ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-6

ಪಿಡಿಓ ಮತ್ತು ಕಾರ್ಯದರ್ಶಿ ಸೇರಿ ಸುಮಾರು 1400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿದು ಬಂದಿದೆ. ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-6

Question 1

1.ನಿರ್ಮಲಾ ಎಂಬ ಪರಿಶಿಷ್ಠ ಜಾತಿಗೆ ಸೇರಿದ ಮಹಿಳೆಯು ಸ್ವಚ್ಚ ಭಾರತ ಮಿಷನ್ ಅಡಿ ಶೌಚಾಲಯವನ್ನು ನಿರ್ಮಿಸಿಕೊಂಡಿದ್ದು, ಪ್ರೋತ್ಸಾಹಧನಕ್ಕಾಗಿ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದಾಳೆ. ಪಂಚಾಯತಿಯು ಈಕೆಗೆ ಎಷ್ಟು ಹಣ ಮಂಜೂರು ಮಾಡಬೇಕು?

A
ರೂ 12,000/-
B
ರೂ 15,000/-
C
ರೂ 18,000/-
D
ರೂ 20,000/-
Question 1 Explanation: 
ರೂ 15,000/- :

ಸ್ವಚ್ಚ ಭಾರತ ಅಭಿಯಾನದಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಾದ ರೂ 9000 ಮತ್ತು ರೂ 3000 ಗಳಂತೆ ಒಟ್ಟು ರೂ 12,000 ಪ್ರೋತ್ಸಾಹ ಧನವನ್ನು ಬಿಪಿಎಲ್ ಮತ್ತು ನಿರ್ಬಂಧಿತ ಎಪಿಎಲ್ ಫಲಾನುಭವಿಗಳ ವೈಯುಕ್ತಿಕ ಶೌಚಾಲಯಕ್ಕೆ ನೀಡಲಾಗುತ್ತದೆ. ರೂ 15,000 ವನ್ನು ಪರಿಶಿಷ್ಠ ಜಾತಿ ಮತ್ತು ಪಂಗಡ ಹಾಗೂ ಗಿರಿಜನ ಉಪ ಯೋಜನೆ ಫಲಾನುಭವಿಗಳಿಗೆ ನೀಡಲಾಗುತ್ತದೆ.

Question 2

2.ಸತೀಶ್ MGNREGA ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಗ್ರಾಮ ಪಂಚಾಯತಿಯು ಅರ್ಜಿ ಪಡೆದ ಎಷ್ಟು ದಿನದೊಳಗೆ ಕೆಲಸವನ್ನು ನೀಡಬೇಕು?

A
ಏಳು ದಿನ
B
ಹತ್ತು ದಿನ
C
ಹದಿನೈದು ದಿನ
D
ಇಪ್ಪತ್ತು ದಿನ
Question 2 Explanation: 
ಹದಿನೈದು ದಿನ:

ಯಾವುದೇ ಒಬ್ಬ ಅರ್ಜಿದಾರ MGNREGA ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಹದಿನೈದು ದಿನಗಳ ಅವಧಿಯ ಒಳಗಾಗಿ ಉದ್ಯೋಗವನ್ನು ಒದಗಿಸಬೇಕು. ಒಂದು ವೇಳೆ ಗ್ರಾಮ ಪಂಚಾಯತಿಯು ಉದ್ಯೋಗವನ್ನು ನೀಡದೆ ಹೋದರೆ ಅರ್ಜಿದಾರ ದಿನಂಪ್ರತಿ ನಿರುದ್ಯೋಗ ಭತ್ಯೆಪಡೆಯಲು ಅರ್ಹರಾಗಿರುತ್ತಾರೆ. MGNREGA ಕಾಯಿದೆ ಪ್ರಕರಣ 7ರ ಅನ್ವಯ ನಿರುದ್ಯೋಗವನ್ನು ಭತ್ಯೆಯನ್ನು ನೀಡಲಾಗುತ್ತದೆ.

