ಮೊದಲ ವಿಶ್ವ ಕಿವುಡರ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಂಚು ಗೆದ್ದ ಪ್ರಿಯೇಷ ದೇಶ್ಮುಖ್

ಭಾರತದ ಪ್ರಿಯೇಷ ದೇಶ್ಮುಖ್ ರವರು ಚೊಚ್ಚಲ ವಿಶ್ವ ಕಿವುಡರ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಮೊದಲ ವಿಶ್ವ ಕಿವುಡರ ಶೂಟಿಂಗ್ (World’s Deaf Shooting) ಚಾಂಪಿಯನ್ ಷಿಪ್ ಅನ್ನು ರಷ್ಯಾದ ಕಝಕ್ ನಲ್ಲಿ ಆಯೋಜಿಸಲಾಗಿತ್ತು. 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ದೇಶ್ಮುಖ್ ಅವರು 180.4 ಅಂಕಗಳಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡರು.

ಪ್ರಮುಖಾಂಶಗಳು:

  • ಪ್ರಥಮ ಸ್ಥಾನ: ಉಕ್ರೇನ್ನ ಸ್ವಿಟ್ಲಾನ ಯಾಟ್ಸೆಂಕೊ(Svitlana Yatsenko) 201.6 ಅಂಕಗಳೊಂದಿಗೆ ಪ್ರಥಮ ಸ್ಥಾನಗಳಿಸಿದರು
  • ದ್ವಿತೀಯ ಸ್ಥಾನ: ಸೆರ್ಬಿಯಾದ ಗೊರ್ಡನಾ ಮಿಕೊವಿಕ್ (Gordana Mikovic) 200.3 ಅಂಕದೊಂದಿಗೆ ಎರಡನೇ ಸ್ಥಾನವನ್ನು ಗಳಿಸಿದರು.
  • ತೃತೀಯ ಸ್ಥಾನ: ಭಾರತದ ಪ್ರಿಯೇಷ ದೇಶ್ಮುಖ್ ರವರು 180.4 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಗಿಟ್ಟಿಸಿಕೊಂಡರು.

2 Responses to “ಮೊದಲ ವಿಶ್ವ ಕಿವುಡರ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಂಚು ಗೆದ್ದ ಪ್ರಿಯೇಷ ದೇಶ್ಮುಖ್”

Leave a Reply

Your email address will not be published. Required fields are marked *