ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-7

ಆತ್ಮೀಯ ಓದುಗರೇ,

ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳ ನೇಮಕಾತಿ ಅಧಿಸೂಚನೆ ಈಗಾಗಲೇ ಪ್ರಕಟಗೊಂಡಿದೆ. ಕಳೆದ ಎರಡು ಬಾರಿ ನಡೆದ ನೇಮಕಾತಿಗೆ ಹೋಲಿಸಿದರೆ ಈ ಬಾರಿ ಪರೀಕ್ಷಾ ವಿಧಾನ ಸಂಪೂರ್ಣವಾಗಿ ಭಿನ್ನವಾಗಿದ್ದು, ಪಂಚಾಯತ್ ರಾಜ್ ಸಂಬಂಧಿಸಿದಂತೆ 200 ಅಂಕಗಳ ಪ್ರತ್ಯೇಕ ಪತ್ರಿಕೆ ಇರಲಿದೆ. ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡುಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಈಗಾಗಲೇ ಕೆಲವು ಕ್ಷಿಜ್ ಗಳನ್ನು ಪ್ರಕಟಿಸಿರುವುದು ನಿಮಗೆ ತಿಳಿದಿದೆ. ಆದರೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ರಾಜ್ಯ ಸರ್ಕಾರ 2015ರಲ್ಲಿ ತಿದ್ದುಪಡಿ ತಂದಿರುವುದು ತಮಗೆ ತಿಳಿದಿರಬಹುದು. ಇದರಡಿ ಅಧಿನಿಯಮದ 78 ಪ್ರಕರಣಗಳಿಗೆ ತಿದ್ದುಪಡಿ ತರುವ ಮೂಲಕ ಮಹತ್ವದ ಬದಲಾವಣೆ ಮಾಡಿದೆ.  ಪರೀಕ್ಷೆ ದೃಷ್ಟಿಯಿಂದ ಕೇಳಲಾಗುವ ಪ್ರಶ್ನೆಗಳು 2015 ತಿದ್ದುಪಡಿ ನಿಯಮಕ್ಕೆ ಸಂಬಂಧಿಸಿರುತ್ತವೆ ಹೊರತು 1993ಕ್ಕೆ ಅಲ್ಲವೆಂಬುದನ್ನು ತಾವು ಮನದಟ್ಟು ಮಾಡಿಕೊಳ್ಳಬೇಕಿದೆ. ಈ ದಿಶೆಯಲ್ಲಿ ಕರುನಾಡುಎಗ್ಸಾಂ 2015ರ ತಿದ್ದುಪಡಿಯ ಪ್ರಕಾರ ಮುಂದಿನ ಕ್ವಿಜ್ ಗಳನ್ನು ಸಿದ್ದಪಡಿಸಲಿದೆ. [ಗಮನಿಸಿ: ಈ ಹಿಂದೆ ಪ್ರಕಟಿಸಿದ ಕ್ವಿಜ್ ಗಳಲ್ಲಿ ಕೆಲವು ಪ್ರಶ್ನೆಗಳು 1993 ಅಧಿನಿಯಮಕ್ಕೆ ಸಂಬಂಧಿಸಿವೆ, ಅಂತಹ ಪ್ರಶ್ನೆಗಳ ಉತ್ತರವನ್ನು 2015ರ ತಿದ್ದುಪಡಿಯಂತೆ ಸರಿಪಡಿಸಿಕೊಳ್ಳಲು ಕೋರಿದೆ]. ಓದುಗರು ದಯವಿಟ್ಟು ಉತ್ತರದ ಕೆಳಗೆ ನೀಡಿರುವ ವಿವರಣೆಯನ್ನು ಸಂಪೂರ್ಣ ಓದಿ ಅರ್ಥೈಸಿಕೊಳ್ಳಲು ಕೋರಿದೆ. ಇಲ್ಲಿ ಪ್ರಕಟವಾಗುವ ಯಾವುದೇ ಪ್ರಶ್ನೆ ಹಾಗೂ ಉತ್ತರಗಳನ್ನು ಮರು ಪ್ರಕಟಿಸುವುದು, ವಿವಿಧ ಗ್ರೂಪ್ಸ್ ಗಳಲ್ಲಿ ಹಾಕದಂತೆ ಕೋರಿದೆ.

