಣಸಗಿ ಬಳಿ ಮಲಪ್ರಭಾ ನದಿ ಸೇರುತ್ತದೆ. ಬೆನದಿಯಂತೆಯೇ ಇರುವ ಈ ಹಳ್ಳಕ್ಕೆ ಶಿಗ್ಗಾಂವಿ, ಕುಂದಗೋಳ, ಹುಬ್ಬಳ್ಳಿ, ಗದಗ, ನವಲಗುಂದ, ನರಗುಂದ ಮತ್ತು ರೋಣ ತಾಲ್ಲೂಕುಗಳಲ್ಲಿ ಹರಿಯುವ ಒಟ್ಟು 14 ಇತರ ಹಳ್ಳಗಳು ಸೇರುತ್ತವೆ.

Question 4

4. ಹಾರ ಕೂಡ ಮಠದ ವತಿಯಿಂದ ಸಂಗೀತ ಸಾಧಕರಿಗೆ ಕೊಡುವ 'ಶ್ರೀಚನ್ನರೇಣುಕ ಬಸವ ಪ್ರಶಸ್ತಿ'ಗೆ ಯಾರನ್ನು ಆಯ್ಕೆ ಮಾಡಲಾಗಿದೆ?

A
ಹಂಸಲೇಖ
B
ಸಂಗೀತಾ ಕಟ್ಟಿ
C
ರವಿ ಮೂಗೂರು
D
ವಿ ಮನೋಹರ್
Question 4 Explanation: 
ಸಂಗೀತಾ ಕಟ್ಟಿ:

ಬಸವಕಲ್ಯಾಣ ತಾಲ್ಲೂಕಿನ ಹಾರ ಕೂಡ ಮಠದ ವತಿಯಿಂದ ಸಂಗೀತ ಸಾಧಕರಿಗೆ ಕೊಡುವ 'ಶ್ರೀಚನ್ನರೇಣುಕ ಬಸವ ಪ್ರಶಸ್ತಿ'ಗೆ ಗಾಯಕಿ ಸಂಗೀತಾ ಕಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ 1 ಲಕ್ಷ ನಗದು, ಒಂದು ತೊಲ ಚಿನ್ನ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಹಾರಕೂಡ ಮಠದಲ್ಲಿ ಅಕ್ಟೋಬರ್ 10 ರಂದು ಆಯೋಜಿಸಿರುವ 30ನೇ ಪ್ರಚಾರೋಪನ್ಯಾಸ ಮಾಲೆ ಮತ್ತು ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Question 5

5. ಇತ್ತೀಚೆಗೆ ಬಿಡುಗಡೆಗೊಂಡ ಮೂರನೇ ಹಂತದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ರಾಜ್ಯದ ಯಾವ ನಗರ ಸ್ಥಾನ ಪಡೆದಿಲ್ಲ?

A
ಕೋಲಾರ
B
ಮಂಗಳೂರು
C
ಹುಬ್ಬಳ್ಳಿ-ಧಾರಾವಾಡ
D
ಶಿವಮೊಗ್ಗ
Question 5 Explanation: 
ಕೋಲಾರ:

ಮೂರನೇ ಹಂತದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಕರ್ನಾಟಕದ ಮಂಗಳೂರು, ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ ಮತ್ತು ತುಮಕೂರು ಸ್ಥಾನ ಪಡೆದಿವೆ. ಇವುಗಳಲ್ಲಿ ವಿದ್ಯುತ್, ನೀರು, ನೈರ್ಮಲ್ಯ ಮತ್ತು ಘನತ್ಯಾಜ್ಯ ವಿಲೇವಾರಿ, ಪರಿಣಾಮಕಾರಿ ಸಂಚಾರ ವ್ಯವಸ್ಥೆ ಮತ್ತು ಸಾರ್ವಜನಿಕ ಸಾರಿಗೆ, ಮಾಹಿತಿ ತಂತ್ರಜ್ಞಾನ ಸಂಪರ್ಕ ಮತ್ತು ಇ- ಆಡಳಿತ ಮತ್ತಿತರರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.