Question 3

3.ಪಂಚಾಯತ್ ವ್ಯವಸ್ಥೆಗೆ ಸಂಬಂಧಿಸಿದ ಸಂವಿಧಾನದ 11 ನೇ ಅಧಿಸೂಚನೆಯು ಎಷ್ಟು ಅಂಶಗಳನ್ನು ಒಳಗೊಂಡಿದೆ?

A
21
B
25
C
29
D
30
Question 3 Explanation: 
29:

ಸಂವಿಧಾನದ 11 ನೇ ಅಧಿಸೂಚನೆಯು 29 ಅಂಶಗಳನ್ನು ಒಳಗೊಂಡಿದೆ.

Question 4

4.MGNREGA ಕಾಯಿದೆಯಂತೆ ಒಟ್ಟು ಯೋಜನಾ ವೆಚ್ಚದಲ್ಲಿ ಕನಿಷ್ಟ ಶೇ_____ ಹಣವನ್ನು ಕೆಲಸಗಾರರ ಮಾನವ ದಿನಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ?

A
ಶೇ 40%
B
ಶೇ 50%
C
ಶೇ 60%
D
ಶೇ 70%
Question 4 Explanation: 
ಶೇ 50%:

MGNREGA ಕಾಯಿದೆಯಂತೆ ಒಟ್ಟು ಯೋಜನಾ ವೆಚ್ಚದಲ್ಲಿ ಕನಿಷ್ಟ ಶೇ 50% ಹಣವನ್ನು ಕೆಲಸಗಾರರ ಮಾನವ ದಿನಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

Question 5

5.ಸಂವಿಧಾನದ 73ನೇ ತಿದ್ದುಪಡಿಯ 243(ಡಿ) ಅನುಚ್ಛೇದ ಪ್ರಕಾರ ಈ ಕೆಳಗಿನ ಯಾರಿಗೆ ಮೀಸಲಾತಿ ಲಭಿಸುತ್ತದೆ?

A
ಪರಿಶಿಷ್ಟ ಜಾತಿ
B
ಪರಿಶಿಷ್ಟ ಬುಡಕಟ್ಟುಗಳು
C
ಹಿಂದುಳಿದ ವರ್ಗಗಳು
D
ಎ ಮತ್ತು ಆ
Question 5 Explanation: 
ಎ ಮತ್ತು ಆ:

ಸಂವಿಧಾನದ 73ನೇ ತಿದ್ದುಪಡಿಯ 243 (ಡಿ) ಅನುಚ್ಚೇದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಮೀಸಲಾತಿ ಕಲ್ಪಿಸುವ ಅವಕಾಶವನ್ನು ನೀಡಿದೆ. ಅನುಚ್ಚೇದದಡಿ 1/3 ರಷ್ಟು ಕಡಿಮೆ ಇಲ್ಲದಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಮೀಸಲಿಡಬೇಕು.

Question 6

6.ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993ರ ಯಾವ ಅನುಚ್ಛೇದವೂ ನೀರಿನ ಸರಬರಾಜಿಗೆ ಸಂಬಂಧಿಸಿದ ಉಪನಿಯಮಗಳನ್ನು ರೂಪಿಸುವ ಅಧಿಕಾರವನ್ನು ಗ್ರಾಮ ಪಂಚಾಯತಿಗೆ ನೀಡಿದೆ?

A
68ನೇ ಅನುಚ್ಛೇದ
B
70ನೇ ಅನುಚ್ಛೇದ
C
78ನೇ ಅನುಚ್ಛೇದ
D
80ನೇ ಅನುಚ್ಛೇದ
Question 6 Explanation: 
78ನೇ ಅನುಚ್ಛೇದ:

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993ರ 78ನೇ ಅನುಚ್ಛೇದ ಸರ್ಕಾರವು ರಚಿಸಬಹುದಾದಂಥ ನಿಯಮಗಳಿಗೊಳಪಟ್ಟು ಗ್ರಾಮ ಪಂಚಾಯತಿಯು ತನ್ನ ಪರಿಮಿತಿಗಳೊಳಗೆ ಅಥವಾ ಅದರ ಹೊರಗೆ ಆಗಲಿ ನೀರು ಸರವರಾಜಿನ ಮೂಲಗಳು ಮತ್ತು ಸಾಧನಗಳು ಮತ್ತು ನೀರಿನ ವಿತರಣೆ ಸಾಧನ ಸಾಮಾಗ್ರಿಗಳನ್ನು ಸಂರಕ್ಷಿಸಲು, ಪೋಲಾಗುವುದನ್ನು ತಡೆಯುವುದಕ್ಕೆ ಉಪವಿಧಿಗಳನ್ನು ರಚಿಸಬಹುದು.