ಧನ್ಯವಾದಗಳು

ಇಂತಿ

ಕರುನಾಡುಎಗ್ಸಾಂ ತಂಡ

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-7

Question 1

1.ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ವಿದೇಯಕ, 2015ಕ್ಕೆ ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು _______?

A
ಹತ್ತನೇ ಡಿಸೆಂಬರ್, 2015
B
ಹತ್ತನೇ ನವೆಂಬರ್, 2015
C
ಹದಿನಾರನೇ ಡಿಸೆಂಬರ್, 2015
D
ಇಪ್ಪತ್ತನೇ ಡಿಸೆಂಬರ್, 2015
Question 1 Explanation: 
ಹದಿನಾರನೇ ಡಿಸೆಂಬರ್, 2015:

ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ವಿದೇಯಕ, 2015ಕ್ಕೆ 2015ರ ಡಿಸೆಂಬರ್ ತಿಂಗಳ ಹದಿನಾರನೇ ದಿನಾಂಕದಂದು ಒಪ್ಪಿಗೆ ದೊರೆತಿದೆ. [ಗಮನಿಸಿ: ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ಕ್ಕೆ 1993ರ ಏಪ್ರಿಲ್, 30ನೇ ದಿನಾಂಕದಂದು ರಾಜ್ಯಪಾಲರ ಅನುಮೋದನೆ ದೊರೆತಿದೆ]

Question 2

2.ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಅಧಿನಿಯಮ, 2015 ಜಾರಿಗೆ ಬಂದ ದಿನಾಂಕ ______?

A
20.12.2015
B
12.01.2016
C
25.02.2016
D
12.03.2016
Question 2 Explanation: 
25.02.2016:

ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಅಧಿನಿಯಮ, 2015ನ್ನು ಕರ್ನಾಟಕ ಸರ್ಕಾರ ದಿನಾಂಕ 25.02.2016 ರಿಂದ ಜಾರಿಗೆ ತಂದಿದೆ. [ಗಮನಿಸಿ: ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993 ಜಾರಿಗೆ ಬಂದದ್ದು ದಿನಾಂಕ 10-05-1993 ರಿಂದ].

Question 3

3. ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಅಧಿನಿಯಮ, 2015 ಪ್ರಕಾರ ಶೀರ್ಪಿಕೆಯಲ್ಲಿ ಪಂಚಾಯತ್ ಬದಲಿಗೆ ಏನನ್ನು ಸೇರಿಸಲಾಗಿದೆ?

A
ಗ್ರಾಮ ವಿಕಾಸ್ ಮತ್ತು ಪಂಚಾಯತ್ ರಾಜ್
B
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್
C
ವಿಕೇಂದ್ರಿಕರಣ ಮತ್ತು ಪಂಚಾಯತ್ ರಾಜ್
D
ಸ್ವರಾಜ್ಯ ಮತ್ತು ಪಂಚಾಯತ್ ರಾಜ್
Question 3 Explanation: 
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ :

2015ರ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ಅಧಿನಿಯಮದ ಶೀರ್ಷಿಕೆಯಲ್ಲಿ ಪಂಚಾಯತ್ ರಾಜ್ ಬದಲಿಗೆ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಸೇರಿಸಿ “ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ” ವಾಗಿದೆ. ಆದ್ದರಿಂದ ಮುಂದೆ ಈ ನಿಯಮವನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಎಂದೇ ತಿಳಿಯತಕ್ಕದ್ದು.

Question 4

4. ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಅಧಿನಿಯಮ, 2015 ಪ್ರಕಾರ ಜನವಸತಿ ಎಂದರೆ ಗ್ರಾಮದ ಪರಿಮಿತಿಯ ಹೊರಗೆ ಇರುವ ______?