Question 6

6. ಹೈದ್ರಾಬಾದ್-ಕರ್ನಾಟಕ ವಿಮೋಚನೆ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಸೆಪ್ಟೆಂಬರ್ 10
B
ಅಕ್ಟೋಬರ್ 17
C
ನವೆಂಬರ್ 11
D
ಸೆಪ್ಟೆಂಬರ್ 17
Question 6 Explanation: 
ಸೆಪ್ಟೆಂಬರ್ 17:

ಹೈದ್ರಾಬಾದ್-ಕರ್ನಾಟಕ ವಿಮೋಚನೆ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ. ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರಕಿದ್ದರೂ ಹೈದ್ರಾಬಾದ್ ಕರ್ನಾಟಕಕ್ಕೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಹೈದ್ರಾಬಾದ್ ನಿಜಾಮರ ವಶದಲ್ಲಿದ್ದ ಹೈದ್ರಾಬಾದ್ ಕರ್ನಾಟಕ, ಭಾರತ ಸ್ವತಂತ್ರಗೊಂಡ ಒಂದು ವರ್ಷ ಒಂದು ತಿಂಗಳು ಎರಡು ದಿನದ ನಂತರ ಸ್ವಾತಂತ್ರ್ಯ ಪಡೆಯಿತು. ಹೀಗಾಗಿ ಈ ದಿನವನ್ನು ಹೈದ್ರಾಬಾದ್ ಕರ್ನಾಟಕ ವಿಮೋಚನೆ ದಿನವಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಇಲ್ಲಿಗೆ ಸ್ವಾತಂತ್ರ್ಯ ದೊರಕಿಸಲು ವಿಶೇಷವಾಗಿ ಹೋರಾಡಿದ ರಮಾನಂದ ತೀರ್ಥ, ಸರ್ದಾರ ವಲ್ಲಭಭಾಯಿ ಪಟೇಲ ಮೊದಲಾದವರನ್ನು ಈ ದಿನದಂದು ಸ್ಮರಿಸಲಾಗುತ್ತದೆ.

Question 7

7. ಈ ಕೆಳಗಿನ ಯಾವ ಜಲಪಾತಗಳು ಅಘನಾಶಿನಿ ನದಿಗೆ ಸಂಬಂಧಿಸಿವೆ?

I) ಊಂಚಳ್ಳಿ

II) ಶಿವಗಂಗೆ

III) ಇಳಿಮನೆ

ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಆರಿಸಿ:

A
I & II
B
I & III
C
II & III
D
I, II & III
Question 7 Explanation: 
I, II & III:

ಉತ್ತರಕನ್ನಡ ಜಿಲ್ಲೆಯ ಸಿರಸಿ ಬಳಿ ಹುಟ್ಟಿ ಹರಿಯುವ ಎರಡು ಹೊಳೆಗಳು ಸಿದ್ದಾಪುರ ತಾಲ್ಲೂಕಿನ ಮಟ್ಟೇಹಳ್ಳಿ ಎಂಬಲ್ಲಿ ಸಂಗಮಗೊಂಡು ಅಘನಾಶಿನಿ ಎಂಬ ಹೆಸರಿನಡಿ ಹರಿಯುತ್ತದೆ. ಊಂಚಳ್ಳಿ, ಶಿವಗಂಗೆ ಮತ್ತು ಇಳಿಮನೆ ಜಲಪಾತ ಈ ನದಿಯಿಂದ ಉಂಟಾಗಿರುವ

Question 8

8. ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ________ಎಂದು ಮರು ನಾಮಕರಣ ಮಾಡಲು ಸಚಿವ ಸಂಪುಟ ಸಭೆ ಇತ್ತೀಚೆಗೆ ಒಪ್ಪಿಗೆ ನೀಡಿದೆ?

A
ಕಿತ್ತೂರುರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ
B
ಅಕ್ಕಮಹಾದೇವಿ ವಿಶ್ವವಿದ್ಯಾಲಯ
C
ಅಬ್ಬಕ್ಕದೇವಿ ವಿಶ್ವವಿದ್ಯಾಲಯ
D
ಸರೋಜದೇವಿ ವಿಶ್ವವಿದ್ಯಾಲಯ
Question 8 Explanation: 

ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಲು ಸಚಿವ ಸಂಪುಟ ಸಭೆ ಇತ್ತೀಚೆಗೆ ಒಪ್ಪಿಗೆ ನೀಡಿದೆ.

