ಪಿಡಿಓ ಮತ್ತು ಕಾರ್ಯದರ್ಶಿ ಸೇರಿ ಸುಮಾರು 1400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿದು ಬಂದಿದೆ. ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-8

Question 1

1. ಗ್ರಾಮ ಪಂಚಾಯತಿ ಗ್ರಾಮ ಸಭಾಗೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಗ್ರಾಮ ಪಂಚಾಯತಿ ಅಧ್ಯಕ್ಷನು ಗ್ರಾಮ ಸಭೆಯ ಅಧ್ಯಕ್ಷತೆಯನ್ನ ವಹಿಸತಕ್ಕದ್ದು

II) ಎರಡು ಸಭೆಗಳ ಅಂತರ ಆರು ತಿಂಗಳಿಗೆ ಮೀರದಂತೆ ಇರತಕ್ಕದ್ದು

III) ಗ್ರಾಮ ಸಭೆಯನ್ನು ಕರೆಯಲು ಅಧ್ಯಕ್ಷನು ವಿಫಲವಾದರೆ ಪಿ.ಡಿ.ಓ ಅಂಥ ಸಭೆಯನ್ನು ಕರೆಯತಕ್ಕದ್ದು.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II ಮಾತ್ರ
B
II & III ಮಾತ್ರ
C
I & III ಮಾತ್ರ
D
ಮೇಲಿನ ಎಲ್ಲವೂ
Question 1 Explanation: 
ಹೇಳಿಕೆ ಒಂದು ಮತ್ತು ಎರಡು ಸರಿಯಾಗಿವೆ:

ಹೇಳಿಕೆ ಮೂರು ತಪ್ಪು ಏಕೆಂದರೆ ಗ್ರಾಮ ಸಭೆಯನ್ನು ಕರೆಯಲು ಅಧ್ಯಕ್ಷನು ವಿಫಲವಾದರೆ ಕಾರ್ಯನಿರ್ವಾಹಣಾಧಿಕಾರಿಯು ಅಂತಹ ಸಭೆಯನ್ನು ಕರೆಯತಕ್ಕದ್ದು [ಗಮನಿಸಿ: ಜನವಸತಿ ಮತ್ತು ವಾರ್ಡ್ ಸಭೆಯಲ್ಲಿ ಸಂಬಂಧಿಸಿದ ಸದಸ್ಯನು ಸಭೆ ಕರೆಯಲು ವಿಫಲವಾದರೆ ಸಂಬಂಧಪಟ್ಟ ಪಿ.ಡಿ.ಓ ಅಥವಾ ಸಂದರ್ಭನುಸಾರ ಕಾರ್ಯದರ್ಶಿ ಅಂತಹ ಸಭೆಯನ್ನು ಕರೆಯತಕ್ಕದ್ದು]. ಗಮನಿಸಿ: ಗ್ರಾಮ ಪಂಚಾಯತಿ ಅಧ್ಯಕ್ಷನು ಎಲ್ಲಾ ಗ್ರಾಮಸಭಾಗಳ ಮೊದಲ ಸಭೆಯನ್ನು ಸಾಧ್ಯವಾಗಬಹುದಾದಷ್ಟು ಅರವತ್ತು ದಿನಗಳ ಒಳಗೆ ಕರೆಯತಕ್ಕದ್ದು ಮತ್ತು ತದನಂತರದ ಸಭೆಯು ಗ್ರಾಮಸಭೆಯು ನಿರ್ಧರಿಸಿದಂಥ ದಿನಾಂಕದಂದು ಕರೆಯತಕ್ಕದ್ದು. ಎರಡು ಸಭೆಗಳ ಅಂತರ ಕನಿಷ್ಠ ಆರು ತಿಂಗಳು ಮೀರದಂತೆ ಇರತಕ್ಕದ್ದು. ಪ್ರತಿಯೊಂದು ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷನು ವಹಿಸಬೇಕು. ಅಧ್ಯಕ್ಷನ ಅನುಪಸ್ಥಿಯಲ್ಲಿ ಉಪಾಧ್ಯಕ್ಷನು ವಹಿಸಬೇಕು. ಇವರಿಬ್ಬರ ಅನುಪಸ್ಥಿಯಲ್ಲಿ ಸಭೆಯಲ್ಲಿ ಹಾಜರಿದ್ದ ಸದಸ್ಯರು ತಮ್ಮಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡು ಅಧ್ಯಕ್ಷತೆಯನ್ನು ವಹಿಸತಕ್ಕದ್ದು [ಇಲ್ಲಿ ಗಮನಿಸಿ: ಜನವಸತಿ ಸಭಾ ಮತ್ತು ವಾರ್ಡ್ ಸಭಾದಲ್ಲಿ ಅಧ್ಯಕ್ಷತೆ ವಹಿಸುವ ಸದಸ್ಯನು ಲಭ್ಯವಿಲ್ಲದಾಗ ಉಪಸ್ಥಿತರಿರುವ ಸದಸ್ಯರು ಗ್ರಾಮ ಪಂಚಾಯತ್ ಯಾವೊಬ್ಬ ಇತರೆ ಮತದಾರರ ಅಧ್ಯಕ್ಷತೆ ವಹಿಸಲು ಆಯ್ಕೆಮಾಡುವುದು]. ದಯವಿಟ್ಟು ಗಮನಿಸಿ: ಪ್ರಕರಣ 3ಇ ಗ್ರಾಮ ಸಭೆಯ ಬಗ್ಗೆ, ಪ್ರಕರಣ 3ಎಫ್ ಗ್ರಾಮ ಸಭೆಯ ಕರ್ತ್ಯವ್ಯಗಳ ಬಗ್ಗೆ ಮತ್ತು ಪ್ರಕರಣ 3ಜಿ ಗ್ರಾಮ ಸಭಾದ ಸಭೆಗಳ ಬಗ್ಗೆ ಮತ್ತು ಪ್ರಕರಣ 3ಹೆಚ್ ವಿಶೇಷ ಗ್ರಾಮ ಸಭಾದ ಬಗ್ಗೆ ವಿವರಣೆಗಳನ್ನು ಒಳಗೊಂಡಿದೆ. ಪಂಚಾಯತ್ ರಾಜ್ ಅಧಿನಿಯಮ -1993 ರಲ್ಲಿ ಪ್ರಕರಣ 3ಎ ರಲ್ಲಿ ಮಾತ್ರ ಗ್ರಾಮ ಸಭೆಯನ್ನು ಉಲ್ಲೇಖಿಸಲಾಗಿತ್ತು. 2015ರ ತಿದ್ದುಪಡಿ ನಂತರ ಪ್ರಕರಣ 3ಇ, ಪ್ರಕರಣ 3ಎಫ್ ಮತ್ತು ಪ್ರಕರಣ 3ಜಿ ಗಳನ್ನು ಹೊಸದಾಗಿ ಸೇರಿಸಲಾಗಿದೆ. 1993 ಅಧಿನಿಯಮದ ಅಧ್ಯಾಯ II ವಾರ್ಡ್ ಮತ್ತು ಗ್ರಾಮ ಸಭೆಗೆ ಸಂಬಂಧಿಸಿದಾಗಿತ್ತು ಹಾಗೂ ಕೇವಲ ಪ್ರಕರಣ 3 ಮತ್ತು 3ಎ ಅನ್ನು ಒಳಗೊಂಡಿತ್ತು. ತಿದ್ದುಪಡಿಯ ನಂತರ ಅಧ್ಯಾಯ II ಜನವಸತಿ ಸಭಾ, ವಾರ್ಡ್ ಸಭಾ ಮತ್ತು ಗ್ರಾಮ ಸಭಾಗಳನ್ನು ಒಳಗೊಂಡಿದೆ (ಗ್ರಾಮ ಸ್ವರಾಜ್ ಘಟಕ) ಹಾಗೂ ಪ್ರಕರಣ 3 ರಿಂದ ಪ್ರಕರಣ 3ಎ, ಪ್ರಕರಣ 3ಬಿ, ಪ್ರಕರಣ 3ಸಿ, ಪ್ರಕರಣ 3ಡಿ, ಪ್ರಕರಣ 3ಇ, ಪ್ರಕರಣ 3ಎಫ್ ಮತ್ತು ಪ್ರಕರಣ 3ಜಿ ಒಳಗೊಂಡಿದೆ. 2015 ತಿದ್ದುಪಡಿಯ ಪ್ರಕಾರ ಸಂಕ್ಷಿಪ್ತವಾಗಿ ಹೇಳುವುದಾದರೆ ಅಧ್ಯಾಯ II ಪ್ರಕರಣ 3 ರಿಂದ ಪ್ರಕರಣ 3ಜಿ ಒಳಗೊಂಡಿದೆ.