A
ಒಂದು ನೂರರಿಂದ ಮೂನ್ನರೈವತ್ತು ಜನಸಂಖ್ಯೆಯುಳ್ಳ ಪ್ರದೇಶ
B
ಎರಡು ನೂರರಿಂದ ನಾಲ್ಕುನೂರು ಜನಸಂಖ್ಯೆಯಳ್ಳ ಪ್ರದೇಶ
C
ಎರಡು ನೂರರಿಂದ ಐದು ನೂರು ಜನಸಂಖ್ಯೆಯುಳ್ಳ ಪ್ರದೇಶ
D
ಒಂದು ನೂರರಿಂದ ಮೂರು ನೂರು ಜನಸಂಖ್ಯೆಯುಳ್ಳ ಪ್ರದೇಶ
Question 4 Explanation: 
ಒಂದು ನೂರರಿಂದ ಮೂನ್ನರೈವತ್ತು ಜನಸಂಖ್ಯೆಯುಳ್ಳ ಪ್ರದೇಶ:

ಜನವಸತಿ ಎಂಬ ಪದವನ್ನು ಹೊಸದಾಗಿ ಪಂಚಾಯತ್ ರಾಜ್ ಕಾಯಿದೆಯಡಿ ಸೇರಿಸಲಾಗಿದೆ. ಜನವಸತಿ ಎಂದರೆ, ಗ್ರಾಮದ ಪರಿಮಿತಿಯ ಹೊರಗೆ ಇರುವ ಒಂದು ನೂರರಿಂದ ಮೂನ್ನರೈವತ್ತು ಜನಸಂಖ್ಯೆಯುಳ್ಳ ಸಣ್ಣ ವಸತಿ ಪ್ರದೇಶ ಅಥವಾ ಯಾವುದೇ ಹೆಸರಿನಿಂದ ಕರೆಯಲಾಗುವ ಇತರೆ ಸಣ್ಣ ವಸತಿ ಸಮೂಹ (Hamlet) ಅಥವಾ ಅಂಥ ಸಣ್ಣ ವಸತಿ ಪ್ರದೇಶ ಅಥವಾ ಸಣ್ಣ ವಸತಿ ಸಮೂಹಗಳ ಗುಂಪು [ಗಮನಿಸಿ: ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993 ರಲ್ಲಿ ಜನವಸತಿ ಎಂಬ ಪದವಿಲ್ಲ].

Question 5

5. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಯಾವ ಅಧ್ಯಾನದಡಿ “ಪಂಚಾಯತ್ ರಾಜ್ ನೀತಿ ನಿರ್ದೇಶಕ ತತ್ವಗಳು” ಕಾಣಬಹುದಾಗಿದೆ?

A
ಅಧ್ಯಾಯ I
B
ಅಧ್ಯಾಯ II
C
ಅಧ್ಯಾಯ IV
D
ಅಧ್ಯಾಯ VI
Question 5 Explanation: 
ಅಧ್ಯಾಯ I:

ಗಮನಿಸಿ: ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993ರ ಅಧ್ಯಾಯ-I ಎರಡು ಪ್ರಕರಣಗಳನ್ನು ಹೊಂದಿತ್ತು. ಪ್ರಕರಣ 1 ರಲ್ಲಿ ಚಿಕ್ಕ ಹೆಸರು ಮತ್ತು ಪ್ರಾರಂಭ ಹಾಗೂ ಪ್ರಕರಣ 2 ರಲ್ಲಿ ಅರ್ಥ ವಿವರಣೆಗಳನ್ನು ನೀಡಲಾಗಿತ್ತು. 2015 ರಲ್ಲಿ ಅಧ್ಯಾಯ-I ಕ್ಕೆ ತಿದ್ದುಪಡಿ ತಂದು ಅಧ್ಯಾಯ Iಎ ಮತ್ತು ಪ್ರಕರಣ 2ಎ ಅನ್ನು ಸೇರ್ಪಡೆಗೊಳಿಸಿ ಪ್ರಕರಣ 2ಎ ಅಡಿ ಪಂಚಾಯತ್ ನೀತಿ ನಿರ್ದೇಶಕ ತತ್ವಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ತತ್ವಗಳ ಅನ್ವಯ ಪಂಚಾಯತಿಯು ಈ ಮುಂದಿನವುಗಳನ್ನು ಪ್ರೋತ್ಸಾಹಿಸಲು ಶ್ರಮಿಸಬೇಕು. (I) ಎಲ್ಲರಿಗೂ ಶುದ್ದ ಕುಡಿಯುವ ನೀರು, ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದು. (II) ಅಗತ್ಯ ಗ್ರಾಮೀಣ ಮೂಲ ಸೌಲಭ್ಯಗಳನ್ನು ಒದಗಿಸುವುದು (III) ತನ್ನ ನಿವಾಸಿಗಳ ಆರ್ಥಿಕ, ಸಾಮಾಜಿಕ ಮತ್ತು ಪರಿಸರಾತ್ಮಕ ಗುಣಮಟ್ಟವನ್ನು ವೃದ್ದಿಸುವುದಕ್ಕಾಗಿ ಆಸ್ತಿಗಳ ನಿರ್ವಹಣೆ (IV) ಪಂಚಾಯತ್ ಅಧೀನದಲ್ಲಿರುವ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಪಂಚಾಯತಿ ಪ್ರದೇಶದ ಅರಣ್ಯ ಮತ್ತು ವನ್ಯಜೀವಿಗಳನ್ನು ಸುಸ್ಥಿರ ಅಭಿವೃದ್ದಿಗಾಗಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು (V) ಸ್ಥಳೀಯ ಸಮುದಾಯದ ಕಲೆ, ಸಂಸ್ಕೃತಿ ಮತ್ತು ಪರಂಪರೆಗಳನ್ನು ರಕ್ಷಿಸುವುದು, ಕಾಪಾಡುವುದು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದು (VI) ನವಣೆ, ಸಜ್ಜೆ, ಬಿಳಿ ಜೋಳ, ಸಾಮೆ, ಕೋರ್ಲಿ ಇತ್ಯಾದಿ ಮತ್ತೊ ಔಷಧೀಯ ಮೌಲ್ಯವುಳ್ಳ ಗಿಡಮೂಲಿಕೆಗಳನ್ನು ಸಂರಕ್ಷಿಸುವುದು (VIII) ಕೃಷಿ-ಕೈಗಾರಿಕಾ ಕೇಂದ್ರಗಳು, ಗ್ರಾಮೀಣ ಗುಡಿ ಕೈಗಾರಿಕೆಗಳನ್ನು ಉತ್ತೇಜಿಸಿ ಉದ್ಯೋಗ ಸೃಷ್ಟಿಸುವುದು (IX) ಗ್ರಾಮೀಣ ಪ್ರದೇಶಗಳಲ್ಲಿ ಜನರ ಕೌಶಲ್ಯ, ಜ್ಞಾನ ಮತ್ತು ಇತರ ಸಾಮರ್ಥ್ಯಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಅಭಿವೃದ್ದಿಪಡಿಸುವುದು (X) ಶಾಂತಿಯುತ ಸಮಾಜ ಮತ್ತು ಕೋಮು ಸೌಹಾರ್ದವನ್ನು ಸಂರಕ್ಷಿಸುವುದು. [ಗಮನಿಸಿ: ಒಟ್ಟು 10 ಪಂಚಾಯತ್ ನೀತಿ ನಿರ್ದೇಶಕ ತತ್ವಗಳನ್ನು ಸೇರ್ಪಡೆಗೊಳಿಸಲಾಗಿದೆ]

Question 6

6.ಈ ಕೆಳಗಿನ ಯಾವುದು ಗ್ರಾಮ ಪಂಚಾಯತಿಯ “ಗ್ರಾಮ ಸ್ವರಾಜ್ ಘಟಕ”ದ ಭಾಗವಾಗಿಲ್ಲ?

A
ಜನವಸತಿ ಸಭಾ
B
ಕಿಸಾನ್ ಸಭಾ
C
ವಾರ್ಡ್ ಸಭಾ
D
ಗ್ರಾಮ ಸಭಾ
Question 6 Explanation: 
ಕಿಸಾನ್ ಸಭಾ:

ಗಮನಿಸಿ: ಪಂಚಾಯತ್ ರಾಜ್ ಅಧಿನಿಯಮ-1993ರ 3ನೇ (ಅಧ್ಯಾಯ II ರಲ್ಲಿ) ಪ್ರಕರಣಕ್ಕೆ ತಿದ್ದುಪಡಿ ತರುವ ಮೂಲಕ “ಗ್ರಾಮ ಸ್ವರಾಜ್ ಘಟಕಗಳನ್ನು” ಸೇರ್ಪಡೆಗೊಳಿಸಲಾಗಿದೆ. ಜನವಸತಿ ಸಭಾ, ವಾರ್ಡ್ ಸಭಾ ಮತ್ತು ಗ್ರಾಮ ಸಭಾಗಳು ಗ್ರಾಮ ಪಂಚಾಯತಿಯ ಘಟಕಗಳಾಗಿರುತ್ತವೆ. 1993 ರ ಅಧಿನಿಯಮದಲ್ಲಿ ಪ್ರಕರಣ 3 ರಲ್ಲಿ ವಾರ್ಡ್ ಸಭೆ ಬಗ್ಗೆ ವ್ಯಾಖ್ಯಾನಿಸಲಾಗಿತ್ತು. ಅದೇ ರೀತಿ ದಯವಿಟ್ಟು ಗಮನಿಸಿ ಪ್ರಕರಣ 3ಎ ಗೂ ತಿದ್ದುಪಡಿ ತರಲಾಗಿದ್ದು, 3ಎ ರಲ್ಲಿ ಜನವಸತಿ ಸಭೆಯ ಪ್ರಕಾರ್ಯಗಳು ಮತ್ತು ಅಧಿಕಾರಗಳನ್ನು ಸೇರ್ಪಡೆಗೊಳಿಸಲಾಗಿದೆ (1993 ರ ಅಧಿನಿಯಮದಲ್ಲಿ 3ಎ ಗ್ರಾಮ ಸಭೆಯ ಬಗ್ಗೆ ವಿಶ್ಲೇಷಿಲಾಗಿತ್ತು). ಜನವಸತಿ ಸಭೆಯು ಮಾಡವೇಕಾದ 21 ಪ್ರಕಾರ್ಯಗಳನ್ನು 3ಎ ರಲ್ಲಿ ಉಲ್ಲೇಖಿಸಲಾಗಿದೆ.

Question 7

7. ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಎಷ್ಟನೇ ಪ್ರಕರಣದಡಿ ಗ್ರಾಮ ಸ್ವರಾಜ್ ಘಟಕಗಳನ್ನು ಉಲ್ಲೇಖಿಸಲಾಗಿದೆ?

A
ಪ್ರಕರಣ 3
B
ಪ್ರಕರಣ 4
C
ಪ್ರಕರಣ 5
D
ಪ್ರಕರಣ 6
Question 7 Explanation: 
ಪ್ರಕರಣ 3:

ಈಗಾಗಲೇ ಹೇಳಿರುವಂತೆ ಪಂಚಾಯತ್ ರಾಜ್ ಅಧಿನಿಯಮದ 3ನೇ ಪ್ರಕರಣಕ್ಕೆ ತಿದ್ದುಪಡಿ ತರುವ ಮೂಲಕ ಗ್ರಾಮ ಸ್ವರಾಜ್ ಘಟಕಗಳನ್ನು ಸೇರ್ಪಡೆಗೊಳಿಸಲಾಗಿದೆ. ಜನವಸತಿ ಸಭಾ, ವಾರ್ಡ್ ಸಭಾ ಮತ್ತು ಗ್ರಾಮ ಸಭಾಗಳು ಗ್ರಾಮ ಪಂಚಾಯತಿಯ ಘಟಕಗಳಾಗಿರುತ್ತವೆ.

Question 8

8. ಯಾವುದೇ ಒಂದು ಪ್ರದೇಶವನ್ನು ಜನವಸತಿ ಪ್ರದೇಶವೆಂದು ಘೋಷಿಸುವ ಅಧಿಕಾರ ಯಾರಿಗಿದೆ?

A
ಗ್ರಾಮ ಪಂಚಾಯತಿ
B
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
C
ಜಿಲ್ಲಾಧಿಕಾರಿ
D
ಉಪವಿಭಾಗಧಿಕಾರಿ
Question 8 Explanation: 
ಜಿಲ್ಲಾಧಿಕಾರಿ:

ಜಿಲ್ಲಾಧಿಕಾರಿಗಳು ಸಮೀಕ್ಷೆ ಆಧಾರವ ಮೇಲೆ ಒಂದು ಪ್ರದೇಶವನ್ನು ಜನವಸತಿ ಪ್ರದೇಶವೆಂದು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ.

