ಕ್ವಿಜ್ ರಾಜ್ಯ , ಕೇಂದ್ರ ಸರ್ಕಾರ ಮತ್ತು ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -1

Question 1
1. ಇತ್ತೀಚೆಗೆ ಈ ಕೆಳಗಿನ ಯಾರನ್ನು ಪ್ರತಿಷ್ಟಿತ ನೃಪತುಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ?
A
ಡಾ. ಟಿ. ವಿ ವೆಂಕಟಚಲ ಶಾಸ್ತ್ರಿ
B
ಚಂದ್ರಶೇಖರ ಕಂಬಾರ
C
ವೈದೇಹಿ
D
ಸುಧಾ ಮೂರ್ತಿ
Question 1 Explanation: 
ಡಾ. ಟಿ. ವಿ ವೆಂಕಟಚಲ ಶಾಸ್ತ್ರಿ: ಖ್ಯಾತ ವಿದ್ವಾಂಸರಾದ ಡಾ.ಟಿ.ವಿ ವೆಂಕಟಚಲ ಶಾಸ್ತ್ರಿ ರವರನ್ನು ಪ್ರತಿಷ್ಟಿತ ನೃಪತುಂಗ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ನೃಪತುಂಗ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸ್ಥಾಪಿಸಿದ್ದು, ಪ್ರಶಸ್ತಿಯು ರೂ 7 ಲಕ್ಷ ನಗದನ್ನು ಒಳಗೊಂಡಿದೆ. ದೇ ಜವರೇಗೌಡರು ಈ ಪ್ರಶಸ್ತಿಯನ್ನು ಪಡೆದ ಮೊದಲಿಗರು.
Question 2
2. ಈ ಕೆಳಗಿನ ಯಾರು ಕರ್ನಾಟಕ ಉಚ್ಚ ನ್ಯಾಯಾಲಯದ ಈಗಿನ ಮುಖ್ಯ ನ್ಯಾಯಾಧೀಶರು?
A
ನ್ಯಾ. ಎಚ್.ಡಿ. ವಘೇಲಾ
B
ನ್ಯಾ. ಎಸ್.ಕೆ. ಮುಖರ್ಜಿ
C
ನ್ಯಾ. ನಾಗರತ್ನ
D
ನ್ಯಾ. ಚಂದ್ರಕಾಂತ್ ಚಿಂಚೊಳ್ಳಿ
Question 2 Explanation: 
ನ್ಯಾ. ಎಸ್.ಕೆ. ಮುಖರ್ಜಿ: ನ್ಯಾಯಮೂರ್ತಿ ಸುಬ್ರೊ ಕಮಲ್ ಮುಖರ್ಜಿ ಅವರು ಕರ್ನಾಟಕ ಉಚ್ಚನ್ಯಾಯಾಲಯದ ಪ್ರಸ್ತುತ ಮುಖ್ಯ ನ್ಯಾಯಾಧೀಶರಾಗಿದ್ದಾರೆ.
Question 3
3. ಕರ್ನಾಟಕದ ಮೊದಲ ಸ್ಕಿನ್ ಬ್ಯಾಂಕ್ (Skin Bank) ಅನ್ನು ಇತ್ತೀಚೆಗೆ ಎಲ್ಲಿ ತೆರೆಯಲಾಯಿತು?
A
ಮಣಿಪಾಲ್ ಆಸ್ಪತ್ರೆ
B
ವಿಕ್ಟೋರಿಯಾ ಆಸ್ಪತ್ರೆ
C
ಕೊಲೊಂಬಿಯ ಏಷಿಯಾ
D
ವಾಣಿ ವಿಲಾಸ್ ಆಸ್ಪತ್ರೆ
Question 3 Explanation: 
ವಿಕ್ಟೋರಿಯಾ ಆಸ್ಪತ್ರೆ: ಬೆಂಗಳೂರಿನ ವಿಕ್ಟೋರಿತಯಾ ಆಸ್ಪತ್ರೆ ರಾಜ್ಯದ ಮೊದಲ ಸ್ಕಿನ್ ಬ್ಯಾಂಕ್ ವ್ಯವಸ್ಥೆ ಹೊಂದಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಆಕಸ್ಮಿಕವಾಗಿ ಬೆಂಕಿಗೆ ತುತ್ತಾದವರು ಮತ್ತು ಅಪಘಾತದಿಂದ ಗಾಯಗೊಂಡವರಿಗೆ ಈ ಸೇವೆ ಅತ್ಯಂತ ಉಪಯುಕ್ತವಾಗಲಿದೆ.
