ಕ್ವಿಜ್ ರಾಜ್ಯ , ಕೇಂದ್ರ ಸರ್ಕಾರ ಮತ್ತು ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -2

Question 1
1. 2011 ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದ ಜನ ಸಾಂದ್ರತೆ ಎಷ್ಟು?
A
350
B
320
C
319
D
370
Question 1 Explanation: 
319
Question 2
2. ವಿಸ್ತೀರ್ಣತೆಯಲ್ಲಿ ರಾಜ್ಯದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನ ಯಾವುದು?
A
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
B
ಬಂಡೀಪುರ ರಾಷ್ಟ್ರೀಯ ಉದ್ಯಾನವನ
C
ಅಂಶಿ ರಾಷ್ಟ್ರೀಯ ಉದ್ಯಾನವನ
D
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
Question 2 Explanation: 
ಬಂಡೀಪುರ ರಾಷ್ಟ್ರೀಯ ಉದ್ಯಾನವನ: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವಿಸ್ತೀರ್ಣತೆಯಲ್ಲಿ ರಾಜ್ಯದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನ. ಇದರ ಒಟ್ಟು ವಿಸ್ತೀರ್ಣ 872.24 ಚದರ ಕಿ.ಮೀ.
Question 3
3. ಕರ್ನಾಟಕದ ಕೃಷಿ ನೀರಾವರಿ ಕ್ಷೇತ್ರದಲ್ಲಿ ಎಲ್ಲಾ ನೀರಾವರಿ ಮೂಲಗಳ ಪೈಕಿ ಯಾವ ಕ್ಷೇತ್ರದ ಪಾಲು ಅಧಿಕವಾಗಿದೆ?
A
ಕೊಳವೆ/ಕೊರೆದ ಬಾವಿ
B
ನೀರಾವರಿ ಕಾಲುವೆ
C
ತೋಡಿದ ಬಾವಿ
D
ಕೆರೆಗಳು
Question 3 Explanation: 
ಕೊಳವೆ/ಕೊರೆದ ಬಾವಿ: ರಾಜ್ಯದ ನಿವ್ವಳ ನೀರಾವರಿ ಕ್ಷೇತ್ರದಲ್ಲಿ ಎಲ್ಲಾ ನೀರಾವರಿ ಮೂಲಗಳ ಪೈಕಿ ಕೊಳವೆ/ಕೊರೆದ ಬಾವಿ ಬಾವಿಗಳಿಂದ ನೀರಾವರಿಯಾಗುವ ಪಾಲು ಶೇ 37% ರಷ್ಟಿದ್ದು ಅಧಿಕವಾಗಿದೆ. ಎರಡನೇ ಪ್ರಮುಖ ನೀರಾವರಿ ಮೂಲ ನೀರಾವರಿ ಕಾಲುವೆಗಳು (ಶೇ 35%), ತೋಡಿದ ಬಾವಿಗಳು ಶೇ 12 ರಷ್ಟಿದೆ.
Question 4
4. ಯಾವ ವರ್ಷ ರಾಜ್ಯದಲ್ಲಿ ಲಿಂಗಧಾರಿತ ಆಯವ್ಯಯವನ್ನು ಮೊದಲ ಬಾರಿಗೆ ಮಂಡಿಸಲಾಯಿತು?
A
2006-07
B
2007-08
C
2008-09
D
2009-10
Question 4 Explanation: 
2006-07: ಲಿಂಗಧಾರಿತ ಆಯವ್ಯಯವನ್ನು ಕರ್ನಾಟಕ ರಾಜ್ಯ ಸರ್ಕಾರ 2006-07 ರಿಂದ ಮಂಡಿಸುತ್ತಿದ್ದು, ಲಿಂಗಧಾರಿತ ಆಯವ್ಯಯ ಮಂಡಿಸಿದ ಮೊದಲ ರಾಜ್ಯವೆನಿಸಿದೆ.
Question 5
5. ಕರ್ನಾಟಕದ ಮಲ್ಟಿ ಸೆಕ್ಟರಲ್ ಸ್ಟಾರ್ಟ್ಆಪ್ ನೀತಿ 2015-2020 ರ ಪ್ರಕಾರ ರಾಜ್ಯದಲ್ಲಿ 2020 ರ ವೇಳೆಗೆ ಎಷ್ಟು ಸ್ಟಾರ್ಟ್ ಆಪ್ ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ?
A
10,000
B
20,000
C
15,000
D
25,000
Question 5 Explanation: 
20,000: ಕರ್ನಾಟಕ ರಾಜ್ಯದ ಮಲ್ಟಿ ಸೆಕ್ಟರಲ್ ಸ್ಟಾರ್ಟ್ಆಪ್ ನೀತಿ 2015-2020 ರ ಪ್ರಕಾರ ರಾಜ್ಯದಲ್ಲಿ 2020 ರ ವೇಳೆಗೆ 20,000 ಸ್ಟಾರ್ಟ್ ಆಪ್ ಅನ್ನು ಸ್ಥಾಪಿಸುವ ಗುರಿಹೊಂದಿದೆ. ಮಲ್ಟಿ ಸೆಕ್ಟರಲ್ ಸ್ಟಾರ್ಟ್ಆಪ್ ನೀತಿಯನ್ನು ದೇಶದಲ್ಲಿ ಪ್ರಥಮ ಬಾರಿಗೆ ಜಾರಿಗೆ ತಂದ ರಾಜ್ಯ ಕರ್ನಾಟಕ.