• ಪ್ರಕರಣ 3: ಗ್ರಾಮ ಸ್ವರಾಜ್ ಘಟಕಗಳು

• ಪ್ರಕರಣ 3ಎ: ಜನವಸತಿ ಸಭೆಯ ಪ್ರಕಾರ್ಯ ಮತ್ತು ಅಧಿಕಾರಿಗಳು

• ಪ್ರಕರಣ 3ಬಿ: ಜನವಸತಿ ಸಭಾದ ಸಭೆಗಳು

• ಪ್ರಕರಣ 3ಸಿ: ವಾರ್ಡ್ ಸಭಾ

• ಪ್ರಕರಣ 3ಡಿ: ವಾರ್ಡ್ ಸಭಾದ ಸಭೆಗಳು

• ಪ್ರಕರಣ 3ಇ: ಗ್ರಾಮ ಸಭೆ

• ಪ್ರಕರಣ 3ಎಫ್: ಗ್ರಾಮ ಸಭಾದ ಕರ್ತವ್ಯಗಳು

• ಪ್ರಕರಣ 3ಜಿ: ಗ್ರಾಮಸಭಾದ ಸಭೆಗಳು

• ಪ್ರಕರಣ 3ಹೆಚ್: ಗ್ರಾಮಸಭಾದ ವಿಶೇಷ ಸಭೆ

Question 2

2. ಗ್ರಾಮ ಪಂಚಾಯತಿಯ ಅಧ್ಯಕ್ಷನು ಗ್ರಾಮ ಸಭೆಯನ್ನು ಕರೆಯಬೇಕಾದ ಅಥವಾ ಅವಶ್ಯಕವಿದ್ದಾಗ ಕರೆಯಲು ವಿಫಲವಾದರೆ ____ ರೂ ಗಳನ್ನು ಗ್ರಾಮ ಪಂಚಾಯತಿಯ ನಿಧಿಗೆ ಸಂದಾಯ ಮಾಡಬೇಕು?