Question 7

7.ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿಯ ಚುನಾವಣೆಗಳು ______?

A
ಪಕ್ಷದ ಆಧಾರದ ಮೇಲೆ ನಡೆಯುತ್ತವೆ
B
ಪಕ್ಷದ ಚಿಹ್ನೆಗಳ ಅನ್ವಯ ನಡೆಯುತ್ತವೆ
C
ಪಕ್ಷರಹಿತ ಆಧಾರದ ಮೇಲೆ ನಡೆಯುತ್ತವೆ
D
ನಾಮನಿರ್ದೇಶನದ ಪ್ರಕಾರ ನಡೆಸಲಾಗುತ್ತದೆ
Question 7 Explanation: 
ಪಕ್ಷರಹಿತ ಆಧಾರದ ಮೇಲೆ ನಡೆಯುತ್ತವೆ:

ರಾಜ್ಯದ ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಚುನಾವಣೆಗಳು ಪಕ್ಷರಹಿತ ಆಧಾರದ ಮೇಲೆ ನಡೆಯುತ್ತವೆ.

Question 8

8.ಅಬ್ದುಲ್ ನಜೀರ್ ಸಾಬ್ ಸ್ಟೇಟ್ ಇನ್ ಸ್ಟಿಟ್ಯೂಟ್ ಆಫ್ ರೂರಲ್ ಡೆವಲಫ್ಮೆಂಟ್ ಎಲ್ಲಿದೆ?

A
ಮೈಸೂರು
B
ಚಿತ್ರದುರ್ಗ
C
ಬೆಂಗಳೂರು
D
ಬಳ್ಳಾರಿ
Question 8 Explanation: 
ಮೈಸೂರು:

ಅಬ್ದುಲ್ ನಜೀರ್ ಸಾಬ್ ಸ್ಟೇಟ್ ಇನ್ ಸ್ಟಿಟ್ಯೂಟ್ ಆಫ್ ರೂರಲ್ ಡೆವಲಫ್ಮೆಂಟ್ ಮೈಸೂರಿನಲ್ಲಿದೆ. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾಯಿತಿ ಸದಸ್ಯರಿಗೆ ತರಭೇತಿ ನೀಡುವುದು ಈ ಸಂಸ್ಥೆಯ ಮುಖ್ಯ ಕಾರ್ಯವಾಗಿದೆ.

Question 9

9.ಗ್ರಾಮ ಪಂಚಾಯತಿಯ ಆದಾಯ ಮತ್ತು ವೆಚ್ಚದ ಬಜೆಟ್ ಅನ್ನು ಈ ಕೆಳಕಂಡ ಯಾವ ಅವಧಿಯಲ್ಲಿ ನಡೆಯುವ ಸಭೆಯಲ್ಲಿ ಮಂಡಿಸಬೇಕು?

A
ಜನವರಿ ಮೊದಲನೇ ದಿನ ಮತ್ತು ಫೆಬ್ರವರಿ ಹತ್ತನೇ ದಿನ
B
ಫೆಬ್ರವರಿ ಮೊದಲನೇ ದಿನ ಮತ್ತು ಮಾರ್ಚ್ ಹತ್ತನೇ ದಿನ
C
ಮಾರ್ಚ್ ಮೊದಲನೇ ದಿನ ಮತ್ತು ಏಪ್ರಿಲ್ ಹತ್ತನೇ ದಿನ
D
ಮೇಲಿನ ಯಾವುದು ಅಲ್ಲ
Question 9 Explanation: 
ಫೆಬ್ರವರಿ ಮೊದಲನೇ ದಿನ ಮತ್ತು ಮಾರ್ಚ್ ಹತ್ತನೇ ದಿನ:

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993ರ 241 ಅನುಚ್ಛೇದದ ಪ್ರಕಾರ ಗ್ರಾಮ ಪಂಚಾಯತಿಯ ಆದಾಯ ಮತ್ತು ವೆಚ್ಚದ ಬಜೆಟ್ ಅನ್ನು ಫೆಬ್ರವರಿ ಮೊದಲನೇ ದಿನ ಮತ್ತು ಮಾರ್ಚ್ ಹತ್ತನೇ ದಿನದ ನಡುವೆ ನಡೆಯುವ ಸಭೆಯಲ್ಲಿ ಮಂಡಿಸತಕ್ಕದ್ದು.

Question 10

10.ಪ್ರಸ್ತುತ ಕರ್ನಾಟಕದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅಧಿಕಾರವದಿ ಎಷ್ಟು ವರ್ಷ?

A
ಎರಡು ವರ್ಷ
B
ಮೂರು ವರ್ಷ
C
ಎರಡುವರೆ ವರ್ಷ
D
ಐದು ವರ್ಷ
Question 10 Explanation: 
ಐದು ವರ್ಷ:

ಪ್ರಸ್ತುತ ಕರ್ನಾಟಕದಲ್ಲಿ ಗ್ರಾಮ ಪಂಚಾಯತ್, ತಾಲ್ಲೂಕ್ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಕಾಲಾವಧಿ ಐದು ವರ್ಷ.

There are 10 questions to complete.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

33 Responses to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-6”

 1. mahesh says:

  Thanks…

 2. anjaneya says:

  Thank u lot sir

 3. ಸಂತೋಷ್ ಗೌಡರ says:

  ಧನ್ಯವಾದಗಳು ಸರ್

 4. muttanna says:

  ಧನ್ಯವಾದಗಳು

 5. subhas.jogi says:

  ತುಂಬಾ ಉಪಯುಕ್ತವಾಗಿದೆ ,ಅನಂತ ಧನ್ಯವಾದಗಳು

 6. manju says:

  ಧನ್ಯವಾದಗಳು

 7. Vishwa Sasimath says:

  Dannevadagalu sir

 8. Bannayya says:

  ಧನ್ಯವಾದಗಳು

 9. Giriyappa Bhagavati says:

  Very smrt qustion thanks

 10. Adharsha bm says:

  Thanks sir

 11. shivu patil says:

  Supr

 12. Prabhu h says:

  Thanks sir

 13. Anonymous says:

  thanks karunadu

 14. Sanjeev k says:

  Thanks

 15. mahesha r says:

  sir next update yavaga

 16. reddy says:

  Super sir .

 17. Sreenivasa says:

  Thanks to karunudu & Who ever update quations.

 18. Sreenivasa says:

  Thanks to karunudu

 19. Suresha says:

  Thanks karunadu

 20. ಹಾದಿಮನಿ ವಸಂತ says:

  Thanks sir

 21. Shanthakumar.D says:

  ಉಪಯುಕ್ತ ಮಾಹಿತಿ. ನಿಮ್ಮ ಕಡೆಯಿಂದ ಮತ್ತಷ್ಟು ಮಾಹಿತಿಯ ನಿರೀಕ್ಷೆಯಲಿ.

 22. ಹಾದಿಮನಿ ವಸಂತ says:

  Good morning..

 23. ನೇತ್ರಾವತಿ.ಆರ್. says:

  ತುಂಬಾ ಅನುಕೂಲವಾಗಿದೆ ಧನ್ಯವಾದಗಳು.

 24. Thank u most expeted qusations for all this

 25. Bagura Raghava says:

  thank u karunadu team

 26. umeshndt@gmail.com says:

  nice

 27. sandeep says:

  THQ 4all

 28. Mudduraj says:

  ಧನ್ಯವಾದಗಳು ಸರ್

 29. Sathya says:

  Congrats and thanks for you. Because your service is going on well.

Leave a Reply

Your email address will not be published. Required fields are marked *