Question 9

9. ವಾರ್ಡ್ ಸಭೆಯನ್ನು ಕರೆಯಲು ಮತ್ತು ಅಧ್ಯಕ್ಷತೆಯನ್ನು ವಹಿಸಲು ವಿಫಲನಾಗುವ ಸದಸ್ಯರು ಗ್ರಾಮ ಪಂಚಾಯತಿಗೆ ಎಷ್ಟು ರೂಪಾಯಿಗಳ ದಂಡವನ್ನು ತೆರಬೇಕು?

A
ರೂ 100
B
ರೂ 200
C
ರೂ 300
D
ರೂ 500
Question 9 Explanation: 
100:

ವಾರ್ಡ್ ಸಭೆಯನ್ನು ಕರೆಯಬೇಕಾದ ಅಥವಾ ವಾರ್ಡ್ ಸಭೆಯನ್ನು ನಡೆಸುವುದು ಅವಶ್ಯಕವಾಗಿರುವಾಗ ವಾರ್ಡ್ ಚುನಾಯಿತ ಸದಸ್ಯನು ಸಂಧರ್ಭಾನುಸಾರ ಸಭೆಯನ್ನು ಕರೆಯುವುದಕ್ಕೆ ಮತ್ತು ಅಧ್ಯಕ್ಷತೆಯನ್ನು ವಹಿಸುವುದಕ್ಕೆ ವಿಫಲವಾದರೆ ರೂ ಒಂದು ನೂರು ರೂಪಾಯಿಯನ್ನು ಗ್ರಾಮ ಪಂಚಾಯತಿ ನಿಧಿಗೆ ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದ್ದು ಮತ್ತು ಅಂಥ ವಿಫಲತೆಗೆ ವಿವರಣೆಯನ್ನು ನೀಡತಕ್ಕದ್ದು.

Question 10

10. ಜನವಸತಿ ಸಭಾಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?

I) ಜನವಸತಿ ಸಭಾಗಳು ಆರು ತಿಂಗಳಿಗೆ ಕನಿಷ್ಠ ಒಂದು ಸಲ ಸಭೆ ಸೇರಬೇಕು

II) ಆಯಾ ಜನವಸತಿ ಪ್ರದೇಶವನ್ನು ಪ್ರತಿನಿಧಿಸುವ ವಾರ್ಡಿನ ಚುನಾಯಿತ ಸದಸ್ಯ ಆ ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕು

III) ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಇಲ್ಲವೆ 20 ಸದಸ್ಯರು ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆಯಲ್ಲಿ ಕೋರಂ ಇರಬೇಕು

ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಆರಿಸಿ:

A
I ಮಾತ್ರ
B
I & II ಮಾತ್ರ
C
II & III ಮಾತ್ರ
D
ಮೇಲಿನ ಎಲ್ಲವೂ
Question 10 Explanation: 
ಮೇಲಿನ ಎಲ್ಲವೂ:

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಪ್ರಕರಣ “3ಬಿ” ಪ್ರಕಾರ ಜನವಸತಿ ಸಭಾಗಳು ಆರು ತಿಂಗಳಿಗೆ ಕನಿಷ್ಠ ಒಂದು ಸಲ ಸಭೆ ಸೇರಬೇಕು. ಆಯಾ ಜನವಸತಿ ಪ್ರದೇಶವನ್ನು ಪ್ರತಿನಿಧಿಸುವ ವಾರ್ಡಿನ ಚುನಾಯಿತ ಸದಸ್ಯ ಆ ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕು. ಒಂದು ವೇಳೆ ಅಂತಹ ಸದಸ್ಯ ಜನವಸತಿ ಸಭೆಯನ್ನು ಕರೆಯಲು ವಿಫಲವಾದರೆ ಪಿ.ಡಿ.ಓ/ಕಾರ್ಯದರ್ಶಿ ಸಭೆಯನ್ನು ಕರೆಯತಕ್ಕದ್ದು ಹಾಗೂ ಆ ಸಭೆಯಲ್ಲಿ ಉಪಸ್ಥಿತಿಯಿರುವ ಇತರೆ ಸದಸ್ಯರಲ್ಲಿ ಒಬ್ಬರು ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಇಲ್ಲವೆ 20 ಸದಸ್ಯರು ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆಯಲ್ಲಿ ಕೋರಂ ಇರಬೇಕು. ಅವರ ಪೈಕಿ ಶೇ ಮೂವತ್ತಕ್ಕೆ ಕಡಿಮೆ ಇಲ್ಲದಷ್ಟು ಮಹಿಳೆಯರು ಇರತಕ್ಕದ್ದು ಮತ್ತು ಅನುಸೂಚಿ ಜಾತಿ ಹಾಗೂ ಪಂಗಂಡಗಳ ವ್ಯಕ್ತಿಗಳ ಅವರ ಜನಸಂಖ್ಯೆಯ ದಾಮಾಷಾ ಪ್ರಮಾಣಕ್ಕೆ ಅನುಸಾರವಾಗಿ ಸಭೆಯಲ್ಲಿ ಇರತಕ್ಕದ್ದು. ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವುದು, ನೈರ್ಮಲ್ಯ ಕಾಪಾಡಲು ಸಲಹೆ ನೀಡುವುದು, ವಸತಿ ಪ್ರದೇಶಕ್ಕೆ ಅಗತ್ಯವಾದ ಯೋಜನೆ ರೂಪಿಸುವುದು, ಬೀದಿದೀಪಗಳ ನಿರ್ವಹಣೆ, ನೀರಿನ ಪೂರೈಕೆ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಜನವಸತಿ ಸಭಾದ ಕರ್ತವ್ಯಗಳಾಗಿವೆ’.