A
ರೂ 500
B
ರೂ 750
C
ರೂ 1000
D
ರೂ 1500
Question 2 Explanation: 
ರೂ 1000:

ದಯವಿಟ್ಟು ಗಮನಿಸಿ: ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ 2015ಕ್ಕೆ ತಿದ್ದುಪಡಿ ಮೂಲಕ ಜನವಸತಿ ಸಭಾ, ವಾರ್ಡ್ ಸಭಾ ಮತ್ತು ಗ್ರಾಮ ಸಭಾವನ್ನು ಕರೆಯುವ ಹೊಣೆಗಾರಿಕೆಯನ್ನು ಚುನಾಯಿತ ಸದಸ್ಯರಿಗೆ ನೀಡಲಾಗಿದೆ. ಜನವಸತಿ ಸಭೆಯನ್ನ ಜನವಸತಿ ಪ್ರದೇಶದ ಸದಸ್ಯನು ಕರೆಯಬೇಕು, ವಾರ್ಡ್ ಸಭೆಯನ್ನ ಆ ವಾರ್ಡ್ ನ ಸದಸ್ಯನು ಕರೆಯಬೇಕು ಅದೇ ರೀತಿ ಗ್ರಾಮ ಸಭೆಯನ್ನ ಗ್ರಾಮ ಪಂಚಾಯತಿ ಅಧ್ಯಕ್ಷನು ಕರೆಯಬೇಕು. ಅವಶ್ಯವಿದ್ದಾಗ ಜನವಸತಿ ಸಭೆಯನ್ನು ಕರೆಯಲು ಮತ್ತು ಅಧ್ಯಕ್ಷತೆ ವಹಿಸಲು ವಿಫಲನಾಗುವ ಸದಸ್ಯನು ಯಾವುದೇ ದಂಡವನ್ನು ತೆರಬೇಕಾಗಿಲ್ಲ. ಆದರೆ ವಾರ್ಡ್ ಸಭೆ ಕರೆಯಲು ಮತ್ತು ಅಧ್ಯಕ್ಷತೆ ವಹಿಸಲು ಸದಸ್ಯನು ವಿಫಲವಾದರೆ ರೂ 100 ಅನ್ನು ಗ್ರಾಮ ಪಂಚಾಯತಿಯ ನಿಧಿಗೆ ಸಂದಾಯ ಮಾಡಬೇಕು ಮತ್ತು ವಿಫಲತೆಗೆ ವಿವರಣೆಯನ್ನು ನೀಡಬೇಕು. ಗ್ರಾಮ ಪಂಚಾಯತಿಯ ಅಧ್ಯಕ್ಷನು ಗ್ರಾಮ ಸಭೆಯನ್ನು ಕರೆಯಬೇಕಾದ ಅಥವಾ ಅವಶ್ಯಕವಿದ್ದಾಗ ಕರೆಯಲು ವಿಫಲವಾದರೆ ರೂ 1000 ವನ್ನು ಗ್ರಾಮ ಪಂಚಾಯತಿಯ ನಿಧಿಗೆ ಸಂದಾಯ ಮಾಡಬೇಕು ಮತ್ತು ಮುಂದಿನ ಗ್ರಾಮ ಸಭೆಯಲ್ಲಿ ವಿಫಲತೆಗೆ ಬಗ್ಗೆ ಕಾರಣ ನೀಡಬೇಕು [ನೆನಪಿಡಿ: ಈ ಮೊತ್ತವನ್ನು ಗ್ರಾಮ ಪಂಚಾಯತಿ ನಿಧಿಗೆ ಸಂದಾಯ ಮಾಡಬೇಕು].

Question 3

3.ಜನವಸತಿ ಸಭಾ, ವಾರ್ಡ್ ಸಭಾ ಮತ್ತು ಗ್ರಾಮ ಸಭಾಗಳನ್ನು ಕೊನೆಯ ಪಕ್ಷ ಎಷ್ಟು ತಿಂಗಳಿಗೊಮ್ಮೆ ನಡೆಯತಕ್ಕದ್ದು?

A
ಮೂರು
B
ನಾಲ್ಕು
C
ಆರು
D
ಐದು
Question 3 Explanation: 
ಆರು:

ಈಗಾಗಲೇ ನಿಮಗೆ ತಿಳಿದಿರುವಂತೆ 2015 ತಿದ್ದುಪಡಿಯಂತೆ ಗ್ರಾಮ ಪಂಚಾಯತಿಗಳು ಮೂರು ಬಗೆಯ ಸಭೆಯನ್ನು ಆಯೋಜಿಸಬೇಕು. ಮೊದಲು ಕೇವಲ ವಾರ್ಡ್ ಮತ್ತು ಗ್ರಾಮ ಸಭೆಯನ್ನು ಆಯೋಜಿಸಬೇಕಿತ್ತು. ಜನವಸತಿ ಸಭೆಯನ್ನು ಹೊಸದಾಗಿ ಸೇರಿಸಲಾಗಿದೆ. ಈ ಮೂರು ಸಭೆಗಳನ್ನು ಕೊನೆಯ ಪಕ್ಷ ಆರು ತಿಂಗಳಿಗೊಮ್ಮೆ ಅಂದರೆ ವರ್ಷಕ್ಕೆ ಎರಡು ಬಾರಿ ನಡೆಸುವುದು ಕಡ್ಡಾಯವಾಗಿದೆ. [ಗಮನಿಸಿ: ಜನವಸತಿ ಸಭೆ ಮತ್ತು ವಾರ್ಡ್ ಸಭೆ ಗಳನ್ನು ಗ್ರಾಮ ಸಭಾದ ಸಭೆಯು ಸೇರುವ ತಿಂಗಳಿನ ಕನಿಷ್ಠ ಒಂದು ತಿಂಗಳು ಮೊದಲು ಸಭೆ ಸೇರತಕ್ಕದ್ದು].

Question 4

4. ಜನವಸತಿ ಮತ್ತು ವಾರ್ಡ್ ಸಭಾಗಳ ವಿಶೇಷ ಸಭೆಗೆ ಸಂಬಂಧಿಸಿದಂತೆ ಈ ಹೇಳಿಕೆಗಳನ್ನು ಗಮನಿಸಿ:

I) ಕನಿಷ್ಠ ಪಕ್ಷ ಶೇ 20% ಮತದಾರರು ಲಿಖಿತವಾಗಿ ಮನವಿ ಸಲ್ಲಿಸಿದಾಗ ವಿಶೇಷ ಸಭೆಗಳನ್ನು ಕರೆಯತಕ್ಕದ್ದು

II) ಮೂರು ತಿಂಗಳುಗಳ ಅವಧಿಯೊಳಗೆ ಎರಡು ಸಲ ವಿಶೇಷ ಸಭೆಯನ್ನು ನಡೆಸುವಂತಿಲ್ಲ

III) ವಿಶೇಷ ಸಭೆಯ ಅಧ್ಯಕ್ಷತೆಯನ್ನು ಪಂಚಾಯತಿ ಅಧ್ಯಕ್ಷರು ವಹಿಸತಕ್ಕದ್ದು

ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?

A
I & II ಮಾತ್ರ
B
II & III ಮಾತ್ರ
C
I & III ಸರಿ
D
ಮೇಲಿನ ಎಲ್ಲವೂ
Question 4 Explanation: 
II & III ಮಾತ್ರ :

ಜನವಸತಿ ಸಭಾ ಮತ್ತು ವಾರ್ಡ್ ಸಭಾದ ವಿಶೇಷ ಸಭೆಯನ್ನು ಕರೆಯಬೇಕೆಂದರೆ ಆಯಾ ಜನವಸತಿ ಪ್ರದೇಶ ಮತ್ತು ವಾರ್ಡ್ ನ ಕನಿಷ್ಠ ಪಕ್ಷ ಶೇಕಡಾ 10ರಷ್ಟು ಮತದಾರರು ಲಿಖಿತದಲ್ಲಿ ಮನವಿ ಸಲ್ಲಿಸಬೇಕು ಮತ್ತು ವಿಷಯವನ್ನು ಸ್ಪಷ್ಟಪಡಿಸಬೇಕು. ಪರಂತು ಮೂರು ತಿಂಗಳುಗಳ ಅವಧಿಯೊಳಗೆ ಎರಡು ಸಲ ವಿಶೇಷ ಸಭೆಯನ್ನು ನಡೆಸುವಂತಿಲ್ಲ. ಪ್ರಕೃತಿ ವಿಕೋಪಗಳು ಸಂಬಂಧಿಸಿದಾಗ ಅಥವಾ ಸಾರ್ವಜನಿಕ ಪ್ರಾಮುಖ್ಯತೆಯ ತುರ್ತು ವಿಷಯದ ಸಂದರ್ಭದಲ್ಲಿ ವಿಶೇಷ ಸಭೆಗಳನ್ನು ಕರೆಯಬಹುದಾಗಿದ್ದು, ಸಂಬಂಧಿಸಿದ ಸದಸ್ಯರು ಮತ್ತು ಸಂಬಂಧಪಟ್ಟ ಪಂಚಾಯತಿ ಅಧ್ಯಕ್ಷನು ಅಥವಾ ಉಪಾಧ್ಯಕ್ಷನು ಅಥವಾ ಯಾರೇ ಚುನಾಯಿತ ಸದಸ್ಯರು ಸಭೆ ಹಾಜರಾಗಬೇಕು. ಅಧ್ಯಕ್ಷನು ಅಂಥ ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕು ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ವಹಿಸಬೇಕು.

Question 5

5. ಗ್ರಾಮ ಸಭಾದ ಸಾಮಾನ್ಯ ಸಭೆಗೆ ಅಗತ್ಯವಿರುವ ಕೋರಂ _______ಇವುಗಳಲ್ಲಿ ಯಾವುದು ಕಡಿಮೆಯೊ ಅಷ್ಟಕ್ಕಿಂತ ಕಡಿಮೆ ಇರಕ್ಕದಲ್ಲ. ಖಾಲಿ ಬಿಟ್ಟ ಜಾಗವನ್ನು ಸರಿಯಾದ ಉತ್ತರದೊಂದಿಗೆ ತುಂಬಿ?