Question 4
4. ಪ್ರಸ್ತಕ ಸಾಲಿನ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ನೀಡುವ ಬೇಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
A
ಡಾ. ಚೆನ್ನವೀರ ಕಣವಿ
B
ಡಾ. ಜಿ. ಎಸ್ ಅಮೂರ
C
ಡಾ. ಟಿ. ವಿ ವೆಂಕಟಚಲ ಶಾಸ್ತ್ರಿ
D
ಡಾ. ಅನುರೂಪ ಭಟ್
Question 4 Explanation: 
ಡಾ. ಜಿ. ಎಸ್ ಅಮೂರ: ಹಿರಿಯ ವಿಮರ್ಶಕ ಡಾ. ಜಿ.ಎಸ್. ಅಮೂರ ಅವರನ್ನು ಪ್ರಸ್ತಕ ಸಾಲಿನ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ನೀಡುವ ಬೇಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ರೂ 1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
Question 5
5. ಇತ್ತೀಚೆಗೆ ಜಾರಿಗೆ ತಂದ ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆಗೆ ಸಂಬಂಧಿಸಿದಂತೆ ಈ ಹೇಳಿಕೆಗಳನ್ನು ಗಮನಿಸಿ: i) ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತಾಗಿ ಧನ ಸಹಾಯ ಮಾಡುವುದು ii) ಈ ಯೋಜನೆಯು ಕೇವಲ ಕರ್ನಾಟಕ ರಾಜ್ಯದ ಹಾಗೂ ಬಿಪಿಲ್ ಅರ್ಹತೆ ಇರುವವರಿಗೆ ಮಾತ್ರ iii) ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಜಾರಿಗೊಳಿಸಲಾಗುತ್ತಿದೆ ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ.
A
i ಮಾತ್ರ
B
i & ii ಮಾತ್ರ
C
i & iii ಮಾತ್ರ
D
ಮೇಲಿನ ಎಲ್ಲವೂ
Question 5 Explanation: 
i & iii ಮಾತ್ರ: ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆಯನ್ನು ರಾಜ್ಯ ಸರ್ಕಾರ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಆರ್ಥಿಕವಾಗಿ ನೆರವಾಗುವ ಸಲುವಾಗಿ ಸಲುವಾಗಿ ಜಾರಿಗೆ ತಂದಿದೆ. ಇದೊಂದು ನಗದು ರಹಿತ ಯೋಜನೆಯಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಜನೆಯಡಿ ಸ್ಥಾಪಿಸಲಾಗಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯು ರಾಜ್ಯದಲ್ಲಾಗುವ ಅಪಘಾತಗಳಲ್ಲಿ ರಾಜ್ಯ ವಲ್ಲದೇ ಬೇರೆ ರಾಜ್ಯದ ಜನರಿಗೂ ಮತ್ತು ಬಿಪಿಲ್/ಎಪಿಲ್ ಹೊಂದಿರುವವರಿಗೂ ಅನ್ವಯವಾಗಲಿದೆ. ಒಂದು ಬಾರಿಗೆ ಗರಿಷ್ಟ ರೂ 25,000/ ಗಳವರೆಗೂ ನಗದು ರಹಿತ ಚಿಕಿತ್ಸೆ ನೆರವು ನೀಡಲಾಗುವುದು.