Question 6
6. ಕರ್ನಾಟಕವು ದೇಶದಲ್ಲೆ ನೂತನ ಜವಳಿ ನೀತಿಯನ್ನು ತಂದ ಮೊದಲ ರಾಜ್ಯ. ಕರ್ನಾಟಕದ ನೂತನ ಜವಳಿ ನೀತಿ ಜಾರಿ ಇರುವ ವರ್ಷ______?
A
2013-18
B
2014-19
C
2015-20
D
2012-17
Question 6 Explanation: 
2013-18: ಕರ್ನಾಟಕದ ನೂತನ ಜವಳಿ ನೀತಿ 2013-18 ಆಗಿದ್ದು, ಜವಳಿ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ.
Question 7
7. ಕರ್ನಾಟಕದಲ್ಲಿ ವಾರ್ಷಿಕ ಮುಖ್ಯಮಂತ್ರಿ ಪ್ರಶಸ್ತಿಯನ್ನು ಪ್ರತಿ ವರ್ಷ ಎಷ್ಟು ಸಾರ್ವಜನಿಕ ಉದ್ದಿಮೆಗಳಿಗೆ ನೀಡಲಾಗುತ್ತಿದೆ?
A
ಒಂದು
B
ಮೂರು
C
ಐದು
D
ನಾಲ್ಕು
Question 7 Explanation: 
ಮೂರು: ವಾರ್ಷಿಕ ಮುಖ್ಯಮಂತ್ರಿ ಪ್ರಶಸ್ತಿಯನ್ನು ಪ್ರತಿ ವರ್ಷ ಮೂರು ಸಾರ್ವಜನಿಕ ಉದ್ದಿಮೆಗಳಿಗೆ ನೀಡಲಾಗುತ್ತಿದೆ.
Question 8
8. ಈ ಕೆಳಗಿನ ಯಾವ ಜಿಲ್ಲೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಒಳಪಡುವುದಿಲ್ಲ?
A
ಗದಗ
B
ವಿಜಯಪುರ
C
ಕಲ್ಬುರ್ಗಿ
D
ಬೀದರ್
Question 8 Explanation: 
ಗದಗ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಡಿಲ್ಲಿ ಕಲ್ಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳು ಒಳಪಡುತ್ತವೆ.
Question 9
9. ಡಾ. ನಂಜುಂಡಪ್ಪ ರವರ ವರದಿಯ ಮೇರೆಗೆ ರಾಜ್ಯದಲ್ಲಿ ಎಷ್ಟು ತಾಲ್ಲೂಕಗಳನ್ನು ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಲಾಗಿದೆ?
A
110
B
114
C
121
D
125
Question 9 Explanation: 
114: ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಸಲುವಾಗಿ ರಾಜ್ಯ ಸರ್ಕಾರ ಡಾ. ನಂಜುಂಡಪ್ಪರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಸಮಿತಿಯು 2002 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಈ ಸಮಿತಿಯು 35 ಸೂಚಕಗಳಿಗೆ ಸೂಕ್ತ ತೂಕವನ್ನು ನೀಡಿ ಸಮಗ್ರ ಸಂಯುಕ್ತ ಅಭಿವೃದ್ದಿ ಸೂಚ್ಯಂಕವನ್ನು ಅಂದಾಜಿಸಿ ರಾಜ್ಯದಲ್ಲಿ 114 ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕಗಳೆಂದು ಗುರುತಿಸಿದೆ.
Question 10
10. ಕೆಳಗಿನ ಯಾವ ಸೂತ್ರವನ್ನು ಅನುಸರಿಸಿ ರಾಜ್ಯದಲ್ಲಿ ರಾಜ್ಯ ಆಂತರಿಕ ಉತ್ಪನ್ನವನ್ನು ಮಾರುಕಟ್ಟೆ ದರದಲ್ಲಿ ತಯಾರಿಸಲಾಗುತ್ತಿದೆ?
A
GSDP= Gross State Value added at basic prices + Product Taxes –Product Subsidies
B
GSDP= Gross State Value added at basic prices - Product Taxes + Product Subsidies
C
GDSP= Gross State Value added at basic prices + Product Taxes + Product Subsidies
D
GDSP= Gross State Value added at basic prices - Product Taxes - Product Subsidies
Question 10 Explanation: 
GSDP= Gross State Value added at basic prices + Product Taxes –Product Subsidies
There are 10 questions to complete.