A

ಗ್ರಾಮಸಭಾದಲ್ಲಿರುವ ಮತದಾರರ ಒಟ್ಟು ಸಂಖ್ಯೆ ಹತ್ತನೇ ಒಂದು ಭಾಗದಷ್ಟು ಮತದಾರರು ಅಥವಾ ನೂರು ಸದಸ್ಯರು

B

ಗ್ರಾಮಸಭಾದಲ್ಲಿರುವ ಮತದಾರರ ಒಟ್ಟು ಸಂಖ್ಯೆ ಹದಿನೈದನೇ ಒಂದು ಭಾಗದಷ್ಟು ಮತದಾರರು ಅಥವಾ ನೂರೈವತ್ತು ಸದಸ್ಯರು

C

ಗ್ರಾಮಸಭಾದಲ್ಲಿರುವ ಮತದಾರರ ಒಟ್ಟು ಸಂಖ್ಯೆ ಇಪ್ಪತ್ತನೇ ಒಂದು ಭಾಗದಷ್ಟು ಮತದಾರರು ಅಥವಾ ಎರಡು ನೂರು ಸದಸ್ಯರು

D

ಗ್ರಾಮಸಭಾದಲ್ಲಿರುವ ಮತದಾರರ ಒಟ್ಟು ಸಂಖ್ಯೆ ಇಪ್ಪತೈದನೇ ಒಂದು ಭಾಗದಷ್ಟು ಮತದಾರರು ಅಥವಾ ಎರಡು ನೂರೈವತ್ತು ಸದಸ್ಯರು

Question 5 Explanation: 

ಗ್ರಾಮ ಸಭಾದ ಸಾಮಾನ್ಯ ಸಭೆಗೆ ಕೋರಂ ಗ್ರಾಮಸಭಾದಲ್ಲಿರುವ ಮತದಾರರ ಒಟ್ಟು ಸಂಖ್ಯೆ ಹತ್ತನೇ ಒಂದು ಭಾಗದಷ್ಟು ಮತದಾರರು ಅಥವಾ ನೂರು ಸದಸ್ಯರು:

ಇವುಗಳಲ್ಲಿ ಯಾವುದು ಕಡಿಮೆಯೊ ಅಷ್ಟಕ್ಕಿಂತ ಕಡಿಮೆ ಇರಕ್ಕದಲ್ಲ. ಕೋರಂ ಇಲ್ಲದ ವೇಳೆ ಅಧ್ಯಕ್ಷರು ಮೂವತ್ತು ನಿಮಿಷಗಳ ಕಾಲ ಸಭೆಯನ್ನು ಮುಂದೂಡುವುದು. ಆಗಲೂ ಇಲ್ಲವಾದರೆ ಸಾರ್ವಜನಿಕ ರಜಾದಿನವಲ್ಲದ ಮುಂದಿನ ದಿನಕ್ಕೆ ಅಥವಾ ಇತರೆ ದಿನಕ್ಕೆ ಮುಂದೂಡುವುದು. ಅಂತಹ ಸಭೆಗೆ ಕೋರಂ ಅಗತ್ಯ ಇರತಕ್ಕದಲ್ಲ. ಪಂಚಾಯತಿಯ ಪ್ರತಿ ವಾರ್ಡ್ ನಿಂದ ಕನಿಷ್ಠ ಹತ್ತು ಮಂದಿ ಮತ್ತು ಶೇ ಮೂವತ್ತಕ್ಕಿಂತ ಕಡಿಮೆ ಇಲ್ಲದಷ್ಟು ಮಹಿಳೆಯರು ಭಾಗವಹಿಸಬೇಕು. ಅನುಚೂತಿ ಪಂಗಡ ಮತ್ತು ಜಾತಿಯವರು ಅವರವರ ಜನಸಂಖ್ಯೆ ಅನುಗುಣವಾಗಿ ಭಾಗವಹಿಸಿರತಕ್ಕದ್ದು. [ಗಮನಿಸಿ: ಜನವಸತಿ ಮತ್ತು ವಾರ್ಡ್ ಸಭಾಗೆ ಕೋರಂ ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಸದಸ್ಯರು ಅಥವಾ ಇಪ್ಪತ್ತು ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅದು ಕೋರಂ ಆಗಿರತಕ್ಕದ್ದು. ಅಂದರೆ ಜನವಸತಿ ಮತ್ತು ವಾರ್ಡ್ ಸಭೆಗೆ ಒಂದೇ ಕೋರಂ ನಿರ್ದಿಷ್ಟಪಡಿಸಲಾಗಿದೆ].

Question 6

6. ಈ ಕೆಳಗಿನ ಯಾವ ಪ್ರಕರಣದಡಿ ಗ್ರಾಮ ಪಂಚಾಯತಿ ಸದಸ್ಯರಾಗಲು ಅನರ್ಹತೆ ಬಗ್ಗೆ ತಿಳಿಸಲಾಗಿದೆ?