There are 10 questions to complete.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

16 Responses to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-7”

 1. Anonymous says:

  very nice jobs sir and useful tips

 2. ಸಂತೋಷ್ ಗೌಡರ says:

  ಧನ್ಯವಾದಗಳು ಸರ್ ನಿಮ್ಮ ಈ ಪ್ರಯೋಗಕ್ಕೆ

 3. krishna says:

  Too usefull ….thanks for giving information….

 4. Anonymous says:

  Tq sir

 5. savitha ML says:

  Edake answer s helli sir Plz

 6. santosh says:

  Thumbaa dannywaadagalu Sir

 7. Hemanthu says:

  Karunadu exam please heli navu pdo 2nd paper ge 1993 thiddupadi ya visyavanna odhikollabeka, Athava 2015 ne thiddupadiya visayavanna odhikobeka…?
  Nanu KEA navara syllabus copy nalli nodiruvanthe 1993 visyada mele nu kuda adyaya madi antha idhe so please doubt clear madi….

 8. ಹಾದಿಮನಿ ವಸಂತ says:

  ಶವನ್ನು ಪ್ರತಿನಿಧಿಸುವ ವಾರ್ಡಿನ ಚುನಾಯಿತ ಸದಸ್ಯ ಆ ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕು. ಒಂದು ವೇಳೆ ಅಂತಹ ಸದಸ್ಯ ಜನವಸತಿ ಸಭೆಯನ್ನು ಕರೆಯಲು ವಿಫಲವಾದರೆ ಪಿ.ಡಿ.ಓ/ಕಾರ್ಯದರ್ಶಿ ಸಭೆಯನ್ನು ಕರೆಯತಕ್ಕದ್ದು ಹಾಗೂ ಆ ಸಭೆಯಲ್ಲಿ ಉಪಸ್ಥಿತಿಯಿರುವ ಇತರೆ ಸದಸ್ಯರಲ್ಲಿ ಒಬ್ಬರು ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಇಲ್ಲವೆ 20 ಸದಸ್ಯರು ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆಯಲ್ಲಿ ಕೋರಂ ಇರಬೇಕು. ಅವರ ಪೈಕಿ ಶೇ ಮೂವತ್ತಕ್ಕೆ ಕಡಿಮೆ ಇಲ್ಲದಷ್ಟು

 9. Shreedhar says:

  Tq so much sir

 10. Mudduraj says:

  Nice question

 11. Gururaj says:

  Thank you. Good job sir. It’s very useful to us… Cont…your work

 12. ರಾಜೇಂದ್ರ ಪ್ರಸಾದ್. says:

  ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993ರ ಮೊದಲನೆ ತಿದ್ದುಪಡಿಯ ಸಮಿತಿಯ ಬಗ್ಗೆ ಮಾಹಿತಿ ನೀಡಿ ಸರ್.

 13. vishalakshi says:

  sir plz add this no to your wts app group 9986674374 plz plz

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.