Question 9

9. ರಾಜ್ಯದಲ್ಲಿ ಇತ್ತೀಚೆಗೆ ಸ್ಥಾಪಿಸಲಾದ “ಭೂಕಳಿಕೆ ನಿಷೇಧ ವಿಶೇಷ ನ್ಯಾಯಾಲದ” ಅಧ್ಯಕ್ಷರು ಯಾರು?

A
ನ್ಯಾ. ಶಿವಣ್ಣ
B
ನ್ಯಾ. ಎಚ್.ಎನ್.ನಾರಾಯಣ
C
ನ್ಯಾ. ನಾಗಮೋಹನ್ ದಾಸ್
D
ನ್ಯಾ. ಎಚ್.ಆರ್.ರೆಡ್ಡಿ
Question 9 Explanation: 
ನ್ಯಾ. ಎಚ್.ಎನ್.ನಾರಾಯಣ:

ಅಕ್ರಮ ಭೂ ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ, ಭೂಗಳ್ಳರಿಗೆ ಶಿಕ್ಷೆ ವಿಧಿಸಲು ಸ್ಥಾಪಿಸಲಾಗಿರುವ ‘ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ ದ ಅಧ್ಯಕ್ಷರಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾರಾಯಣ ಅವರನ್ನು ನೇಮಕಮಾಡಲಾಗಿದೆ. ಆರ್‌.ಎಚ್‌. ರೆಡ್ಡಿ ಹಾಗೂ ಬಿ. ಬಾಲಕೃಷ್ಣ

Question 10

10. ರಾಜ್ಯದಲ್ಲಿ ಶೇ.70 ಮತ್ತು ಅದಕ್ಕಿಂತ ಹೆಚ್ಚಿನ ಭೌಗೋಳಿಕ ಪ್ರದೇಶಗಳನ್ನು ಅರಣ್ಯಗಳು ಒಳಗೊಂಡಿರುವ ಜಿಲ್ಲೆಗಳು_____?

A
ಉತ್ತರ ಕನ್ನಡ ಮತ್ತು ಉಡುಪಿ
B
ಉಡುಪಿ ಮತ್ತು ಕೊಡಗು
C
ಉತ್ತರ ಕನ್ನಡ ಮತ್ತು ಕೊಡಗು
D
ಕೊಡಗು ಮತ್ತು ದಕ್ಷಿಣ ಕನ್ನಡ
Question 10 Explanation: 
ಉತ್ತರ ಕನ್ನಡ ಮತ್ತು ಕೊಡಗು:

ಉತ್ತರ ಕನ್ನಡ ಮತ್ತು ಕೊಡಗು ರಾಜ್ಯದಲ್ಲಿ ಶೇ.70 ಮತ್ತು ಅದಕ್ಕಿಂತ ಹೆಚ್ಚಿನ ಭೌಗೋಳಿಕ ಪ್ರದೇಶಗಳನ್ನು ಅರಣ್ಯಗಳು ಒಳಗೊಂಡಿರುವ ಜಿಲ್ಲೆಗಳಾಗಿವೆ. ಈ ಜಿಲ್ಲೆಗಳು ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯಪ್ರದೇಶವನ್ನು ಹೊಂದಿರುವ ಜಿಲ್ಲೆಗಳ ಪೈಕಿ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿವೆ.

There are 10 questions to complete.

8 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -13”

  1. Mahadevaswamy d b

    Very nice sir

  2. ಸಂತೋಷ್ ಗೌಡರ

    ಧನ್ಯವಾದಗಳು ಸರ್

  3. prashsnt bannigol

    Very nice

  4. Sir edaralli modalane
    5 answer maatra ede.
    Nantharada 5 ans

Leave a Comment

This site uses Akismet to reduce spam. Learn how your comment data is processed.