A
ಪ್ರಕರಣ 10
B
ಪ್ರಕರಣ 11
C
ಪ್ರಕರಣ 12
D
ಪ್ರಕರಣ 13
Question 6 Explanation: 
ಪ್ರಕರಣ 12:

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಅಧ್ಯಾಯ III (ಗ್ರಾಮ ಪಂಚಾಯತಿ ಮತ್ತು ಸ್ಥಾಯಿ ಸಮಿತಿ ರಚನೆ)ರಡಿ ಪ್ರಕರಣ 12 ರಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಲು ಅನರ್ಹತೆ ಬಗ್ಗೆ ತಿಳಿಸಲಾಗಿದೆ. ಪ್ರಕರಣ 11 ಸದಸ್ಯರಾಗಲು ಅರ್ಹತೆ ಬಗ್ಗೆ ಹೇಳಲಾಗಿದೆ. 2015ರಲ್ಲಿ ಪ್ರಕರಣ 12ಕ್ಕೆ ತಿದ್ದುಪಡಿ ತರಲಾಗಿದ್ದು “ಎಲ್” ಖಂಡವನ್ನು ಹೊಸದಾಗಿ ಸೇರಿಸಲಾಗಿದೆ. ಸದಸ್ಯನು ತನ್ನ ಅವಧಿಯಲ್ಲಿ ಪಂಚಾಯತ್ ಅಧಿನಿಯಮ ಅಥವಾ ಇತರ ಆಸ್ತಿಗಳ ದುರುಪಯೋಗ ಅಥವಾ ಪಂಚಾಯತ್ ನ ಯಾವುದೇ ಕಾರ್ಯಕ್ರಮವನ್ನು, ಯೋಜನೆಯನ್ನು ಜಾರಿಗೊಳಿಸುವಾವ ಸದಸ್ಯನಾಗಿ ತನ್ನ ಅಧಿಕಾರವನ್ನು ದುರುಪಯೋಗ ಅಥವಾ ದುರ್ಬಳಕೆ ಮಾಡಿಕೊಳ್ಳುವ ಯಾವುದೇ ಕೃತ್ಯದಲ್ಲಿ ಪ್ರತ್ಯಕ್ಷವಾಗಿ ಭಾಗಿಯಾಗಿ ತಪ್ಪಿತಸ್ಥನೆಂದು ಕಂಡುಬಂದರೆ ಎಂಬ ಅಂಶವನ್ನು ಸೇರ್ಪಡೆಗೊಳಿಸಲಾಗಿದೆ.

Question 7

7. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ 15 ರಿಂದ 23 ವರೆಗಿನ ಪ್ರಕರಣಗಳಿಗೆ ತಿದ್ದುಪಡಿ ತಂದು ಸಿವಿಲ್ ನ್ಯಾಯಾಧೀಶ ಎಂಬ ಪದಗಳ ಬದಲಾಗಿ ಯಾವ ಪದಗಳನ್ನು ಬಳಸಲಾಗಿದೆ?

A
ಉಚ್ಛ ನ್ಯಾಯಾಲಯ
B
ಗೊತ್ತುಪಡಿಸಿದ ನ್ಯಾಯಾಲಯ
C
ಸರ್ವೋಚ್ಚ ನ್ಯಾಯಾಲಯ
D
ಒಂಬುಡ್ಸಮನ್ ನ್ಯಾಯಾಲಯ
Question 7 Explanation: 
ಗೊತ್ತುಪಡಿಸಿದ ನ್ಯಾಯಾಲಯ:

ಮೂಲ ಅಧಿನಿಯಮದ 15 ರಿಂದ 23 ವರೆಗಿನ ಪ್ರಕರಣಗಳಿಗೆ ತಿದ್ದುಪಡಿ ತರುವ ಮೂಲಕ ಸಿವಿಲ್ ನ್ಯಾಯಾಧೀಶ ಎಂಬ ಪದಗಳ ಬದಲಿಗೆ ಗೊತ್ತುಪಡಿಸಿದ ನ್ಯಾಯಾಲಯ ಎಂಬ ಪದಗಳನ್ನು ಬಳಸಲಾಗಿದೆ. ಪ್ರಕರಣ 24ಕ್ಕೂ ತಿದ್ದುಪಡಿ ತರಲಾಗಿದ್ದು, ಪ್ರಕರಣ 24ಎ ಅಳವಡಿಸಿ 2015 ಅಧಿನಿಯಮ ಜಾರಿಗೆ ಬರುವ ಮುನ್ನ ಚುನಾವಣೆ ವಿವಾದಗಳಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಲ್ಲಿರುವ ಎಲ್ಲಾ ಪ್ರಕರಣಗಳನ್ನು “ಗೊತ್ತುಪಡಿಸಿದ ನ್ಯಾಯಾಲಯಕ್ಕೆ” ವರ್ಗಾಯಿಸಬೇಕಿದೆ.

Question 8

8. ಯಾವುದೇ ಸದಸ್ಯನು ಒಂದಾದಾ ಮೇಲೋಂದರಂತೆ ಆದ ಎಷ್ಟು ಸಭೆಗಳಿಗೆ ಹಾಜರಾಗಲು ತಪ್ಪಿದ್ದರೆ ಸದಸ್ಯತ್ವನ್ನು ರದ್ದುಪಡಿಸಬಹುದಾಗಿದೆ?