Question 6
6. ದೇಶದ ಮೊದಲ ಹೊಗೆ ರಹಿತ ಗ್ರಾಮ ಎಂಬ ಹೆಗ್ಗಳಿಕೆ ಪಾತ್ರವಾದ ವ್ಯಾಚಕುರಹಳ್ಳಿ ರಾಜ್ಯದ ಯಾವ ಜಿಲ್ಲೆಯಲ್ಲಿದೆ?
A
ಬೆಂಗಳೂರು ಗ್ರಾಮಾಂತರ
B
ಕೋಲಾರ
C
ಚಿಕ್ಕಬಳ್ಳಾಪುರ
D
ಮಂಡ್ಯ
Question 6 Explanation: 
ಚಿಕ್ಕಬಳ್ಳಾಪುರ: ವ್ಯಾಚಕುರಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರುನಲ್ಲಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇತ್ತೀಚೆಗೆ ವ್ಯಾಚಕುರಹಳ್ಳಿಯನ್ನು ದೇಶದ ಮೊದಲ ಹೊಗೆ ರಹಿತ ಗ್ರಾಮವೆಂದು ಘೋಷಿಸಿದೆ. ಇಂಡಿಯ ಆಯಿಲ್ ಕಾರ್ಪೋರೇಷನ್ ಹೊಗೆ ರಹಿತ ಗ್ರಾಮ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ.
Question 7
7. ಹೆಚ್.ಎ.ಎಲ್ ನ ಹೆಲಿಕಾಪ್ಟರ್ ತಯಾರಿಕ ಘಟಕಾ ಸ್ಥಾಪನೆಯಾಗುತ್ತಿರುವ ಜಿಲ್ಲೆ________?
A
ತುಮಕೂರು
B
ಕೋಲಾರ
C
ಚಿತ್ರದುರ್ಗ
D
ಹಾಸನ
Question 7 Explanation: 
ತುಮಕೂರು: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಹೆಲಿಕಾಪ್ಟರ್ ತಯಾರಿಕ ಘಟಕಾ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಸ್ಥಾಪಿತವಾಗುತ್ತಿದೆ. 2018 ರ ವೇಳೆಗೆ ಈ ಘಟಕದಿಂದ ತಯಾರಾಗುವ ಮೊದಲ ಹೆಲಿಕಾಪ್ಟರ್ ಹಾರಾಟ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
Question 8
8. ಕರ್ನಾಟಕ ರಾಜ್ಯವು ಪಾವಗಡದಲ್ಲಿ ಸ್ಥಾಪಿಸುತ್ತಿರುವ ಸೋಲಾರ್ ವಿದ್ಯುತ್ ಉತ್ಪಾದನ ಘಟಕದ ಸಾಮರ್ಥ್ಯವೆಷ್ಟು?
A
1000 ಮೆಗಾ ವ್ಯಾಟ್
B
1500 ಮೆಗಾ ವ್ಯಾಟ್
C
2000 ಮೆಗಾ ವ್ಯಾಟ್
D
500 ಮೆಗಾ ವ್ಯಾಟ್
Question 8 Explanation: 
2000 ಮೆಗಾ ವ್ಯಾಟ್: ಕರ್ನಾಟಕ ರಾಜ್ಯ ಸರ್ಕಾರ ಪಾವಗಡದಲ್ಲಿ ನಿರ್ಮಿಸುತ್ತಿರುವ ಸೋಲಾರ್ ವಿದ್ಯುತ್ ಉತ್ಪಾದನ ಘಟಕದ ಸಾಮರ್ಥ್ಯ 2000 ಮೆಗಾ ವ್ಯಾಟ್. ಸುಮಾರು 10,000 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣಗೊಳ್ಳುತ್ತಿದ್ದು, ದೇಶದಲ್ಲೇ ಅತಿ ದೊಡ್ಡ ಸೋಲಾರ್ ವಿದ್ಯುತ್ ಘಟಕವಾಗಲಿದೆ.
There are 8 questions to complete.