A
ಎರಡು
B
ಮೂರು
C
ನಾಲ್ಕು
D
ಐದು
Question 8 Explanation: 
ನಾಲ್ಕು:

ಮೂಲ ಅಧಿನಿಯಮ 1993ರ ಪ್ರಕರಣ 43ಎ (ದುರ್ನಡೆತೆಗೆ ಸದಸ್ಯರನ್ನು ತೆಗೆದು ಹಾಕುವುದು) ತಿದ್ದುಪಡಿ ಮಾಡಲಾಗಿದೆ [ಪ್ರಶ್ನೆ: ಯಾವ ಪ್ರಕರಣದಡಿ ಸದಸ್ಯರನ್ನು ದುರ್ನಡೆತೆ ಮೇರೆಗೆ ತೆಗೆದು ಹಾಕಬಹುದು? ಉ: 43ಎ]. ಅದರಂತೆ ಪಂಚಾಯತಿಯ ನಾಲ್ಕು ಒಂದಾದ ಮೇಲೊಂದರಂತೆ ಆದ ಸಭೆಗಳಿಗೆ ಹಾಜರಾಗಲು ತಪ್ಪಿದ್ದರೆ ಸದಸ್ಯತ್ವದಿಂದ ತೆಗೆದು ಹಾಕಬಹುದು. [ಗಮನಿಸಿ: ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸಭೆಯನ್ನು ಕರೆಯಬೇಕಿದ್ದಾಗ ಅಥವಾ ಅಗತ್ಯವಾಗಿದ್ದಾಗ ಒಂದಾದ ಮೇಲೊಂದರಂತೆ ಎರಡು (2) ಸಭೆಗಳನ್ನು ಕರೆಯಲು ತಪ್ಪಿದ್ದಾನೆಂದಾದರೆ ತೆಗೆದುಹಾಕಬಹುದು]

Question 9

9. ಯಾವ ಪ್ರಕರಣದಡಿ ಗ್ರಾಮ ಪಂಚಾಯತಿಯ ಸದಸ್ಯರು ತಮ್ಮ ಆಸ್ತಿಗಳ ಮತ್ತು ಹೊಣೆಗಾರಿಕೆಯನ್ನು ಘೋಷಣೆ ಮಾಡುವುದು ಕಡ್ಡಾಯವಾಗಿದೆ?

A
ಪ್ರಕರಣ 43
B
ಪ್ರಕರಣ 43 ಎ
C
ಪ್ರಕರಣ 43 ಬಿ
D
ಪ್ರಕರಣ 44
Question 9 Explanation: 
ಪ್ರಕರಣ 43 ಬಿ:

ಗಮನಿಸಿ: ಪ್ರಕರಣ 43 ಬಿಯನ್ನು 2015ರ ತಿದ್ದುಪಡಿ ಸಂದರ್ಭದಲ್ಲಿ ಹೊಸದಾಗಿ ಸೇರಿಸಲಾಗಿದೆ. ಈ ಪ್ರಕರಣದಡಿ ಪ್ರತಿಯೊಬ್ಬ ಸದಸ್ಯನು ತಾನು ಮತ್ತು ತನ್ನ ಅವಿಭಕ್ತ ಕುಟುಂಬದ ಎಲ್ಲ ಸದಸ್ಯರು ಎರಡು ಲಕ್ಷಕ್ಕಿಂತ [ಪ್ರಶ್ನೆ: ಎಷ್ಟು ಲಕ್ಷಕ್ಕಿಂತ?] ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿಯನ್ನು ಮತ್ತು ಹೊಣೆಗಾರಿಕೆಯನ್ನು ಹೊಂದಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಮುಂದೆ ನಿಯಮಿಸಬಹುದಾದಂಥ ನಮೂನೆಯಲ್ಲಿ ತನ್ನ ಪದಾವಧಿ ಪ್ರಾರಂಭವಾದ ದಿನಾಂಕದಿಂದ ಮೂರು ತಿಂಗಳೊಳಗೆ ಮತ್ತು ಅವನ ಅಧಿಕಾರವದಿ ಮುಗಿಯುವ ತನಕ ಮತ್ತು ಪ್ರತಿ ಆರ್ಥಿಕ ವರ್ಷ ಮುಕ್ತಾಯವಾದ ಒಂದು ತಿಂಗಳೊಳಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಮೂಲಕ ದಾಖಲು ಮಾಡತಕ್ಕದ್ದು. ಪಿಡಿಓ ಘೋಷಿಸಲಾದ ದಾಖಲೆಗಳನ್ನು ಆ ವರ್ಷದ ಮೇ ಮೊದಲ ವಾರದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ತಡವಾದಲ್ಲಿ ಜುಲೈ ಮೊದಲನೆ ವಾರದಲ್ಲಿ ಸಲ್ಲಿಸಬೇಕು. ಸದಸ್ಯನು ನಿಗದಿತ ಅವಧಿಯೊಳಗೆ ಘೋಷಣೆ ಮಾಡದಿದ್ದಲ್ಲಿ ಅಥವಾ ಸುಳ್ಳು ಮಾಹಿತಿ ನೀಡಿದ್ದಲ್ಲಿ ಚುನಾವಣಾ ಆಯೋಗ ಸದಸ್ಯತ್ವನ್ನು ರದ್ದುಪಡಿಸಬಹುದಾಗಿದೆ.

Question 10

10. ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷನ ವಿರುದ್ದ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಲು ಬೇಕಾಗಿರುವ ಕೋರಂ ____?

A

ಒಟ್ಟು ಸದಸ್ಯರ ಮೂರನೇ-ಎರಡರಷ್ಟಕ್ಕಿಂತ ಕಡಿಮೆಯಿಲ್ಲದಷ್ಟು

B

ಒಟ್ಟು ಸದಸ್ಯರ ಅರ್ಧಕ್ಕಿಂತ ಕಡಿಮೆಯಿಲ್ಲದಷ್ಟು

C

ಒಟ್ಟು ಸದಸ್ಯರ ಮೂರನೇ-ಒಂದರಷ್ಟಕ್ಕಿಂತ ಕಡಿಮೆಯಿಲ್ಲದಷ್ಟು

D

ಮೇಲಿನ ಯಾವುದು ಅಲ್ಲ

Question 10 Explanation: 
ಒಟ್ಟು ಸದಸ್ಯರ ಅರ್ಧಕ್ಕಿಂತ ಕಡಿಮೆಯಿಲ್ಲದಷ್ಟು:

Please Note this: ಮೂಲ ಅಧಿನಿಯಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷನ ವಿರುದ್ದ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಕರೆದ ಸಭೆಯಲ್ಲಿ ಗ್ರಾಮ ಪಂಚಾಯತಿಯ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ-ಎರಡರಷ್ಟಕ್ಕಿಂತ ಕಡಿಮೆ ಇಲ್ಲದಷ್ಟು ಬಹುಮತದಿಂದ ಅಂಗೀಕರಸಿದರೆ ತಕ್ಷಣವೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ತೆರವುಗೊಳಿಸಬೇಕಿತ್ತು. ಆದರೆ 2015ರ ತಿದ್ದುಪಡಿ ಪ್ರಕಾರ ಮೂರನೇ-ಎರಡರಷ್ಟಕ್ಕಿಂತ ಬದಲಿಗೆ ಅರ್ಧಕ್ಕಿಂತ ಎಂದು ಸೇರಿಸಲಾಗಿದೆ.

There are 10 questions to complete.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

30 Thoughts to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-8”

  1. vijay

    Very good questions and explanation.. thanks

  2. Anonymous

    Nice information sir thank you so much

  3. ಸಂತೋಷ್ ಗೌಡರ

    ಧನ್ಯವಾದಗಳು ಸರ್

  4. Karakesh SR

    Nice Question and Answer With Explain Very Good Sir, And Once Again Thanks full to you, Your Academy All Student Help full Sir….,

  5. Dattatreyya

    Thank you giving me so much information & explanation

  6. HAJARATALI

    Super sir adare ondu confuse ide adenanda prakarana 43(iii) rali 4 sabe anta elidare prakarana 13 ralli 3 months anta elidare plz nanage tilisi sir

  7. Tammanna sahukar

    Good information.

  8. HAJARATALI

    Super sir adare ondu confuse ide adenanda prakarana 43(iii) rali 4 sabege Absent adare sadaahatva raddu agute anta elidare prakarana 13 ralli 3 months anta elidare plz nanage tilisi sir

    1. Karunaduexams

      Grama Panchayat alli prathi tingalu ondu sabhe karibeku..1993 act prakara mooru sabhe athava 3 tingalu gairuhajaradare sadsyatva raddu agutte..2015 tiddupadili 4 meeting anta amend madalagade aste ..clear ah

  9. krishna

    Really super 2015 amendment s..giving for us this is new information’s… Thanku very much…

    1. Karunaduexams

      Samanya kannada, English nd Panchayat sambandisida yella quizzes upload madtivi don’t worry

  10. ROOPESH

    Dhanyavadagalu sir…..

  11. Basavaraj P

    Its Very Good and tnx sir

  12. Shivu Janagond

    Very good study materials..

    Thanku sir

  13. Shivu Janagond

    Very good study materials..
    Thanku sir

  14. Ummesalma

    Very useful to everyone who took competitive exams thank you so much..

  15. ಹಾದಿಮನಿ ವಸಂತ

    It’s very good Sir..

  16. ಹಾದಿಮನಿ ವಸಂತ

    Note this: ಮೂಲ ಅಧಿನಿಯಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷನ ವಿರುದ್ದ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಕರೆದ ಸಭೆಯಲ್ಲಿ ಗ್ರಾಮ ಪಂಚಾಯತಿಯ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ-ಎರಡರಷ್ಟಕ್ಕಿಂತ ಕಡಿಮೆ ಇಲ್ಲದಷ್ಟು ಬಹುಮತದಿಂದ ಅಂಗೀಕರಸಿದರೆ ತಕ್ಷಣವೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ತೆರವುಗೊಳಿಸಬೇಕಿತ್ತು. ಆದರೆ 2015ರ ತಿದ್ದುಪಡಿ ಪ್ರಕಾರ ಮೂರನೇ-ಎರಡರಷ್ಟಕ್ಕಿಂತ ಬದಲಿಗೆ ಅರ್ಧಕ್ಕಿಂತ ಎಂದು ಸೇರಿಸಲಾಗಿದೆ.

Leave a Reply to HAJARATALI Cancel reply

This site uses Akismet to reduce spam. Learn how your comment data is processed.